ಬಿಡಿಎ ಸೈಟ್ ಮಾರಾಟಕ್ಕಿವೆ: ಬಿಡ್‌ ಮೂಲಕ ನಿವೇಶನ ಕೊಳ್ಳಿ

ಬೆಂಗಳೂರು, ಆಗಸ್ಟ್ 25 : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿವೇಶನಗಳ ಹಂಚಿಕೆಗೆ ಜಾಹೀರಾತು ನೀಡಿದೆ. ಆಸಕ್ತರು ಕನಸಿನ ನಿವೇಶನಗಳನ್ನು ಪಡೆಯಲು ಬಿಡ್ ಮಾಡಬಹುದಾಗಿದೆ. ಅಂತಿಮ ದಿನಾಂಕ 16/9/2019.

ಬಿಡಿಎ ವಾಸಯೋಗ್ಯ ಮೂಲೆ/ಮಧ್ಯಂತರ ನಿವೇಶನಗಳ ಇ-ಹರಾಜು ಪ್ರಕಟಿಸಿದೆ. ಈ ನಿವೇಶನಗಳ ಹರಾಜು ಹಾಗೂ ಮಾರಾಟವನ್ನು ಬಿಡಿಎ ಮೂಲೆ ನಿವೇಶನಗಳು, ಮಧ್ಯಂತರ ನಿವೇಶನಗಳು, ವಾಣಿಜ್ಯ ನಿವೇಶನಗಳು ಮತ್ತು ಇತರೆ ಹರಾಜು ಮಾಡಬಹುದಾದ ನಿವೇಶನಗಳ ವಿಲೇವಾರಿ ನಿಯಮಾವಳಿ ಅನ್ವಯ ಹಂಚಿಕೆ ಮಾಡಲಾಗುತ್ತದೆ.

Recommended Video

      ಬಿಡಿಎ ಸೈಟು ಬೇಕಾಗಿದ್ರೆ ಒಮ್ಮೆ ಇಲ್ಲಿ ನೋಡಿ | Oneindia Kannada

      ನಿವೇಶನಗಳನ್ನು ಎಲ್ಲಿ ಹೇಗಿವೆಯೋ ಹಾಗಿರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುತ್ತದೆ. ಪ್ರತಿ ಚದರ ಕಿ. ಮೀಗೆ ರೂ. 500 ಗಳ ಗುಣಕದಲ್ಲಿ ಬಿಡ್ ದರ ಕನಿಷ್ಠ ಏರಿಕೆ ಮಾಡಲಾಗುತ್ತದೆ. ಹರಾಜಿನಲ್ಲಿ ಪಾಲ್ಗೊಳ್ಳಲು ಕೊನೆಯ ದಿನಾಂಕ 16/9/2019 ಸಂಜೆ 4 ಗಂಟೆ.

      29/8/2019ರಂದು ಬಿಡ್ಡಿಂಗ್ ಆರಂಭಿಸಲಾಗುತ್ತದೆ. 16/9/2019 ಬಿಡ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಕೊನೆಯ ದಿನವಾಗಿದೆ. ಇ-ಹರಾಜನ್ನು ಮುಕ್ತಾಯಗೊಳಿಸಲು ಕೊನೆಯ ದಿನಾಂಕ ಮತ್ತು ಸಮಯ 17/9/2019 ಸಂಜೆ. 5.30 ಗಂಟೆ...

      ಎಲ್ಲೆಲ್ಲಿ ನಿವೇಶನಗಳು ಇವೆ

      ಎಲ್ಲೆಲ್ಲಿ ನಿವೇಶನಗಳು ಇವೆ

      * ಜೆ. ಪಿ. ನಗರ 9ನೇ ಫೇಸ್, 7ನೇ, 1ನೇ ಮತ್ತು 3ನೇ ಬ್ಲಾಕ್‌ ಲಭ್ಯವಿರುವ ವಾಸಯೋಗ್ಯ ಮೂಲೆ ನಿವೇಶನಗಳು. ಆರಂಭಿಕ ಬಿಡ್ ಚದರ ಮೀಟರ್‌ಗೆ 47,000 ರೂ.ಗಳು.

      * ಸರ್. ಎಂ. ವಿಶ್ವೇಶ್ವರಯ್ಯ ಲೇಔಟ್ 8ನೇ ಬ್ಲಾಕ್. ಆರಂಭಿಕ ಬಿಡ್ ದರ 39,100 ರೂ.

      * ಬನಶಂಕರಿ 6ನೇ ಹಂತ 'ಎಚ್' ಬ್ಲಾಕ್. ಆರಂಭಿಕ ಬಿಡ್ ದರ 45, 300 ರೂ.

      ಬಿಡಿಎ ನಿವೇಶನಕ್ಕೆ ಬಿಡ್ ಮಾಡಿ

      ಬಿಡಿಎ ನಿವೇಶನಕ್ಕೆ ಬಿಡ್ ಮಾಡಿ

      * ಹೆಚ್‌. ಎಸ್. ಆರ್ ಲೇಔಟ್ 3ನೇ ಸೆಕ್ಟರ್. ಆರಂಭಿಕ ಬಿಡ್ ದರ ಚದರ ಮೀಟರ್‌ಗೆ 1,29,000

      * ಬನಶಂಕರಿ 6ನೇ ಹಂತ, 5ನೇ ಬ್ಲಾಕ್. ಆರಂಭಿಕ ಬಿಡ್ ಚದರ ಮೀಟರ್‌ಗೆ 35,550 ರೂ.

      * ಕುಮಾರಸ್ವಾಮಿ ಲೇಔಟ್ 2ನೇ ಹಂತ. ಆರಂಭಿಕ ಬಿಡ್ 48,444 ರೂ.ಗಳು.

      ಸೈಟ್‌ಗಳು ಮಾರಾಟಕ್ಕಿವೆ

      ಸೈಟ್‌ಗಳು ಮಾರಾಟಕ್ಕಿವೆ

      * ಬನಶಂಕರಿ 6ನೇ ಹಂತ, 9ನೇ ಬ್ಲಾಕ್. ಆರಂಭಿಕ ಹಂತದ ಬಿಡ್ ದರ 39,072 ಚದರ ಮೀಟರ್‌ಗೆ

      * ಬಿ. ಟಿ. ಎಂ. 4ನೇ ಹಂತ, 2ನೇ ಬ್ಲಾಕ್‌ನಲ್ಲಿ. ಆರಂಭಿಕ ಬಿಡ್ 67, 320 ರೂ. ಚದರ ಮೀಟರ್‌ಗೆ

      ಹೆಚ್ಚಿನ ಮಾಹಿತಿಗಾಗಿ ವೆಬ್‌ ಸೈಟ್

      ಹೆಚ್ಚಿನ ಮಾಹಿತಿಗಾಗಿ ವೆಬ್‌ ಸೈಟ್

      ಜನರು ಸೈಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ http://eproc.karnataka.gov.in ಲಾಗಿನ್ ಆಗಬಹುದು ಅಥವ www.bdabangalore.org ವೈಬ್‌ಸೈಟ್‌ಗೆ ಭೇಟಿ ನೀಡಬಹುದು.

      ಸಹಾಯವಾಣಿ ಸಂಖ್ಯೆಗಳು : 080-23010900/23010901

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+