BDA Flat: ಜ. 18ಕ್ಕೆ ಬಿಡಿಎ ಫ್ಲಾಟ್ ಮೇಳ, ದರ ಮತ್ತು ಇತರ ವಿವರಗಳು
ಬೆಂಗಳೂರು, ಜನವರಿ 16: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದಲ್ಲಿ ಮನೆ/ ಫ್ಲಾಟ್ ಕೊಳ್ಳುವವರಿಗೆ ಅನುಕೂಲವಾಗಲು ಫ್ಲಾಟ್ ಮೇಳವನ್ನು ಆಯೋಜಿಸಿದೆ. ಜನವರಿ 18ರಂದು ಫ್ಲಾಟ್ ಮೇಳ ನಡೆಯಲಿದೆ. ಬಿಡಿಎ ನಿರ್ಮಾಣ ಮಾಡಿರುವ ಮೂಲ ಸೌಕರ್ಯಗಳು ಇರುವ ಫ್ಲಾಟ್/ ಮನೆಗಳನ್ನು ಆಸಕ್ತರು ಖರೀದಿ ಮಾಡಬಹುದು.
ಬಿಡಿಎ ಕಣಿಮಿಣಿಕೆ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಮನೆ/ ಫ್ಲಾಟ್‌ಗಳನ್ನು ಮಾರಾಟ ಮಾಡಲು ಫ್ಲಾಟ್ ಮೇಳವನ್ನು ಆಯೋಜನೆ ಮಾಡಿದೆ. ಜನವರಿ 18ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಮೇಳ ನಡೆಯಲಿದೆ. 2 ಬಿಹೆಚ್‌ಕೆ ಮತ್ತು 3 ಬಿಹೆಚ್‌ಕೆ ಫ್ಲಾಟ್‌ಗಳು ಲಭ್ಯವಿದೆ. 1 ಬಿಹೆಚ್‌ಕೆ ಫ್ಲಾಟ್‌ಗಳು 14.50 ಲಕ್ಷ ರೂ. ದರದಲ್ಲಿ ಲಭ್ಯವಿದೆ.

ಬಿಡಿಎ ಫ್ಲಾಟ್/ಮನೆಗಳ ವಿವರ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಸುರಕ್ಷಿತ, ಮೂಲಭೂತ ಸೌಕರ್ಯವಿರುವ ಫ್ಲಾಟ್/ ಮನೆಗಳನ್ನು ಮಾರಾಟ ಮಾಡಲಾಗುತ್ತದೆ. ಕಣಿಮಿಣಿಕೆ ವಸತಿ ಯೋಜನೆಯ ವಿವರಗಳನ್ನು ಜನರ ಅನುಕೂಲಕ್ಕಾಗಿ ಬಿಡಿಎ ಜಾಹೀರಾತು ಮೂಲಕ ನೀಡಿದೆ.
ಫ್ಲಾಟ್‌ಗಳ ಹಂಚಿಕೆಗೆ ಸಂಬಂಧಿಸಿದಂತೆ ಕಣಿಮಿಣಿಕೆ ವಸತಿ ಸಮುಚ್ಛಯದ ಬಳಿ ಫ್ಲಾಟ್ ಮೇಳವನ್ನು ಆಯೋಜಿಸಲಾಗಿದೆ. ಫ್ಲಾಟ್‌ಗಳನ್ನು ಖರೀದಿಸಲು ಆಸಕ್ತ ಸಾರ್ವಜನಿಕರು ಈ ಮೇಳದಲ್ಲಿ ಪಾಲ್ಗೊಂಡು ಆಯಾ ಫ್ಲಾಟ್‌ಗಳ ಪ್ರಾರಂಭಿಕ ಠೇವಣಿ ಮೊತ್ತವನ್ನು ಡಿಡಿ/ ಆನ್‌ಲೈನ್ ಮೂಲಕ ಪಾವತಿಸಿದಲ್ಲಿ ಸ್ಥಳದಲ್ಲಿಯೇ ಹಂಚಿಕೆ ಪತ್ರವನ್ನು ನೀಡಲಾಗುತ್ತದೆ ಎಂದು ಹೇಳಿದೆ. ಅಲ್ಲದೇ ಸಾಲ ಸೌಲಭ್ಯಕ್ಕಾಗಿ ಬ್ಯಾಂಕ್‌ಗಳ ವ್ಯವಸ್ಥೆಯನ್ನು ಸಹ ಸ್ಥಳದಲ್ಲಿಯೇ ಮಾಡಲಾಗಿರುತ್ತದೆ.
ವಸತಿ ಸಮುಚ್ಛಯದ ವಿಶೇಷತೆಗಳು
* 50 ಎಕರೆಗಳಷ್ಟು ವಿಸ್ತಾರವಾದ ಭೂಪ್ರದೇಶದಲ್ಲಿ ಕಣಿಮಿಣಿತ ವಸತಿ ಯೋಜನೆಗಳು ಫೇಸ್ 1, 2, 3, 4 ಮತ್ತು 5 ಅನ್ನು ನಿರ್ಮಿಸಲಾಗಿದ್ದು, ಸುತ್ತಲೂ ಹಸಿರು ವಾತಾವರಣವನ್ನು ಹೊಂದಿದೆ.
* ಎತ್ತರದ ಮತ್ತು ಹಸಿರು ಪರಿಸರದಲ್ಲಿ ನೆಲೆಗೊಂಡಿದೆ.
* ನಿರ್ಮಾಣ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಹಸಿರು ಪರಿಸರ ಪರಿಕಲ್ಪನೆಯನ್ನು ಅಳವಡಿಸಲಾಗಿದೆ.
* ಬೆಂಗಳೂರು ಮೈಸೂರು ಹೆದ್ದಾರಿಯಿಂದ 1 ಕಿ. ಮೀ. ದೂರದಲ್ಲಿದೆ.
* ಚಲ್ಲಪಟ್ಟ ಮೆಟ್ರೋದಿಂದ 3 ಕಿ. ಮೀ. ಗಿಂತ ಕಡಿಮೆ ದೂರದಲ್ಲಿದೆ.
* ರೇರಾ ಪ್ರಮಾಣೀಕರಿಸಿದೆ.
* ಪ್ರಸ್ತುತ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು ಮಂಚನಬೆಲೆ ಅಣಿಕಟ್ಟಿನಿಂದ ಖಾಯಂ ನೀರು ಸರಬರಾಜು ಸೌಕರ್ಯ ಕಲ್ಪಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.
* ಜ್ಯುಡಿಷಿಯಲ್ ಲೇಔಟ್ ಮೂಲಕ ಬೆಂ-ಮೈ ಎಕ್ಸ್‌ಪ್ರೆಸ್ ಮಾರ್ಗವನ್ನು ಸಂಪರ್ಕಿಸುತ್ತದೆ.
* ಹತ್ತಿರದಲ್ಲೇ ನಾರಾಯಣ ಗುರುಕುಲಾ ವಿಶ್ವವಿದ್ಯಾಲಯ, ಕ್ರೈಸ್ಟ್ ವಿಶ್ವವಿದ್ಯಾಲಯ, ಡೆಲ್ಲಿ ಪಬ್ಲಿಕ್ ಶಾಲೆಗಳಿವೆ.
* ಹೆಜ್ಜಾಲ ರೈಲು ನಿಲ್ದಾಣಕ್ಕೆ 2 ಕಿ. ಮೀ. ದರದಲ್ಲಿದೆ.
* ಹೆಜ್ಜಾಲ ಟೋಲ್ ಪ್ಲಾಜಾದಲ್ಲಿ ಮೆಟ್ರೋ ನಿಲ್ದಾಣವನ್ನು ಪ್ರಸ್ತಾಪಿಸಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ಸಂಖ್ಯೆಗಳು ಕಣಿಮಿಣಿಕ 6362512234, 8747877469, 7795869883.
ವೆಬ್‌ಸೈಟ್ www.housing.bdabangalore.org / www.bda.karnataka.gov.in












Click it and Unblock the Notifications