ಬೆಂಗಳೂರಿಗರೇ ಕಾರ್ ಖರೀದಿಗೂ ಮುನ್ನ ಎಚ್ಚರ ಎಚ್ಚರ

ಬೆಂಗಳೂರು, ಡಿಸೆಂಬರ್.12: ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇವೆ. ಕೈಯಲ್ಲಿ ಕಾಸಿದೆ, ತಮಗೆ ಬೇಕಾದಾಗ ಬೇಕಾದ ವಾಹನಗಳನ್ನು ಖರೀದಿಸುತ್ತೇವೆ ಎಂದುಕೊಂಡಿದ್ದರೆ ಎಚ್ಚರ. ಇನ್ನುಮುಂದೆ ಬೆಂಗಳೂರಿನಲ್ಲಿ ಈ ಆಟ ನಡೆಯುದಿಲ್ಲ.

ಲಕ್ಷ ಲಕ್ಷ ರೂಪಾಯಿ ಕೊಟ್ಟರೂ ನೀವು ಖರೀದಿಸುವ ಕಾರನ್ನು ರಸ್ತೆಗೆ ಇಳಿಸಲು ಆಗುವುದಿಲ್ಲ. ಏಕೆಂದರೆ ಅಂಥದೊಂದು ಕಠಿಣ ಕಾನೂನು ಜಾರಿಗೊಳಿಸಲು ನಗರ ಸಾರಿಗೆ ಆಯುಕ್ತರು ತೀರ್ಮಾನಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಹಾಗೂ ಪಾರ್ಕಿಂಗ್ ಸಮಸ್ಯೆ ನೀಗಿಸಲು ಹೊಸ ಕಾನೂನು ಜಾರಿಗೊಳಿಸಲು ಮುಂದಾಗಿದ್ದಾರೆ.

ಹೌದು, ಸಿಲಿಕಾನ್ ಸಿಟಿ ಮಂದಿ ಇನ್ನು ಮುಂದೆ ಕಾರು ಖರೀದಿಸಬೇಕಾದರೆ ಕೆಲವು ನಿಯಮಗಳನ್ನು ಅನುಸರಿಸಬೇಕು. ಕಾರು ನೋಂದಣಿ ಆಗಬೇಕಾದರೆ ಮೊದಲು ಪಾರ್ಕಿಂಗ್ ಗೆ ವ್ಯವಸ್ಥೆ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಪುರಾವೆ ಒದಗಿಸಬೇಕು.

Be Careful Before Buying A Car In Bangalore City.

ಪಾರ್ಕಿಂಗ್ ಪುರಾವೆ ಕೊಟ್ಟರಷ್ಟೇ ನೊಂದಣಿ

ಕಾರು ಖರೀದಿಸಿ ನೋಂದಣಿ ಮಾಡಿಕೊಳ್ಳಬೇಕಾದರೆ ಪಾರ್ಕಿಂಗ್ ಬಗ್ಗೆ ಸಾರಿಗೆ ಆಯುಕ್ತರಿಗೆ ಪುರಾವೆ ಒದಗಿಸಬೇಕು. ಹಾಗಿದ್ದಲ್ಲಿ ಮಾತ್ರ ವಾಹನಗಳಿಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ನಗರ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪಾರ್ಕಿಂಗ್ ಸಮಸ್ಯೆ ದಿನೇ ದಿನೆ ಹೆಚ್ಚಾಗಲೇ ಇದೆ. ಜನರು ಮನಸಿಗೆ ಬಂದಂತೆ ವಾಹನಗಳನ್ನು ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸಾರಿಗೆ ಇಲಾಖೆಯೇ ಕಠಿಣ ಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ.

ಹೊಸ ಕಾರು ನೋಂದಣಿ ಮಾಡಿಕೊಳ್ಳಬೇಕಾದಲ್ಲಿ ಬಿಬಿಎಂಪಿಯಿಂದ ಎನ್ ಒಸಿ ಪತ್ರವನ್ನು ಕಡ್ಡಾಯವಾಗಿ ನೀಡಬೇಕು. ಪಾರ್ಕಿಂಗ್ ಕುರಿತು ಪುರಾವೆ ನೀಡಿ, ಎನ್ಒಸಿ ಪತ್ರವನ್ನು ನೀಡಿದಾಗ ಮಾತ್ರ ವಾಹನಗಳ ನೋಂದಣಿ ಮಾಡಲಾಗುತ್ತದೆ ಎಂದು ಬೆಂಗಳೂರು ನಗರ ಸಾರಿಗೆ ಆಯುಕ್ತ ಎನ್.ಶಿವಕುಮಾರ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+