BDA Flat: ಡಿಸೆಂಬರ್ 14ರಂದು ಬಿಡಿಎ ಫ್ಲಾಟ್‌ ಮೇಳ, ವಿವರ

ಬೆಂಗಳೂರು, ಡಿಸೆಂಬರ್ 09: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಗರದಲ್ಲಿ ಮನೆ/ ಫ್ಲಾಟ್ ಕೊಂಡುಕೊಳ್ಳಲು ಬಯಸುವವರಿಗೆ ಸಿಹಿಸುದ್ದಿ ನೀಡಿದೆ. ಎರಡು ಪ್ರದೇಶದಲ್ಲಿರುವ ಮನೆ/ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಡಿಸೆಂಬರ್ 14ರಂದು ಬಿಡಿಎ ಫ್ಲಾಟ್ ಮೇಳ ಆಯೋಜನೆ ಮಾಡಿದೆ. ಆಸಕ್ತರು, ಅಗತ್ಯ ದಾಖಲೆಗಳ ಜೊತೆ ಮೇಳದಲ್ಲಿ ಪಾಲ್ಗೊಂಡು ಸ್ವಂತ ಮನೆ ಕನಸನ್ನು ನನಸಾಗಿಸಿಕೊಳ್ಳಬಹುದು.

ಬಿಡಿಎ ಫ್ಲಾಟ್ ಮೇಳದ ಕುರಿತು ಜಾಹೀರಾತು ಮೂಲಕ ಮಾಹಿತಿ ನೀಡಲಾಗಿದೆ. ಕಣಿಮಿಣಿಕೆ ಮತ್ತು ತಿಪ್ಪಸಂದ್ರ ವಸತಿ ಯೋಜನೆಗಳಲ್ಲಿ ಲಭ್ಯವಿರುವ 2 ಮತ್ತು 3 ಬಿಹೆಚ್‌ಕೆ ಫ್ಲಾಟ್‌ಗಳನ್ನು ಹಂಚಿಕೆ ಮಾಡಲು ಮೇಳವನ್ನು ಆಯೋಜಿಸಲಾಗಿದೆ. ಡಿಸೆಂಬರ್ 14ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಮೇಳ ನಡೆಯಲಿದೆ.

BDA Flat Mela On December 14 To Sale Flat In Kanmanike And Thippasandra

ಈ ಮೇಳ ಕಣಿಮಿಣಿಕೆ ವಸತಿ ಯೋಜನೆ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿದೆ. ಮನೆ/ ಫ್ಲಾಟ್ ಕೊಂಡುಕೊಳ್ಳಲು ಬಯಸುವವರು ಪ್ರಾಥಮಿಕ ಡಿಪಾಸಿಟ್ ಮೊತ್ತವನ್ನು ಡಿಡಿ/ ಆನ್‌ಲೈನ್ ಮೂಲಕ ಪಾವತಿ ಮಾಡಿ ತಾತ್ಕಾಲಿಕವಾದ ಹಂಚಿಕೆ ಪತ್ರವನ್ನು ಪಡೆಯಬಹುದು ಎಂದು ಬಿಡಿಎ ಮಾಹಿತಿ ನೀಡಿದೆ. ಮೇಳದಲ್ಲಿಯೇ ಬ್ಯಾಂಕ್ ಲೋನ್ ನೀಡುವ ಅವಕಾಶವನ್ನು ಸಹ ಮಾಡಲಾಗಿದೆ.

ವಸತಿ ಯೋಜನೆಯ ವಿವರಗಳು: ಕಣಿಮಿಣಿಕೆ ವಸತಿ ಯೋಜನೆಯೂ 50 ಎಕರೆ ಪ್ರದೇಶದಲ್ಲಿ ಹಸಿರು ವಾತಾವರಣದಲ್ಲಿ ನಿರ್ಮಾಣಗೊಂಡಿದೆ. ಕಣಮಿಣಿಕೆ ವಸತಿ ಯೋಜನೆಯ 1, 2, 3, 4 ಮತ್ತು 5ನೇ ಹಂತವನ್ನು ಒಳಗೊಂಡಿದೆ. ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಇಲ್ಲಿ ಮನೆ/ ಫ್ಲಾಟ್ ನಿರ್ಮಾಣ ಮಾಡಲಾಗಿದೆ.

ಈ ಪ್ರದೇಶ ಬೆಂಗಳೂರು-ಮೈಸೂರ ಹೆದ್ದಾರಿಯಿಂದ 1 ಕಿ. ಮೀ. ದೂರದಲ್ಲಿದೆ. ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಿಂದ 3 ಕಿ. ಮೀ.ಗೂ ಕಡಿಮೆ ದೂರದಲ್ಲಿದೆ. ಮಂಚನಬೆಲೆ ಡ್ಯಾಂನಿಂದ ಈ ಪ್ರದೇಶಕ್ಕೆ ಶಾಶ್ವತ ನೀರು ಸೌಕರ್ಯವಿದೆ. ಜುಡಿಶಿಯಲ್ ಲೇಔಟ್ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ತಲುಪಬಹುದು. ಹೆಜ್ಜಾಲ ರೈಲು ನಿಲ್ದಾಣದಿಂದ 2 ಕಿ. ಮೀ. ದೂರದಲ್ಲಿದೆ. ಹತ್ತಿರದಲ್ಲಿ ನಾರಾಯಣ ಯೂನಿರ್ವಸಿಟಿ, ಕ್ರೈಸ್ಟ್ ಯೂನಿರ್ವಸಿಟಿ, ದೆಹಲಿ ಪಬ್ಲಿಕ್ ಸ್ಕೂಲ್ ಇದೆ. ಹೆಜ್ಜಾಲ ಟೋಲ್ ಪ್ಲಾಜಾ ಬಳಿ ನಮ್ಮ ಮೆಟ್ರೋ ನಿಲ್ದಾಣಕ್ಕೂ ಯೋಜನೆ ರೂಪಿಸಲಾಗಿದೆ.

ತಿಪ್ಪಸಂದ್ರ ವಸತಿ ಯೋಜನೆಯನ್ನು ಜೆ. ಪಿ. ನಗರ 9ನೇ ಫೇಸ್‌ನಲ್ಲಿ ನಿರ್ಮಾಣ ಮಾಡಲಾಗಿದೆ. ಇದು ಬಿಡಿಎ ಅನುಮೋದಿತ ಮತ್ತು ಇತರ ಲೇಔಟ್‌ಗಳಿಂದ ಸುತ್ತುವರೆದಿದೆ. ಶಾಶ್ವತ ವಿದ್ಯುತ್ ವ್ಯವಸ್ಥೆಯನ್ನು ಮಾಡಲಾಗಿದೆ. ಸೌತ್ ಫೋರಂ ಮಾಲ್ ಮತ್ತು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ 1 ಕಿ. ಮೀ. ದೂರದಲ್ಲಿದೆ. ಶ್ರೀ ಕುಮಾರನ್ಸ್‌ ಸ್ಕೂಲ್ ಮತ್ತು ಕೆಎಸ್‌ಐಟಿ ಕಾಲೇಜು ಸಮೀಪದಲ್ಲಿದೆ. ಈ ಪ್ರದೇಶಕ್ಕೆ ಬೋರ್‌ವೆಲ್ ಮತ್ತು ಬೆಂಗಳೂರು ಜಲಮಂಡಳಿ ವತಿಯಿಂದ ಶಾಶ್ವತ ನೀರಿನ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಅಲ್ಲದೇ ಮನೆ/ ಫ್ಲಾಟ್ ಮೇಳದಲ್ಲಿ 1 ಬಿಹೆಚ್‌ಕೆ ಫ್ಲಾಟ್‌ಗಳು 11.20 ಲಕ್ಷದಿಂದ 13.20 ಲಕ್ಷದ ತನಕ ಆಲೂರು, ಗುಂಜೂರು ಮತ್ತು ಇತರ ಲೇಔಟ್‌ಗಳಲ್ಲಿ ಲಭ್ಯವಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಬಿಡಿಎ ವೆಬ್‌ಸೈಟ್‌ https://www.bdabangalore.org/ ಭೇಟಿ ನೀಡಬಹುದು.

ಕಣಿಮಿಣಿಕೆ ವಸತಿ ಯೋಜನೆ ಮಾಹಿತಿಗಾಗಿ 6362512234/ 8747877469 ಸಂಖ್ಯೆಗೆ ಮತ್ತು ತಿಪ್ಪಸಂದ್ರ ವಸತಿ ಯೋಜನೆಯ ಮಾಹಿತಿಗೆ 7795869883 ಸಂಖ್ಯೆಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+