ಬೆಂಗಳೂರಿನಲ್ಲಿ ಹಣವಿರುವ ವ್ಯಾನ್‌ದೊಂದಿಗೆ ಚಾಲಕ ಪರಾರಿ

ಸಾರಾಂಶ
ಬ್ಯಾಂಕ್ ಗಳಿಗೆ ಹಣ ಸಾಗಿಸುವ ಈ ವಾಹನ ಚಾಲಕರಿಗೇನಾಗಿದೆ? ಇದ್ದಕ್ಕಿದ್ದಂತೆ ಶ್ರೀಮಂತರಾಗುವ ಅತಿಯಾಶೆಯಿಂದ ಹಣ ತುಂಬಿರುವ ವಾಹನದೊಂದಿಗೆ ಪರಾರಿಯಾಗುತ್ತಿದ್ದಾರೆ. ಒಂದು ತಿಂಗಳಲ್ಲಿ ಹಣದ ವಾಹನದೊಂದಿಗೆ ಪರಾರಿಯಾದ ಎರಡನೇ ಘಟನೆ ನಡೆದಿದೆ.

ಬೆಂಗಳೂರು, ಡಿಸೆಂಬರ್ 18 : ಎಟಿಎಂಗೆ ತುಂಬಬೇಕಾದ ಹಣ ಮತ್ತು ವಾಹನದೊಂದಿಗೆ ವಾಹನ ಚಾಲಕ ಪರಾರಿಯಾದ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ.

20 ಲಕ್ಷ ರು. ಹಣವಿದ್ದ ವಾಹನದೊಂದಿಗೆ ಪಾರಾಗಲು ಖಾಸಗಿ ಕಂಪನಿಯ ಉದ್ಯೋಗಿ ಯತ್ನಿಸಿರುವ ಘಟನೆ ಬೆಂಗಳೂರಿನ ವಿಂಡ್ ಟನ್ನೆಲ್ ರಸ್ತೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಆತ ಹಣ ಮತ್ತು ವಾಹನ ಬಿಟ್ಟು ಪರಾರಿಯಾಗಿದ್ದಾನೆ. [ಡೊಮಿನಿಕ್ ಸೆರೆಯ ಹಿಂದೆ ಡೈನಾಮಿಕ್ ಕಥನ]

Bengaluru: Another ATM driver flees with cash

ಡ್ರೈವರನ್ನು ಅಸ್ಸಾಂ ಮೂಲದ 26 ವರ್ಷದ ಸಬ್ಬಿನ್ ಹುಸೇನ್ ಎಂದು ಗುರುತಿಸಲಾಗಿದೆ. ಆತ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಎಟಿಎಂಗೆ ಹಣ ತುಂಬಿಸುವ ಕಾಯಕದಲ್ಲಿ ಆತ ತೊಡಗಿದ್ದ.

52 ಲಕ್ಷ ರುಪಾಯಿ ಇದ್ದ ವಾಹನ ಮಡಿವಾಳವನ್ನು ಶನಿವಾರ 2 ಗಂಟೆಗೆ ಹೊರಟಿತು. 32 ಲಕ್ಷ ರುಪಾಯಿಗಳನ್ನು ಕೋರಮಂಗಲದ ಎಟಿಎಂನಲ್ಲಿ ತುಂಬಲಾಯಿತು. ಇಲ್ಲಿಂದ ವಿಂಡ್ ಟನ್ನೆಲ್ ರಸ್ತೆಗೆ ಹೊರಟಿತು. ಆ ಸಮಯದಲ್ಲಿ ಅಲ್ಲಿಂದ ಹಣದೊಂದಿಗೆ ಪರಾರಿಯಾಗಲು ಆತ ಯತ್ನಿಸಿದ್ದಾನೆ. [ಹಣದ ಜೊತೆ ಎಟಿಎಂ ವಾಹನ ಅಪಹರಿಸಿದವರು ಸಿಕ್ಕಿಬಿದ್ರು]

Bengaluru: Another ATM driver flees with cash

ನವೆಂಬರ್ 23ರಂದು ಡೊಮಿನಿಕ್ ಎಂಬ ತಮಿಳುನಾಡು ಮೂಲದ ವ್ಯಕ್ತಿ 1.37 ಕೋಟಿ ರುಪಾಯಿಗಳೊಂದಿಗೆ ಪರಾರಿಯಾಗಿದ್ದ. ಕೆಲದಿನಗಳ ನಂತರ ಆತನನ್ನು ಹಣದೊಂದಿಗೆ ಬಂಧಿಸಲಾಯಿತು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+