ಕಾರ್ ಪಾರ್ಕ್ ಬಳಿ ರಸ್ತೆ ಉದ್ದಕ್ಕೂ ಕನ್ನಡದ ವರ್ಣಮಾಲೆಯದ್ದೇ ಆಕರ್ಷಣೆ
ಬೆಂಗಳೂರು, ಮಾರ್ಚ್ 7: ಬೊಮ್ಮನಹಳ್ಳಿಯ ಬಳಿ ಇತ್ತೀಚೆಗಷ್ಟೇ ನಿರ್ಮಾಣವಾಗಿರುವ ಮೊಟ್ಟ ಮೊದಲ ಕಾರ್ ಪಾರ್ಕ್‌ಗೆ ಮತ್ತೊಂದು ಕಿರೀಟವೆಂಬಂತೆ ಕನ್ನಡದ ವರ್ಣಮಾಲೆ ಕಣ್ಮನ ಸೆಳೆಯುತ್ತಿದೆ.
ಕನ್ನಡದ ವರ್ಣಮಾಲೆಯನ್ನು ಹಾಕಿ ಕನ್ನಡದ ಅಕ್ಷರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನಕ್ಕೆ ವ್ಯಾಪಕ ಸ್ಪಂದನೆ ವ್ಯಕ್ತವಾಗುತ್ತಿದೆ.
ಅ ಆ ಇ ಈ.. ಕನ್ನಡದ ಅಕ್ಷರ ಮಾಲೆ..#ಬೆಂಗಳೂರು pic.twitter.com/peGTEKTGTo
— BCP MAN (@HMLokesh) March 5, 2019
ವರ್ಷದಿಂದ ವರ್ಷಕ್ಕೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಸೇರಿದಂತೆ ಬೇರೆ ಭಾಷೆಯ ವ್ಯಾಮೋಹ, ಬಳಕೆಯೂ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಾರ್ಡ್‌ನ ಸದಸ್ಯರು ಹಾಗೂ ಸ್ಥಳೀಯ ಶಾಸಕರು ಕನ್ನಡದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹೊಂಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ವರ್ಣಮಾಲೆಗಳು ಪ್ರತಿದಿನ ಸಂಜೆ 5ರಿಂದ ಬೆಳಗಲಾರಂಭಿಸುತ್ತದೆ.












Click it and Unblock the Notifications