Bengaluru 2nd Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದಿಂದ ಈ ಭಾಗದ ಭೂಮಿಗೆ ಚಿನ್ನದ ಬೆಲೆ!

ಬೆಂಗಳೂರಿನ ಎರಡನೇ ವಿಮಾನ ನಿಲ್ದಣದ ನಿರ್ಮಾಣಕ್ಕೆ ಸಿದ್ಧತೆ ಜೋರಾಗಿದೆ. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ಪ್ರಾರಂಭಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು. ಈ ಸಂಬಂಧ ನಾಲ್ಕರಿಂದ ಐದು ಪ್ರದೇಶಗಳನ್ನು ಫೈನಲ್‌ ಲಿಸ್ಟ್‌ ಮಾಡಿದೆ. ಆಯ್ಕೆ ಮಾಡಿರುವ ಪ್ರದೇಶದಲ್ಲಿ ಯಾವುದೇ ಜಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣವಾದರೂ. ರಿಯಲ್ ಎಸ್ಟೇಟ್ ಗೆ ಭರ್ಜರಿ ಆದಾಯ ಹರಿದು ಬರಲಿದೆ.

ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುವ ಜಾಗ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಇರುವವರಿಗೆ ಭರ್ಜರಿ ಲಾಭವಾಗಲಿದೆ. ಈ ಹಿಂದೆ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ಈ ಭಾಗದ ಜನ ರಾತ್ರೋ ರಾತ್ರಿ ಕೋಟ್ಯಾಧಿಪತಿಗಳಾಗಿದ್ದರು. ಇದೀಗ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರಿಯಲ್‌ ಎಸ್ಟೇಟ್‌ಗೆ ಭರ್ಜರಿ ಲಾಭವಾಗುವ ನಿರೀಕ್ಷೆ ಇದೆ.

Bengaluru 2nd Airport Land prices increase in Tumkur Bidadi Nelamangala and Harohalli

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ನಾಲ್ಕರಿಂದ ಐದು ಜಾಗಗಳನ್ನು ಫೈನಲ್‌ ಮಾಡಲಾಗಿದೆ. ಅದರಲ್ಲಿ ದಾಬಸ್‌ಪೇಟೆ, ನೆಲಮಂಗಲ, ತುಮಕೂರು, ಬಿಡದಿ ಹಾಗೂ ಹಾರೋಹಳ್ಳಿ ಸ್ಥಳಗಳು ಪ್ರಾಥಮಿಕ ಹಂತದ ಚರ್ಚೆಯಲ್ಲಿ ಇದ್ದವು. ಈ ಪ್ರದೇಶಗಳಲ್ಲಿ ಯಾವುದೇ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೂ, ರಿಯಲ್‌ ಎಸ್ಟೇಟ್‌ ಹಾಗೂ ರೈತರಿಗೆ ಭರ್ಜರಿ ಆದಾಯ ಹರಿದು ಬರಲಿದೆ. ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ಈ ಭಾಗದಲ್ಲಿನ ಜಾಗಗಳಿಗೆ ಚಿನ್ನದ ಬೆಲೆ ಬಂದಿತ್ತು.

ಅಷ್ಟೇ ಅಲ್ಲ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದಿಂದ ರಿಯಲ್ ಎಸ್ಟೇಟ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಲಾಭ ನಿರೀಕ್ಷೆ ಮಾಡಲಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೊಸ ಕಾರಿಡಾರ್‌ಗಳು ಹಾಗೂ ಅಭಿವೃದ್ಧಿ ಕ್ಲಸ್ಟರ್‌ಗಳು ಸೃಷ್ಟಿಯಾಗಲಿವೆ.

ಭೂಮಿಗೆ ಚಿನ್ನದ ಬೆಲೆ: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣದಿಂದಾಗಿ ಭೂಮಿಗೆ ಚಿನ್ನದ ಬೆಲೆ ಬರಲಿದೆ. ಇದಕ್ಕೆ ಸ್ಪಷ್ಟ ಉದಾ: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ. ದೇವನಹಳ್ಳಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವ ಪ್ರಸ್ತಾವನೆ ಬಂದ ಮೇಲೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಜಾಗಕ್ಕೆ ಚಿನ್ನದ ಬೆಲೆ ಬಂದಿತ್ತು.

ಇಲ್ಲಿ ಜಾಗ ಇರುವ ಹಲವರು ಕೋಟ್ಯಾಂತರ ರೂಪಾಯಿ ದುಡ್ಡು ಮಾಡಿದ್ದರು. ಇದೀಗ ನೆಲಮಂಗಲ ಹಾಗೂ ತುಮಕೂರು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೆ ರಿಯಲ್‌ ಎಸ್ಟೇಟ್‌ಗೆ ಬಂಪರ್ ಅಂತಲೇ ಹೇಳಲಾಗುತ್ತಿದೆ ಅಲ್ಲದೆ ಎರಡನೇ ವಿಮಾನ ನಿಲ್ದಾಣದಿಂದ ರಾಮನಗರ, ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹಾಗೂ ಮೈಸೂರಿನ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗಿದೆ.

ಮೂಲಸೌಕರ್ಯ ಅಭಿವೃದ್ಧಿ: ವಿಮಾನ ನಿಲ್ದಾಣದ ನಿರ್ಮಾಣದಿಂದ ಸಹಜವಾಗಿಯೇ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಆಗಲಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಹಜವಾಗಿಯೇ ಮೂಲಸೌಕರ್ಯ ಅಭಿವೃದ್ಧಿ ಆಗಲಿದೆ. ಇದರಿಂದ ಈ ಭಾಗದಲ್ಲಿ ಉದ್ಯಮಗಳು ಪ್ರಾರಂಭವಾಗಿ, ಹೂಡಿಕೆ ಪ್ರಮಾಣವೂ ಹೆಚ್ಚಳವಾಗಲಿದೆ. ಇದರಿಂದ ಹೊಸ ಹೆದ್ದಾರಿಗಳು, ಫ್ಲೈಓವರ್‌ಗಳು ಹಾಗೂ ಸಮೂಹ ಸಾರಿಗೆ ಬಳಕೆ ಹೆಚ್ಚಾಗಲಿದೆ

ಹೋಟೆಲ್‌ಗಳಿಗೆ ಬಂಪರ್‌: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದಿಂದ ಹೋಟೆಲ್‌ಗಳು, ಚಿಲ್ಲರೆ ಮಾರಾಟ ಅಂಗಡಿಗಳು, ಲಾಜಿಸ್ಟಿಕ್ಸ್ ಹಬ್‌ಗಳು ಮತ್ತು ಶಿಕ್ಷಣ ಸಂಸ್ಥೆಗಳ ಸಂಖ್ಯೆಯೂ ಹೆಚ್ಚಳವಾಗುವ ಸಾಧ್ಯತೆ ಇದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಮುಂದಿನ ದಿನಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚಿಂತನೆ ಜೋರಾಗಿದೆ. 2035 ರ ವೇಳೆಗೆ ಎರಡನೇ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ.

ರಿಯಲ್‌ ಎಸ್ಟೇಟ್‌ಗೆ ಧಮಾಕಾ

ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಬಹುತೇಕ ಬೆಂಗಳೂರಿನಿಂದ ಹೊರ ಭಾಗದಲ್ಲೇ ನಿರ್ಮಾಣವಾಗಲಿದೆ. ಬೆಂಗಳೂರಿನ ಯಾವುದೇ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾದರೂ, ಅದರಿಂದ ಸುತ್ತಮುತ್ತಲಿನ ಭೂಮಿಗೆ ಚಿನ್ನದ ಬೆಲೆ ಬರಲಿದೆ. ಯಾಕೆಂದರೆ ವಿಮಾನ ನಿಲ್ದಾಣ ಬಂದ ಮೇಲೆ ರಸ್ತೆಗಳು, ಮೇಲ್ಸೇತುವೆಗಳು ಅಭಿವೃದ್ಧಿ ಆಗಲಿವೆ.

ಕ್ರಮೇಣ ಉದ್ಯಮಗಳು ಇಲ್ಲಿಗೆ ಬರಲಿವೆ. ವಿಮಾನ ಸೇವೆ ಪ್ರಾರಂಭ ಎನ್ನುವುದು ಹಲವು ಲಾಭಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ಸ್ಥಳದಲ್ಲಿ ಜಾಗಗಳಿಗೆ ಈಗಲಿಂದಲೇ ಬೆಲೆ ಹೆಚ್ಚಳದ ಲೆಕ್ಕಾಚಾರ ಪ್ರಾರಂಭವಾಗಿದೆ. ಯಾವ ಜಾಗದಲ್ಲಿ ಎನ್ನುವುದು ಜನವರಿಯ ಒಳಗಾಗಿ ಅಂತಿಮವಾಗುವ ಸಾಧ್ಯತೆ ಇದೆ. ಒಮ್ಮೆ ಜಾಗ ನಿಗಿದಿಯಾದರೆ, ರಿಯಲ್‌ ಎಸ್ಟೇಟ್‌ ಬೂಸ್ಟ್‌ ಆಗಲಿದೆ.

ಕೆಂಪೇಗೌಡ ವಿಮಾನ ನಿಲ್ದಾಣ: ಇನ್ನು ಬೆಂಗಳೂರಿನ ಅಂತರರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣ ನಿರ್ಮಾಣ ಮಾಡುವಾಗ ದೇವನಹಳ್ಳಿಯ ರಿಯಲ್‌ ಎಸ್ಟೇಟ್‌ ಬೂಸ್ಟ್‌ ಆಗಿತ್ತು. ದೇವನಹಳ್ಳಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವಾಗ ರೈತರ ಭೂಮಿಗೆ ಚಿನ್ನದ ಬೆಲೆ ಬಂದಿತ್ತು. ರೈತರು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾಗಿದ್ದರು. ದೇವನಹಳ್ಳಿಯ ಸುತ್ತಮುತ್ತಲಿನ ರಸ್ತೆಗಳು ಅಭಿವೃದ್ಧಿಯಾಗಿದ್ದವು. ಅಲ್ಲದೆ ಭೂಮಿಗೆ ಬಂಪರ್‌ ಬೆಲೆ ಬಂದಿತ್ತು. ಇದೀಗ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವಾಗಲೂ ಇದೇ ರೀತಿ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+