BDA land: ಬಿಡಿಎ ನಿವೇಶನ ಖರೀದಿಸಿ ಮನೆ ಕಟ್ಟಿಲ್ಲದವರಿಗೆ ಕಾದಿದೆ ಶಾಕ್.!- ಮಾಹಿತಿ, ವಿವರ
ಬೆಂಗಳೂರು, ಮಾರ್ಚ್, 04: ಬಿಡಿಎ ನಿವೇಶನ ಖರೀದಿ ಮಾಡಿ ಮನೆ ನಿರ್ಮಾಣ ಮಾಡದೇ ಖಾಲಿ ಬಿಟ್ಟಂತಹವರಿಗೆ ಶೇಕಡಾ 25ರಷ್ಟು ದಂಡ ಹಾಕಲು ಬಿಡಿಎ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಎಷ್ಟು ವರ್ಷಗಳಿಂದ ಹಾಗೆಯೇ ಮನೆ ಕಟ್ಟದೆ ಬಿಟ್ಟಿರುವ ನಿವೇಶನಗಳಿಗೆ ದಂಡ ವಿಧಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬಿಡಿಎ ಅಭಿವೃದ್ಧಿ ಪಡಿಸಿದ ಬಡಾವಣೆಗಳಲ್ಲಿ ನಿವೇಶನ ಖರೀದಿ ಮಾಡಿದ 5 ವರ್ಷಗಳ ಬಳಿಕವೂ ಮನೆ ನಿರ್ಮಾಣ ಮಾಡದಿರುವವರಿಗೆ ಮಾರ್ಗಸೂಚಿ ಅನ್ವಯದ ಮೇರೆಗೆ ಶೇಕಡಾ 10ರಷ್ಟು ದಂಡ ಕಟ್ಟಿಸಿಕೊಳ್ಳಲು 2020ರಲ್ಲಿ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿತ್ತು.

ದಂಡದ ಪಟ್ಟಿ ಹೀಗಿತ್ತು
* 20-30 ಅಳತೆಯ ನಿವೇಶನ - 5,000 ರೂಪಾಯಿ
* 50-80 ಅಳತೆಯ ನಿವೇಶನ - 3.75 ಲಕ್ಷ ರೂಪಾಯಿ
* 50-80ಕ್ಕೂ ಮೇಲ್ಪಟ್ಟ ನಿವೇಶನಗಳಿಗೆ 6 ಲಕ್ಷ ರೂಪಾಯಿ ನಿಗಧಿ ಮಾಡಲಾಗಿತ್ತು
ಇನ್ನು ಇದೀಗ ಇದನ್ನು ಶೇಕಡಾ 25ಕ್ಕೆ ಏರಿಕೆ ಮಾಡಲು ಚಿಂತನೆ ಮಾಡಲಾಗಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆ ಇದನ್ನು ಬಹಿರಂಗಪಡಿಸುತ್ತಿಲ್ಲ. ನಂತರ ಘೋಷಣೆ ಆಗುವ ಸಾಧ್ಯತೆಗಳಿದ್ದು, ಮುಂದಿನ ದಿನಗಳಲ್ಲಿ 5 ವರ್ಷಗಳ ನಂತರವೂ ಮನೆ ನಿರ್ಮಾಣ ಮಾಡದಿದ್ದವರು ಭಾರೀ ದಂಡ ತೆತ್ತಬೇಕಾಗುತ್ತದೆ.
ಬಡವರು ಸೂರು ಕಟ್ಟಿಕೊಳ್ಳಲಿ ಎಂಬ ಉದ್ದೇಶದಿಂದ ಬಿಡಿಎ ಬಡಾವಣೆಗಳನ್ನು ನಿರ್ಮಿಸಿ, ಕಡಿಮೆ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿಕೊಡುವ ಕೆಲಸವನ್ನು ಮಾಡುತ್ತಿದೆ. ಆದರೆ ಸಿರಿವಂತರು ಇವುಗಳನ್ನು ಖರೀದಿಸಿ ನಂತರ ಹೆಚ್ಚುವರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹೂಡಿಕೆ ಉದ್ದೇಶಕ್ಕಾಗಿಯೇ ಖರೀದಿಸಿ ವರ್ಷಾನುಗಟ್ಟಲೇ ಮನೆ ಕಟ್ಟದೆ ಹಾಗೆಯೇ ಖಾಲಿ ಬಿಟ್ಟಿರುತ್ತಾರೆ. ಈ ಖಾಲಿ ನಿವೇಶನಗಳಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೀವ್ರ ತೊಂದರೆ ಆಗುತ್ತಿತ್ತು.
ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಜೊತೆಗೆ ಗಿಡ ಗಂಟಿಗಳು ಬೆಳೆದು, ಹಾವು, ಚೇಳು, ಇಲಿ ಮತ್ತಿತರ ಜಂತುಗಳ ತಾಣವಾಗುತ್ತಿತ್ತು. ಆದ್ದರಿಂದ ಶೇಕಡಾ 10ರಷ್ಟು ದಂಡ ವಿದಿಸಿದರೂ ಖಾಲಿ ನಿವೇಶನದಾರರು ಎಚ್ಚೆತ್ತುಕೊಂಡಿರಲಿಲ್ಲ. ಈ ಹಿನ್ನೆಲೆ ದಂಡದ ಮೊತ್ತದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಲು ಬಿಡಿಎ ಮುಂದಾಗಿದೆ.
ಬಿಡಿಎ ಯಾವುದೇ ಬಡಾವಣೆಗಳನ್ನು ನಿರ್ಮಿಸಿದ ನಂತರ 10 ವರ್ಷಗಳ ಕಾಲ ತನ್ನ ಸುಪರ್ದಿಯಲ್ಲೇ ಇಟ್ಟುಕೊಂಡಿರುತ್ತದೆ. ಕೆಲವರು ಈ ಸಮಯದಲ್ಲಿ ಮನೆ ನಿರ್ಮಿಸಿಕೊಂಡಿರುತ್ತಾರೆ. ಇನ್ನೂ ಕೆಲವರು ಖಾಲಿ ಜಾಗವನ್ನು ಹಾಗೆಯೇ ಇಟ್ಟುಕೊಂಡು ನಂತರ ಮಾರಾಟ ಮಾಡಲು ಬಿಡಿಎ ಬಳಿ ಬರುತ್ತಾರೆ.
ಇನ್ನೂ ಕೆಲವರು 20 ವರ್ಷಗಳಾದರೂ ಖಾಲಿಯಿಟ್ಟುಕೊಂಡು, ನಂತರ ಮಾರಾಟ ಮಾಡಲು ಆಗಮಿಸುತ್ತಾರೆ. ಆದ್ದರಿಂದ ಅಂತಹವರಿಗೆ ದಂಡ ವಿದಿಸುವ ನಿಯಮವನ್ನು ಜಾರಿ ಮಾಡಲಾಗಿದ್ದು, ಇದೀಗ ಮಾರ್ಗಸೂಚಿ ದರ ಹೆಚ್ಚಿಸಿ ಪರಿಷ್ಕರಿಸಲು ನಿರ್ಧಾರ ಮಾಡಲಾಗಿದೆ.












Click it and Unblock the Notifications