ಕಾರ್ಗಿಲ್ ವಿಜಯೋತ್ಸವಕ್ಕಾಗಿ ಬೆಂಗಳೂರು-ಕಾರ್ಗಿಲ್ ಬೈಕ್ ಪ್ರಯಾಣ

ಬೆಂಗಳೂರು, ಜುಲೈ 2: ಕಾರ್ಗಿಲ್ ವಿಜಯೋತ್ಸವ ದಿವಸದ ಅಂಗವಾಗಿ ಸೇನಾ ಪಡೆಯ ಪೊಲೀಸರ ತಂಡ ಬೆಂಗಳೂರಿನಿಂದ ಕಾರ್ಗಿಲ್‌ಗೆ ಮೋಟಾರ್‌ಸೈಕಲ್ ಪ್ರಯಾಣ ಬೆಳೆಸಿದೆ.

ಐವರು ಅತ್ಯುನ್ನತ ಪರಿಣತ ಬೈಕ್ ರೈಡರ್‌ಗಳ ತಂಡ ಸುಮಾರು 3,250 ಕಿ.ಮೀ. ಹಾದು ಕಾರ್ಗಿಲ್ ವಿಜಯೋತ್ಸವ ದಿವಸವಾದ ಜುಲೈ 24ಕ್ಕೂ ಮುನ್ನ ಕಾರ್ಗಿಲ್ ತಲುಪಲಿದೆ.

ಸೇನಾ ಪೊಲೀಸ್‌ನ ಮೋಟಾರ್ ಸೈಕಲ್ ಪರಿಣತರ 'ಶ್ವೇತಾಶ್ವ' ಪಡೆ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ಹೊರಟಿತು.

bengaluru army corps ride to kargil

ಲೆಫ್ಟಿನೆಂಟ್ ಕರ್ನಲ್ ವಿಕ್ರಮ್ ರಾಜೆಭೋಸ್ಲೆ ಮತ್ತು ಮಿಲಿಟರಿ ಪೊಲೀಸ್‌ನ ಇತರೆ ನಾಲ್ವರು ಪೊಲೀಸ್ ಸಿಬ್ಬಂದಿ ಇತ್ತೀಚೆಗೆ ಬಿಡುಗಡೆಯಾದ 200 ಸಿಸಿಯ ಟಿವಿಎಸ್ ಅಪಾಚೆ ಆರ್‌ಟಿಆರ್ ಬೈಕ್‌ನಲ್ಲಿ ಪ್ರಯಾಣ ಆರಂಭಿಸಿದರು.

ಬೆಂಗಳೂರಿನಿಂದ ಕಾರ್ಗಿಲ್ ನಡುವೆ 20 ದಿನಗಳ ಪ್ರಯಾಣ ನಡೆಸಲಿದ್ದು, ಬೆಳಗಾವಿ, ಪುಣೆ, ಮುಂಬೈ, ವಡೋದರ, ಉದಯಪುರ, ನಜಿರಾಬಾದ್, ನವದೆಹಲಿ, ಚಂಡಿಗಡ, ಮನಾಲಿ, ಸರ್ಚು ಮತ್ತು ಲೆಹ್ ಮೂಲಕ ತೆರಳಲಿದೆ.

ಬ್ರಾತೃತ್ವ ಭಾವನೆಯನ್ನು ಬಲಗೊಳಿಸುವುದು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಹುತಾತ್ಮರಾದ ಯೋಧರ ಬಲಿದಾನಗಳಿಗೆ ಗೌರವ ಸಲ್ಲಿಸುವುದು ಮತ್ತು ಭಾರತೀಯ ಸೇನೆಯ ವರ್ಚಸ್ಸನ್ನು ಹೆಚ್ಚಿಸುವ ಮೂಲಕ ಸೇನೆಗೆ ಸೇರುವಂತೆ ಯುವಜನರನ್ನು ಹುರಿದುಂಬಿಸುವುದು ಈ ಪ್ರಯಾಣದ ಉದ್ದೇಶ ಎಂದು ರಕ್ಷಣಾ ಪಡೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+