BDA: ಬೆಂಗಳೂರಲ್ಲಿ 6 ಹೊಸ ವಸತಿ ಬಡಾವಣೆ: 6,217 ಎಕರೆ ಭೂ ಸ್ವಾಧೀನ, ಆಸ್ತಿದಾರರು ಕೋಟ್ಯಾಧಿಪತಿ ಆಗುವುದು ಫಿಕ್ಸ್!
ಬೆಂಗಳೂರಿನಲ್ಲಿ ಮತ್ತೊಂದು ಅಭಿವೃದ್ಧಿ ಕಾಮಗಾರಿ ವೇಗ ಪಡೆದುಕೊಂಡಿದ್ದು ಆಸ್ತಿದಾರರಿಗೆ ಬಂಪರ್ ಬರುವ ನಿರೀಕ್ಷೆ ಮೂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಳೆದ ಹಲವು ತಿಂಗಳುಗಳಿಂದ ಪೂರ್ವ ಸಿದ್ಧತೆ ಮಾಡಿಕೊಂಡಿದ್ದ ಯೋಜನೆ ಇದೀಗ ಕಾರ್ಯರೂಪಕ್ಕೆ ಬರುತ್ತಿದೆ. ಬೆಂಗಳೂರಲ್ಲಿ ಮನೆ ಕಟ್ಟಿಕೊಳ್ಳಬೇಕು ಎಂದು ಕನಸು ಕಾಣುತ್ತಿರುವವರಿಗೆ ಇದೀಗ ಬಿಡಿಎ ಗುಡ್‌ನ್ಯೂಸ್ ಕೊಡಲು ಪ್ರಾರಂಭಿಸಿದೆ. ಆದರೆ, ಇದೇ ಸಂದರ್ಭದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಕೆಲವು ಆಸ್ತಿದಾರರು ಹಾಗೂ ರೈತರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಬರೋಬ್ಬರಿ 6,217 ಎಕರೆ ಭೂ ಸ್ವಾಧೀನ ಮಾಡಿಕೊಳ್ಳುವುದಕ್ಕೆ ಅನುಮೋದನೆ ನೀಡಿದೆ. ಈ ಮೂಲಕ ಬೆಂಗಳೂರಿನಲ್ಲಿ ಹೊಸ 6 ವಸತಿ ಬಡಾವಣೆ ಹಾಗೂ ದಶಪಥ ರಸ್ತೆ ನಿರ್ಮಾಣದ ಬೃಹತ್ ಯೋಜನೆಗೆ ಅಧಿಕೃತ ಚಾಲನೆ ಸಿಕ್ಕಂತೆ ಆಗಿದೆ.
ವನ್ನು ಬಿಡಿಎ ಕೈಗೆತ್ತಿಕೊಳ್ಳಲಿದೆ. ಈ ಆರು ಹೊಸ ಬಡಾವಣೆಗಳು ನಿರ್ಮಾಣ ಉದ್ದೇಶದಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ. ಆದರೆ ಈ ಭೂಸ್ವಾಧೀನಕ್ಕೆ ಬಂಗಾರದ ಬೆಲೆ ಕೊಡುವುದಕ್ಕೆ ಬಿಡಿಎ ಕೊಡುವುದಕ್ಕೆ ಸಿದ್ಧವಿದ್ದರೂ ವಿರೋಧ ವ್ಯಕ್ತವಾಗುತ್ತಿದೆ. ಅದರ ವಿವರ ಮುಂದೆ ನೋಡೋಣ.

ಭೂಮಿ ಬೆಲೆ ಹೆಚ್ಚಳ ನಿರೀಕ್ಷೆ: ಇನ್ನು ಈ ಯೋಜನೆಯ ಭಾಗವಾಗಿ ಪ್ರಮುಖವಾಗಿ ಬೆಂಗಳೂರು ದಕ್ಷಿಣ ಭಾಗದ ಬಿಎಮ್ ಕಾವಲ್, ಕಗ್ಗಲೀಪುರ, ಹುಲಿಮಂಗಲ, ಮತ್ತು ಹುಲ್ಲಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ. 6 ಬಡಾವಣೆ ನಿರ್ಮಾಣವಾಗುವ ಪ್ರದೇಶವು ಒಟ್ಟು 22 ಹಳ್ಳಿಗಳ ವ್ಯಾಪ್ತಿಗೆ ಬರುತ್ತದೆ. ಅಲ್ಲದೇ ಈಗಾಗಲೇ ಈ ಭಾಗದಲ್ಲಿ ಪ್ರಮುಖ ಯೋಜನೆಗಳು ಸಹ ಇರುವುದರಿಂದ ಈ ಭಾಗದಲ್ಲಿ ಭೂಮಿಗೆ ಚಿನ್ನದ ಬೆಲೆ ಬರುವ ನಿರೀಕ್ಷೆ ಮೂಡಿದೆ. ಈ ಭಾಗದಲ್ಲಿ ಭೂಮಿ ಇರುವವರು ಕೋಟ್ಯಾಧಿಪತಿಗಳಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಈ ಲೇಔಟ್ ಫೆರಿಫೆರಲ್ ರಿಂಗ್ ರಸ್ತೆ ಇಲ್ಲವೇ ಬೆಂಗಳೂರು ಬಿಸ್‌ನೆಸ್ ಕಾರಿಡಾರ್-2ರ ಪಕ್ಕದಲ್ಲೇ ನಿರ್ಮಾಣವಾಗಲಿದೆ. ಈ ಕಾರಣಕ್ಕೆ ಈ ಯೋಜನೆ ಮಹತ್ವ ಪಡೆದುಕೊಂಡಿದೆ. ಹೊಸೂರು ರಸ್ತೆ ಹಾಗೂ ಮೈಸೂರು ರಸ್ತೆಯನ್ನು ಸಹ ಈ ಯೋಜನೆ ಸಂಪರ್ಕಿಸಲಿದೆ. ನೈಸ್ ರಸ್ತೆಗೆ ಸಮಾನಾಂತರವಾಗಿ ಹೊಸ ರಸ್ತೆ ನಿರ್ಮಾಣವಾಗಲಿದೆ. ಈ ಎಲ್ಲಾ ಕಾರಣಗಳಿಗೆ ಈ ಭಾಗದಲ್ಲಿ ಭೂಮಿ ಬೆಲೆ ಗಗನಮುಖಿಯಾಗಿದ್ದು. ಈ ಭಾಗದಲ್ಲಿ ಭೂಮಿ ಇದ್ದರೆ ಕೋಟ್ಯಾಧಿಪತಿಗಳುವುದರಲ್ಲಿ ಅನುಮಾನವೇ ಇಲ್ಲ ಎಂದು ಹೇಳಲಾಗುತ್ತಿದೆ.
ಹಲವು ಯೋಜನೆಗಳ ಸಮಾಗಮ: ಇನ್ನು ಬಿಡಿಎ ಹೊಸ ಯೋಜನೆಯ ಭಾಗವಾಗಿ ಹಲವು ಪ್ರಮುಖ ಯೋಜನೆಗಳು ಬರಲಿವೆ. ಸಾಮಾನ್ಯವಾಗಿ ಒಂದು ಯೋಜನೆ ಜಾರಿಯಾದರೆ, ಆ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಿ ರಿಯಲ್ ಎಸ್ಟೇಟ್ ಬೂಸ್ಟ್ ಆಗುತ್ತದೆ. ಈ ರೀತಿ ಇರುವಾಗ ಮೂರ್ನಾಲ್ಕು ಯೋಜನೆಗಳು ಇರುವ ಭಾಗದಲ್ಲಿ ಮತ್ತೊಂದು ಬೃಹತ್ ಯೋಜನೆ ಅನುಷ್ಠಾನವಾಗುತ್ತಿರುವುದರಿಂದ ಸಹಜವಾಗಿಯೇ ಭೂಮಿ ಮಾರಾಟ ಹಾಗೂ ಭೂಮಿ ಖರೀದಿ ಪ್ರಕ್ರಿಯೆ ಜೋರಾಗಿದೆ ಎಂದು ಹೇಳಲಾಗಿದೆ.












Click it and Unblock the Notifications