Bengaluru: ಬೆಂಗಳೂರು, ಹೈದರಾಬಾದ್‌ನಲ್ಲಿ ಆಸ್ತಿ ಬೆಲೆ ಗಗನಕ್ಕೆ
ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ವಸತಿ ಬೆಲೆಗಳು ಆಸ್ತಿ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ಎರಡೂ ನಗರಗಳಲ್ಲಿ 2020ರಿಂದ ಕೆಲವು ಕಡೆಗಳಲ್ಲಿ ಆಸ್ತಿ ಬೆಲೆ 80% ಕ್ಕಿಂತ ಹೆಚ್ಚು ಹೆಚ್ಚಾಗಿದೆ ಎಂದು ವರದಿಯಾಗಿದೆ. ಐಟಿ ಉದ್ಯೋಗಿಗಳ ಪರಿಣಾಮ ಈ ಎರಡೂ ನಗರಗಳಲ್ಲಿ ಆಸ್ತಿಗೆ ಭಾರಿ ಬೇಡಿಕೆ ಬಂದಿದೆ ಎಂದು ಅನಾರಾಕ್ ವರದಿಯಲ್ಲಿ ತಿಳಿಸಿದೆ.
ಅನರಾಕ್ ವರದಿಯ ಪ್ರಕಾರ ಬೆಂಗಳೂರಿನ ಬಾಗಲೂರು ವಲಯದಲ್ಲಿ 2019 ಡಿಸೆಂಬರ್ ಮತ್ತು 2024ರ ಜೂನ್ ನಡುವೆ 90% ರಷ್ಟು ಬೆಲೆ ಏರಿಕೆಯಾಗಿದೆ ಎಂದು ಹೇಳಿದೆ. ಹೆಚ್ಚಾಗಿ ಟೆಕ್ಕಿಗಳಿರುವ ವೈಟ್‌ಫೀಲ್ಡ್‌ನಲ್ಲಿ ವಸತಿ ಬೆಲೆಗಳು ಈ ಅವಧಿಯಲ್ಲಿ ಸುಮಾರು 80% ರಷ್ಟು ಹೆಚ್ಚಾಗಿದ್ದರೆ ಸರ್ಜಾಪುರ ರಸ್ತೆಯಲ್ಲಿ ವಸತಿ ಬೆಲೆಗಳು ಶೇ.58ರಷ್ಟು ಏರಿಕೆಯಾಗಿವೆ.

ಬಾಗಲೂರಿನಲ್ಲಿ ವಸತಿ ಬೆಲೆಗಳು 2019 ರಲ್ಲಿ ಚದರ ಅಡಿಗೆ ₹4,300 ಇದ್ದರೆ 2024ರಲ್ಲಿ ಪ್ರತಿ ಚದರ ಅಡಿ ₹8,151 ಕ್ಕೆ ಹೆಚ್ಚಾಗಿದೆ. ಹೈದರಾಬಾದ್‌ನ ಕೋಕಾಪೇಟ್‌ನಲ್ಲಿ 2019 ರಲ್ಲಿ ಪ್ರತಿ ಚದರ ಅಡಿಗೆ ₹4,750 ಇದ್ದರೆ 2024 ರಲ್ಲಿ ಪ್ರತಿ ಚದರ ಅಡಿಗೆ ₹9,000 ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ 2019 ರಲ್ಲಿ ಪ್ರತಿ ಚದರ ಅಡಿಗೆ ₹4,765 ಇದ್ದರೆ ಈಗ ₹8,600 ಕ್ಕೆ ಏರಿಕೆಯಾಗಿದೆ.
ಹೈದರಾಬಾದ್‌ನಲ್ಲಿ ಕೂಡ ಭಾರಿ ಬೇಡಿಕೆ
ಹೈದರಾಬಾದ್‌ನ ಕೋಕಾಪೇಟ್ ಪ್ರದೇಶದಲ್ಲಿ ಆಸ್ತಿಗಳ ಬೆಲೆಗಳು 89% ಏರಿಕೆಯಾಗಿವೆ. ಬಾಚುಪಲ್ಲಿಯಲ್ಲಿ 57% ಮತ್ತು ತೆಲ್ಲಾಪುರದಲ್ಲಿ 53% ರಷ್ಟು ಏರಿಕೆಯಾಗಿದೆ ಎಂದು ಅನಾರಾಕ್ ವರದಿಯಲ್ಲಿ ತಿಳಿಸಿದೆ. ಕೊರೊನಾ ಸಾಂಕ್ರಾಮಿಕದ ಬಳಿಕ ಈ ಎರಡೂ ನಗರಗಳಲ್ಲಿ ರಿಯಲ್ ಎಸ್ಟೇಟ್ ವಲಯದಲ್ಲಿ ಬೇಡಿಕೆ ಹೆಚ್ಚಾಗಿದೆ.
ಅನರಾಕ್ ವರದಿಯ ಪ್ರಕಾರ ಕೊರೊನಾದಂತಹ ತುರ್ತು ಪರಿಸ್ಥಿತಿಗಳಲ್ಲಿ ಹಲವು ಮಂದಿ ಮನೆಯನ್ನು ಹೊಂದುವುದು ಅನಿವಾರ್ಯವಾದ ಕಾರಣ, ಬೇಡಿಕೆ ಹೆಚ್ಚಾಯಿತು. ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಅನೇಕ ಡೆವಲಪರ್‌ಗಳು ಮನೆ, ಸೈಟು ಮಾರಾಟ ಮಾಡಲು ರಿಯಾಯಿತಿ, ಕೊಡುಗೆ ಘೋಷಣೆ ಮಾಡಿದ ಪರಿಣಾಮ ಅನೇಕರು ಮನೆ, ಆಸ್ತಿಗಳನ್ನು ಖರೀದಿ ಮಾಡಿದರು.
2022ರಿಂದ ಆಸ್ತಿ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಎರಡೂ ನಗರಗಳಲ್ಲಿ ಬೇಡಿಕೆ ಪ್ರಮಾಣದಲ್ಲಿ ಹೆಚ್ಚಾದ ಪರಿಣಾಮ, ಡೆವಲಪರ್‌ಗಳು ತಮ್ಮ ಬೆಲೆಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದರು.
ಅಂಕಿ ಅಂಶಗಳ ಪ್ರಕಾರ ಅಗ್ರ 7 ನಗರಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಒಟ್ಟಾರೆಯಾಗಿ 44% ಕ್ಕಿಂತ ಹೆಚ್ಚು ಬೆಲೆ ಏರಿಕೆ ಕಂಡಿವೆ. ಹೈದರಾಬಾದ್ 2019 ಮತ್ತು 2024 ರ ನಡುವೆ 64% ರಷ್ಟು ಹೆಚ್ಚಾಗಿದ್ದು ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಒಟ್ಟಾರೆ 57% ಹೆಚ್ಚಳದೊಂದಿಗೆ ಎರಡನೇ ಸ್ಥಾನದಲ್ಲಿದೆ. ಕೋಲ್ಕತ್ತಾದಲ್ಲಿ 25% ರಷ್ಟು ಕಡಿಮೆ ಬೆಲೆಯ ಬೆಳವಣಿಗೆ ಕಂಡುಬಂದಿದೆ. ಎನ್‌ಸಿಆರ್ ಮತ್ತು ಎಂಎಂಆರ್ ಎರಡೂ ಈ ಅವಧಿಯಲ್ಲಿ 48% ಬೆಲೆ ಏರಿಕೆಗೆ ಸಾಕ್ಷಿಯಾಗಿದೆ ಎಂದು ಅನರಾಕ್ ಅಂಕಿಅಂಶಗಳು ತೋರಿಸಿವೆ.












Click it and Unblock the Notifications