ಬಿಡಿಎನಿಂದ ಎಸ್ಸಿ, ಎಸ್ ಟಿಗೆ 6.7 ಲಕ್ಷಕ್ಕೆ ಒಂದು ಬಿಎಚ್ ಕೆ ಫ್ಲಾಟ್
ಬೆಂಗಳೂರು, ಜೂನ್ 14: ಪರಿಶಿಷ್ಟರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಇಲ್ಲೊಂದು ಖುಷಿಯಾದ ಸುದ್ದಿಯಿದೆ. ಬೆಂಗಳೂರಿನಲ್ಲಿ ಮನೆಯಿಲ್ಲವಲ್ಲ ಎಂದು ಕೊರಗುತ್ತಿರುವವರಂತೂ ಇದನ್ನು ಓದಲೇಬೇಕು. ಬಿಡಿಎನಿಂದ ನಿರ್ಮಾಣವಾಗಿರುವ ಒಂದು ಬಿಎಚ್ ಕೆ ಫ್ಲಾಟ್ ಗಳಿಗೆ ರಿಯಾಯಿತಿ ದೊರೆಯಲಿದೆ.
ಪರಿಶಿಷ್ಟರಿಗೆ ಶೇ 44ರಷ್ಟು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ 25ರಷ್ಟು ರಿಯಾಯಿತಿ ನೀಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರು ವಿಧಾನಸಭೆಯಲ್ಲಿ ತಿಳಿಸಿದರು. ಜೆಡಿಎಸ್ ನ ಶಿವಲಿಂಗೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೋಟು ನಿಷೇಧದಿಂದ ಬಿಡಿಎ ಫ್ಲಾಟ್ ಗಳ ಮಾರಾಟದಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದರು.

ಇನ್ನು ಚಾಲಕರು, ಅಡುಗೆ ಕೆಲಸದವರು ಹಾಗೂ ವರ್ಕ್ ಶಾಪ್ ಗಳಲ್ಲಿ ಕೆಲಸ ಮಾಡುವವರಿಗಾಗಿ ಒತ್ತುವರಿ ತೆರವು ಮಾಡಿದ ಸರಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಡುವ ಉದ್ದೇಶವಿದೆ. ಜತೆಗೆ ಮೆಟ್ರೋ ರೈಲು ಸಂಚರಿಸುವ ಜಾಗಗಳ ಸುತ್ತಮುತ್ತ ಟೌನ್ ಶಿಪ್ ನಿರ್ಮಾಣದ ಉದ್ದೇಶ ಇದೆ ಎಂದು ಮಾಹಿತಿ ನೀಡಿದರು.
ಫ್ಲಾಟ್ ದರದ ಮಾಹಿತಿ
ಒಂದು ಬಿಎಚ್ ಕೆ ಫ್ಲಾಟ್ ನ ದರ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ 6.7 ಲಕ್ಷ, ಆರ್ಥಿಕವಾಗಿ ಹಿಂದುಳಿದವರಿಗೆ 9 ಲಕ್ಷ, ಇತರರಿಗೆ 12 ಲಕ್ಷ.












Click it and Unblock the Notifications