• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿಗರೇ ಸಮಸ್ಯೆಯೇ 22660000 ಕರೆ ಮಾಡಿ

By Kiran B Hegde
|

ಬೆಂಗಳೂರು, ನ. 22: ಹೈಟೆಕ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವ ಬೆಂಗಳೂರಿನಲ್ಲಿ ಸಮಸ್ಯೆ ಎದುರಾದರೆ ಯಾರ ಹತ್ತಿರ ಹೇಳಿಕೊಳ್ಳಬೇಕೆಂಬುದೇ ದೊಡ್ಡ ಸವಾಲಾಗಿತ್ತು. ಈ ಗೊಂದಲಕ್ಕೀಗ ಬಿಬಿಎಂಪಿ ಪರಿಹಾರ ಕಂಡುಹಿಡಿದಿದೆ.

ಯಾವುದೇ ಸಮಸ್ಯೆ ಎದುರಾಗಿದ್ದರೂ ನೀವು ಮಾಡಬೇಕಾದ್ದಿಷ್ಟೇ... 22660000 ಸಂಖ್ಯೆಗೆ ಡಯಲ್ ಮಾಡಿ ತೊಂದರೆ ಹೇಳಿಕೊಂಡರೆ ಮುಗೀತು. ಬಿಬಿಎಂಪಿ ಅಧಿಕಾರಿಯೋರ್ವ ಅರ್ಧಗಂಟೆಯೊಳಗೆ ನಿಮ್ಮ ಸಮಸ್ಯೆ ಪರಿಹಾರಕ್ಕೆ ಕ್ರಮ ಜರುಗಿಸಲು ಆರಂಭಿಸುತ್ತಾರೆ.

ಅವರು ಸರ್ಕಾರಿ ಅಧಿಕಾರಿಗಳು. ಕರೆ ಮಾಡಿ ವಿವರ ಪಡೆದ ಮೇಲೆ ಸಮಸ್ಯೆ ಬಗೆಹರಿಯುತ್ತೆ ಅಂತ ಹೇಗೆ ನಂಬೋದು... ಎಂಬ ಅನುಮಾನ ಬೇಡ. ಈ ಎಲ್ಲ ವಿಷಯಗಳನ್ನು ಯೋಚಿಸಿಯೇ ಬಿಬಿಎಂಪಿ ಖಡಕ್ ನಿಯಮ ರೂಪಿಸಿದೆ.

ಏನಿದು ಹೊಸ ಕ್ರಮ...

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಎಂ.ಎಸ್. ಶ್ರೀಕಾರ, "ಈ ಹೊಸ ಪದ್ಧತಿ ಜಾರಿಗೆ ತಂದಿರುವುದರಿಂದ ಯಾವುದೇ ಅಧಿಕಾರಿ ದೂರಿನ ಕುರಿತು ನಿರ್ಲಕ್ಷ್ಯ ತೋರಲು ಅವಕಾಶವಿರುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ದೂರುದಾರರು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಕರೆ ಮಾಡಿದಾಗ ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಸಮಸ್ಯೆಯ ಕುರಿತು ವಿವರವಾಗಿ ತಿಳಿಸಬೇಕು. ಈ ಸಂಭಾಷಣೆಯನ್ನು ದಾಖಲಿಸಿಕೊಂಡು ಸಂಬಂಧಪಟ್ಟ ವಲಯದ ಅಧಿಕಾರಿಗೆ ವರ್ಗಾಯಿಸಲಾಗುತ್ತದೆ. ದೂರುದಾರರು ಮತ್ತೆ ತನ್ನ ವಲಯಕ್ಕೆ ಕರೆ ಮಾಡಿ ವಿಚಾರಿಸುವ ಅಗತ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

ಪ್ರಕ್ರಿಯೆ ಹೀಗೆ ನಡೆಯುತ್ತೆ ನೋಡಿ...

  • 22660000 ಈ ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿ
  • ನಿಯಂತ್ರಣ ಕೊಠಡಿಯಲ್ಲಿ ನಿಮ್ಮ ದೂರು ದಾಖಲಾಗುತ್ತದೆ. ನಂತರ ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿ ಬಳಿ ಹೋಗುತ್ತದೆ
  • ಈ ಅಧಿಕಾರಿ ಅರ್ಧ ಗಂಟೆಯೊಳಗೆ ಈ ಸಮಸ್ಯೆ ಕುರಿತು ಸ್ಪಂದಿಸಲು ಆರಂಭಿಸಲೇಬೇಕು
  • ಅದೇ ಅಧಿಕಾರಿ ಮತ್ತೆ ನಿಮಗೆ ಕರೆ ಮಾಡಿ ಸಮಸ್ಯೆ ಬಗೆಹರಿದ ಕುರಿತು ಖಚಿತಪಡಿಸಿಕೊಳ್ಳುತ್ತಾರೆ
  • ಅವರು ನಿಮ್ಮ ಜೊತೆ ನಡೆಸಿದ ಸಂಭಾಷಣೆಯನ್ನು ದಾಖಲಿಸಿಕೊಂಡು ನಿಯಂತ್ರಣ ಕೊಠಡಿಗೆ ಸಲ್ಲಿಸಬೇಕು
  • ಸಮಸ್ಯೆ ಪರಿಹರಿಸಲು ಕೈಗೊಂಡ ಕ್ರಮಗಳ ಕುರಿತು ಅದೇ ಅಧಿಕಾರಿ ಎರಡು ದಿನಗಳ ಒಳಗೆ ನಿಯಂತ್ರಣ ಕೊಠಡಿಗೆ ವರದಿ ಸಲ್ಲಿಸಬೇಕು
  • ಪುನಃ ನಿಯಂತ್ರಣ ಕೊಠಡಿಯಿಂದ ನಿಮಗೆ ಕರೆ ಬರುತ್ತದೆ. ನಿಮ್ಮ ಸಮಸ್ಯೆ ಬಗೆಹರಿದಿರುವ ಕುರಿತು ಖಚಿತಪಡಿಸಿಕೊಳ್ಳಲಾಗುತ್ತದೆ

ಮಲ್ಲೇಶ್ವರಂನಲ್ಲಿದೆ ನಿಯಂತ್ರಣ ಕೊಠಡಿ

ನಿಯಂತ್ರಣ ಕೊಠಡಿಯು ಮಲ್ಲೇಶ್ವರಂನ ಅರ್ಬನ್ ಹೆಲ್ತ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಐಪಿಪಿ ಕೇಂದ್ರ) ಕಟ್ಟಡದಲ್ಲಿದೆ. ಇಲ್ಲಿ ವಾರದ ಏಳೂ ದಿನ, 24 ಗಂಟೆಗಳ ಕಾಲವೂ ದೂರು ದಾಖಲಾತಿ ನಡೆಯುತ್ತಿರುತ್ತದೆ. ಈ ಕಾರ್ಯದ ನಿರ್ವಹಣೆಗೆ ಸದಾಕಾಲ ಇಬ್ಬರನ್ನು ನಿಯೋಜಿಸಲಾಗಿದೆ ಎಂದು ವಿಶೇಷ ಆಯುಕ್ತ ಶ್ರೀಕಾರ ವಿವರಿಸಿದ್ದಾರೆ.

ಒಂದು ವಾಕಿ ಟಾಕಿ ಸಾಧನವನ್ನು ಬಿಬಿಎಂಪಿ ಆಯುಕ್ತರಾದ ಭರತ್‌ಲಾಲ್ ಮೀನಾ ಅವರ ಕಾರಿನಲ್ಲಿಯೂ ಅಳವಡಿಸಲಾಗುವುದು. ಇದರಿಂದ ಆಯುಕ್ತರು ಕೂಡ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ ಎಂದು ಶ್ರೀಕಾರ ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲೂ ದೂರು ನೀಡಬಹುದು...

ನಿಮ್ಮ ಸಮಸ್ಯೆಗಳ ಕುರಿತು ಆನ್‌ಲೈನ್‌ನಲ್ಲಿ ಕೂಡ ದೂರು ನೀಡಬಹುದು. http://vigeyegpms.in/bbmp/?module=helpdeskpublic&action=view-complaints ವೆಬ್ ಸೈಟ್‌ಗೆ ಹೋಗಿ Raise Complaint ಕ್ಲಿಕ್ ಮಾಡಿದರೆ ದೂರು ದಾಖಲಿಸುವ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ಕೇಳಿರುವ ವಿವರಣೆಯನ್ನು ತುಂಬಿ Submit ಕ್ಲಿಕ್ ಮಾಡಿಬಿಡಿ. ನಿಮ್ಮ ದೂರು ದಾಖಲಾಗುತ್ತದೆ. ವೆಬ್‌ ಸೈಟ್‌ನ Dashboard ವಿಭಾಗ ಕ್ಲಿಕ್ ಮಾಡಿದರೆ ಹೆಚ್ಚಿನ ಮಾಹಿತಿ ಲಭಿಸುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
BBMP has started a new system to solve the problems of Bengaluru citizens. Just dial 22660000 to lodge complaint. BBMP will attend within 30 minutes to solve it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more