ಹೆಲ್ಮೆಟ್ ಕಡ್ಡಾಯದ ಮೊದಲ ಚುಂಬನಕ್ಕೆ ತೆತ್ತ ದಂಡವೆಷ್ಟು?
ಬೆಂಗಳೂರು, ಜನವರಿ, 21: ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಯಾ ಸರ್ಕಾರದ ಬೊಕ್ಕಸಕ್ಕೆ ಮೊದಲ ದಿನವೇ ಸಾಜಷ್ಟು ಆದಾಯ ತಂದಿದೆ! ಜನವರಿ 20 ರಂದು ನಿಯಮ ಮುರಿದಿದ್ದಕ್ಕೆ 1520 ಜನರಿಗೆ ದಂಡ ವಿಧಿಸಿ. 1.5 ಲಕ್ಷ ರು. ಹಣ ಸಂಗ್ರಹಿಸಲಾಗಿದೆ.
ಸಂಚಾರ ವಿಭಾಗದ ಆಯುಕ್ತ ಎಂ ಎ ಸಲೀಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಲ್ಲದೇ ನಗರದ ಎಲ್ಲೆಡೆ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರನ್ನು ಒಳಗೊಂಡ ತಂಡಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದ್ದರು. ನಗರದೆಲ್ಲೆಡೆ ಕಾರ್ಯಾಚರಣೆ ನಡೆಸಿದ ಈ ತಂಡಗಳು, ಹೆಲ್ಮೆಟ್ ಧರಿಸದೆ ಪ್ರಯಾಣಿಸುವ ಸವಾರ ಹಾಗೂ ಹಿಂಬದಿ ಸವಾರರನ್ನು ತಡೆದು ದಂಡ ಹಾಕಿ ಎಚ್ಚರಿಕೆ ನೀಡಿದ್ದಾರೆ.[ಹೆಲ್ಮೆಟ್ ಕಡ್ಡಾಯ: ಇದು ಬೆಂಗಳೂರಿಗರ ಪ್ರತಿಕ್ರಿಯೆ]

ಬುಧವಾರ ಜನರು ಹೆಲ್ಮೆಟ್ ಕಾನೂನಿಗೆ ಬೆಲೆ ನೀಡಿದಂತೆ ಕಂಡುಬರಲಿಲ್ಲ. ಗುರುವಾರ ಬೆಳೆಗ್ಗೆಯೂ ಸಹ ಹಿಂಬದಿ ಸವಾರರ ಮೇಲೆ ಶಿರಸ್ತ್ರಾಣ ಇರಲಿಲ್ಲ. ಬಹುತೇಕರು ಸಿಂಗಲ್ ಆಗಿಯೇ ಸಾಗಿದ್ದು ಕಂಡುಬಂತು.[ನೀವು ಧರಿಸುವ ಹೆಲ್ಮೆಟ್ ಹೀಗಿರಬೇಕು]
ಯುವಕರೇ ಹೆಚ್ಚು:
ಹೆಲ್ಮೆಟ್ ದಂಡ ಪಾವತಿ ಮಾಡಿದವರಲ್ಲಿ ಯುವಕರೇ ಹೆಚ್ಚು. ಪೊಲೀಸರ ತಂಡಗಳು ಗುರುವಾರ ಸಹ ಕಾರ್ಯಾಚರಣೆ ನಡೆಸುತ್ತಿವೆ. ನ್ಯಾಯಾಂಗ ನಿಂದನೆ ಮತ್ತು ಕಾನೂನು ಉಲ್ಲಂಘನೆ ಮಾಡಿ ದಂಡ ಕಟ್ಟುವುದಕ್ಕಿಂತ ಹೆಲ್ಮೆಟ್ ಧರಿಸಿಕೊಂಡು ತೆರಳುವುದೇ ಉತ್ತಮ












Click it and Unblock the Notifications