BDA Site: ಮನೆ, ವಿಲ್ಲಾ ಖರೀದಿದಾರರಿಗೆ ಸರ್ಕಾರದಿಂದ ಗುಡ್‌ನ್ಯೂಸ್
ಬೆಂಗಳೂರು, ಮೇ 12: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಭೂಮಿ ಮೌಲ್ಯ, ಮನೆ ಬಾಡಿಗೆ, ಕಟ್ಟಡಗಳ ಖರೀದಿ ದರ ಕಾರಣಕ್ಕೆ ಇಲ್ಲಿ ಸ್ವಂತ ಸೂರು ಹೊಂದಬೇಕು ಎಂಬ ಅದೆಷ್ಟೋ ಜನರ ಆಸೆ ಈಡೇರಿವುದೇ ಇಲ್ಲ. ಇಂತಹ ಆಸೆ ಹೊಂದಿದವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ನಗರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವತಿಯಿಂದ ಬೃಹತ್ ಮೇಳ ಆಯೋಜಿಸಲಾಗಿದೆ. ಇದರಲ್ಲಿ ನೀವು ನಿಮ್ಮ ಕನಸಿಮ ಮನೆ, ಫ್ಲಾಟ್, ವಿಲ್ಲಾ ಖರೀದಿಸಲು ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ನಿರ್ಮಿಸಿರುವ ಫ್ಲಾಟ್‌ಗಳ ಹಂಚಿಕೆಗಾಗಿ ಇದೇ ಮೇ 17ರಂದು ಬೆಳಗ್ಗೆ 9.00 ಗಂಟೆಯಿಂದ ಸಂಜೆ 5.00 ರವರೆಗೆ "ಕೊಮ್ಮಘಟ್ಟ ವಸತಿ ಸಮುಚ್ಚಯ" ದ ಬಳಿ "ಫ್ಲಾಟ್ ಮೇಳ" ಹಮ್ಮಿಕೊಂಡಿದೆ. ಫ್ಲಾಟ್‌ಗಳನ್ನು ಖರೀದಿಸಲು ಆಸಕ್ತ ಸಾರ್ವಜನಿಕರು ಈ ಮೇಳದಲ್ಲಿ ವೀಕ್ಷಿಸಲು ಆಯಾ ಫ್ಲಾಟ್‌ಗಳ ಪ್ರಾರಂಭಿಕ ಠೇವಣಿ 25% ಮೊತ್ತವನ್ನು ಡಿಡಿ / ಆನ್‌ಲೈನ್ ಮೂಲಕ ಪಾವತಿಸಿದ ಸ್ಥಳದಲ್ಲಿಯೇ ಹಂಚಿಕೆ ಪತ್ರವನ್ನು ನೀಡಲಾಗುವುದು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ವತಿಯಿಂದ ನಿರ್ಮಿಸಲಾದ ಕಣಿಮಿಣಿಕೆ ವಸತಿ ಯೋಜನೆ ಹಾಗೂ ಡಾ.ಪುನೀತ್ ರಾಜ್‌ಕುಮಾರ್ ಪ್ರೈಡ್ ವಿಲ್ಲಾ / ವಸತಿ ಯೋಜನೆ ಬಡಾವಣೆಯ ಫ್ಲಾಟ್‌ಗಳ ಹಂಚಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ತಿಳಿಸಿದೆ.
ಹೊಸ ಫ್ಲಾಟ್, ವಿಲ್ಲಾಗಳ ವೈಶಿಷ್ಟ್ಯತೆಗಳು
ನಾಡಪ್ರಭು ಕೆಂಪೇಗೌಡ ಬಡಾವಣೆ, ಕೋಮ್ಯಪಟ್ಟ ಗ್ರಾಮ ವಸತಿ ಯೋಜನೆಯಡಿ ನೀವು 2BHK, 3BHK ಫ್ಲಾಟ್‌ಗಳು ಲಭ್ಯ ಇವೆ. ವಿಶಾಲ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಸಹಿತ ಈ ಮನೆಗಳನ್ನು ನಿರ್ಮೀಸಲಾಗಿದೆ. 1150 ಗಾತ್ರದ ವಿಸ್ತಾರವಾದ ಭೂಪ್ರದೇಶದಲ್ಲಿ ಕೊನ್ಯುಘಟ್ಟ ವಸತಿ ಯೋಜನೆಗಳು ಬೆಸ್ 1, 2 ಮತ್ತು ನಿರ್ಮಿಸಲಾಗಿದೆ. ಸುತ್ತಲೂ ಹಸಿರು ವಾತಾವರಣವನ್ನು ಹೊಂದಿದೆ.
ಎತ್ತರದ ಮತ್ತು ಹಸಿರು ಪರಿಸರದಲ್ಲಿ ನೆಲೆಗೊಂಡಿರುವ ಕಟ್ಟಡಗಳನ್ನು ನಿರ್ಮಿಸು ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಹಸಿರು ಪರಿಸರ ಪರಿಕಲ್ಪನೆಯವನ್ನು ಅಳವಡಿಸಲಾಗಿದೆ. ಬೆಂಗಳೂರು-ಮೈಸೂರು ರಸ್ತೆಯಿಂದ 15 ಕಿ.ಮೀ. ದೂರದಲ್ಲಿದೆ. ಚಲ್ಲಘಟ್ಟ ಮೆಟ್ರೋದಿಂದ 2.0 ಕಿ.ಮೀಗಿಂತ ಕಡಿಮೆ ದೂರದಲ್ಲಿದೆ. ರೇರಾ ಪ್ರಮಾಣೀಕರಿಸಿದೆ.
ಪ್ರಸ್ತುತ ಕೊಳವೆ ಬಾವಿಗಳ ನೀರು ಸರಬರಾಜು ಮಾಡಲಾಗುತ್ತಿದ್ದು, ಬೆಂಗಳೂರು ಜಲಮಂಡಳಿ ವತಿಯಿಂದ ನೀರು ಸರಬರಾಜು ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಹತ್ತಿರದಲ್ಲೇ ರಾಜರಾಜೇಶ್ವರಿ ಇಂಜಿನಿಯರಿಂಗ್ ವೈದ್ಯಕೀಯ ಮತ್ತು ದಂತ ಕಾಲೇಜು ಹಾಗೂ ಆಸ್ಪತ್ರೆ ಆರ್.ವಿ.ರಸ್ತೆ ಇಂಜಿನಿಯರಿಂಗ್ ಕಾಲೇಜುಗಳು ಇವೆ. ಈ ಮನೆಗಳು ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಕೇವಲ 06 ಕಿಲೋ ಮೀಟರ್ ದೂರದಲ್ಲಿದೆ.
ಆಸಕ್ತ ಖರೀದಿದಾರರು ಹೆಚ್ಚಿನ ಮಾಹಿತಿಗಾಗಿ ಕೊಮ್ಮಘಟ್ಟ ಮೊಬೈಲ್ ಸಂಪರ್ಕ: 87478 77469 /63625 12234 / 96202 43018/ 98452 00299/ 77952 63167 ಇಲ್ಲವೇ ಅಧಿಕೃತ ವೆಬ್‌ಸೈಟ್ http://www.kbda.karnataka.gov.in/ ಗೆ ಸಂಪರ್ಕಿಸುವಂತೆ ಮಾಹಿತಿ ನೀಡಲಾಗಿದೆ.












Click it and Unblock the Notifications