SWR: ತುರ್ತು ಕಾಮಗಾರಿ, ಬೆಂಗಳೂರು-ಮೈಸೂರು ಕೆಲವು ರೈಲುಗಳ ಸಂಚಾರ ರದ್ದು
ಬೆಂಗಳೂರು: ಮೈಸೂರು ಮತ್ತು ಬೆಂಗಳೂರು ರೈಲು ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಿರುವ ಪ್ರಯುಕ್ತ ಕೆಲವು ರೈಲುಗಳ ಸಂಚಾರ ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ. ಇನ್ನೂ ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ನೈಋತ್ಯ ರೈಲ್ವೆ ವತಿಯಿಂದ ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ಮಧ್ಯ ಲೆವೆಲ್ ಕ್ರಾಸಿಂಗ್ ಸಂಖ್ಯೆ 16ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಹಾಗೂ ಸೂಚನೆ ಸಂಬಂಧಿತ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಅಗತ್ಯವಾಗಿರುವುದರಿಂದ ಡಿಸೆಂಬರ್ 25, 25 ಮತ್ತು 2026 ಜನವರಿ 8 ಮತ್ತು 9 ರಂದು ಕೆಲವು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ರದ್ದಾಗಿವೆ. ಒಂದಷ್ಟು ರೈಲುಗಳ ಕಾರ್ಯಾಚರಣೆಯಲ್ಲಿ ಬದಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರದ್ದಾದ ರೈಲುಗಳು ವಿವರ
* ಡಿಸೆಂಬರ್ 25 ಮತ್ತು 2026 ಜನವರಿ 8 ರಂದು ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ ರೈಲು (56265), ಮೈಸೂರು-ಎಸ್‌ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್ (06269) ಹಾಗೂ ಎಸ್‌ಎಂವಿಟಿ ಬೆಂಗಳೂರು-ಮೈಸೂರು ಪ್ಯಾಸೆಂಜರ್ ಸ್ಪೆಷಲ್ (06270) ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
* ಡಿಸೆಂಬರ್ 26 ಮತ್ತು ಜನವರಿ 9, 2026 ರಂದು ಮೈಸೂರು-ಅರಸೀಕೆರೆ ಪ್ಯಾಸೆಂಜರ್ ರೈಲು (56266) ಹಾಗೂ ಕೆಎಸ್‌ಆರ್ ಬೆಂಗಳೂರು-ಚನ್ನಪಟ್ಟಣ ಮೆಮು ರೈಲು (66535) ಸೇವೆಗಳನ್ನು ಸಹ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
ಸಂಚಾರ ಬದಲಾದ ರೈಲುಗಳ ವಿವರ
* ಡಿಸೆಂಬರ್ 25 ಮತ್ತು ಜನವರಿ 8 ರಂದು ಹೊರಡುವ ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು (06526) ಚನ್ನಪಟ್ಟಣ ಮತ್ತು ಕೆಎಸ್‌ಆರ್ ಬೆಂಗಳೂರು ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ರೈಲು ಚನ್ನಪಟ್ಟಣದಲ್ಲೇ ತನ್ನ ಪ್ರಯಾಣವನ್ನು ಮುಗಿಸುತ್ತದೆ. ಅಲ್ಲಿಂದ ಮುಂದೆ ಎಂದಿನಂತೆ ಸಂಚಾರ ಮಾಡುವುದಿಲ್ಲ.
* ಅಶೋಕಪುರಂ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (16022 ) ಅಶೋಕಪುರಂ ಮತ್ತು ಬೆಂಗಳೂರು ನಡುವಿನ ಸಂಚಾರ ರದ್ದಾಗಿದೆ. ಈ ರೈಲು ನಿಗದಿತ ಸಮಯಕ್ಕೆ ಅಶೋಕಪುರಂ ಬದಲಾಗಿ ಕೆಎಸ್‌ಆರ್ ಬೆಂಗಳೂರಿನಿಂದಲೇ ತನ್ನ ಪ್ರಯಾಣ ಆರಂಭಿಸುತ್ತದೆ.
* ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು (ಸಂಖ್ಯೆ 66580) ರಾಮನಗರ ಮತ್ತು ಕೆಎಸ್‌ಆರ್ ಬೆಂಗಳೂರು ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ. ರಾಮನಗರದಲ್ಲೇ ತನ್ನ ಸಂಚಾರವನ್ನು ಅಂತ್ಯಗೊಳಿಸುತ್ತದೆ.
* ಡಿಸೆಂಬರ್ 26 ಮತ್ತು 2026 ಜನವರಿ 9ರಂದು (66579) ಕೆಎಸ್‌ಆರ್ ಬೆಂಗಳೂರು-ಅಶೋಕಪುರಂ ಮೆಮು ರೈಲು ಕೆಎಸ್‌ಆರ್ ಬೆಂಗಳೂರು ಮತ್ತು ರಾಮನಗರ ನಡುವಿನ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ರೈಲು ಬದಲಾಗಿ ರಾಮನಗರದಿಂದ ನಿಗದಿತ ಸಮಯದಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications