ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಬಡಾವಣೆ: 5 ಸಾವಿರ ಜನರಿಗೆ ಹೊಡೆಯಿತು 'ಲಾಟರಿ'!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 25: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆಂಪೇಗೌಡ ಬಡಾವಣೆಯ ಎರಡನೇ ಹಂತದ 4,971 ನಿವೇಶನವನ್ನು ಸಿಎಂ ಗೃಹಕಚೇರಿ ಕೃಷ್ಣದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹಂಚಿಕೆ ಮಾಡಿದರು.

ಬಳಿಕ ಮಾತನಾಡಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಪ್ರಸ್ತುತ ಹಂಚಿಕೆ ಮಾಡಿದ ನಿವೇಶನದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.20 ನಷ್ಟು ನಿವೇಶನಕ್ಕೆ ಶೇ.50 ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಈ ಭಾಗದಲ್ಲಿ ಮೂಲಸೌಕರ್ಯಕ್ಕೆ 2770ಕೋಟಿ ರೂ.ನೀಡಲಾಗಿದೆ.

ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ ಸೆ.25ರಂದು ಬಿಡಿಎಯ 5 ಸಾವಿರ ನಿವೇಶನ ಹಂಚಿಕೆ

ಪ್ರಸ್ತುತ ನಿವೇಶನ ಪಡೆದುಕೊಂಡ ಜನರಲ್‌ ಕ್ಯಾಟಗರಿಯವರು ಎರಡು ತಿಂಗಳೊಳಗಾಗಿ ಹಣ ಪಾವತಿ ಮಾಡದಿದ್ದರೆ ಶೇ.18 ರಷ್ಟು ಬಡ್ಡಿ ಹಾಕಲಾಗುತ್ತದೆ. ಈ ಅವಧಿಯೂ ಮೀರಿದರೆ ಶೇ.21ರಷ್ಟು ಬಡ್ಡಿ ಹಾಕಲಾಗುವುದು. ಪರಿಶಿಷ್ಟ ಜಾತಿ ಅವರಿಗೆ ಮೂರು ವರ್ಷದ ಅವಧಿ ನೀಡಲಾಗಿದೆ ಎಂದರು.

BDA allocates 5k sites in Kempegowda layout second phase

ಸೈಟ್ ಸಿಗದಿದ್ದರೂ ಠೇವಣಿ ವಾಪಸ್ ಖಾತ್ರಿ ಕೊಟ್ಟ ಬಿಡಿಎ ಸೈಟ್ ಸಿಗದಿದ್ದರೂ ಠೇವಣಿ ವಾಪಸ್ ಖಾತ್ರಿ ಕೊಟ್ಟ ಬಿಡಿಎ

ವಿಧಾನ ಸಭಾ ಚುನಾವಣೆಗೂ ಮುನ್ನವೇ ಎರಡನೇ ಹಂತದ ನಿವೇಶನಗಳನ್ನು ಹಂಚಿಕೆ ಮಾಡಬೇಕಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಅಡ್ಡಬಂದಿದ್ದರಿಂದ ತಡವಾಗಿದೆ. ಈ ಐದು ಸಾವಿರ ಮಂದಿಯನ್ನು ಹೊರತುಪಡಿಸಿ ಈಗಾಗಲೇ ಠೇವಣಿ ನೀಡಿ ನಿವೇಶನ ದೊರೆಯದ ಜನರಿಗೆ ಠೇವಣಿ ಹಣವನ್ನು ಹಿಂದಿರುಗಿಸಲಾಗುತ್ತದೆ.

16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ 16 ಕೋಟಿ ವೆಚ್ಚದಲ್ಲಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿಗೆ ಸಿಎಂ ಚಾಲನೆ

ಸಂದರ್ಭದಲ್ಲಿ ಸಮಾಜ ಕಲ್ಯಾನ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ಉಪಸ್ಥಿತರಿದ್ದರು.

English summary
Bangalore development authority has allocated 4,971 sites in second phase of Kempegowda layout on Tuesday. The authority has announced Rs.2770 crores package for infrastructure development in the area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X