ಬಿಬಿಎಂಪಿ ವೆಬ್‌ಸೈಟ್‌ನ ಹೊಸ ವಿನ್ಯಾಸ ನೋಡಿ

ಬೆಂಗಳೂರು, ಜುಲೈ 10 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೆಬ್‌ಸೈಟ್‌ನಲ್ಲಿ ಯಾವ ಮಾಹಿತಿ ಎಲ್ಲಿ ಸಿಗುತ್ತದೆ? ಎಂದು ಹುಡುಕುವುದು ಸಾಹಸದ ಕೆಲಸವಾಗಿತ್ತು. ಆದರೆ, ಈಗ ಬಿಬಿಎಂಪಿ ತನ್ನ ವೆಬ್‌ಸೈಟ್‌ಗೆ ಹೊಸ ಸ್ವರೂಪ ಕೊಟ್ಟಿದೆ. ಅಗತ್ಯ ಮಾಹಿತಿ ಸುಲಭವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.

ವೆಬ್‌ಸೈಟ್ ನವೀಕರಣ ಕಾರ್ಯವನ್ನು ಈಗ ಆರಂಭಿಸಲಾಗಿದೆ. ಟೆಂಡರ್‌, ಬಿಲ್‌ ಪಾವತಿ, ಮತದಾರರ ಪಟ್ಟಿ ಸೇರಿದಂತೆ ವಿವಿಧ ವಿಷಯಗಳನ್ನು ಸದ್ಯದಲ್ಲೇ ಅಳವಡಿಸಲಾಗುತ್ತದೆ. ಇನ್ನೊಂದು ವಾರದಲ್ಲಿ ನೂತನ ಸ್ವರೂಪದ ವೆಬ್ ಸೈಟ್ ಸಿದ್ಧವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಬಿಬಿಎಂಪಿ ವೆಬ್ ಸೈಟ್ ಲಿಂಕ್]

bbmp

ಹಿಂದಿನ ವೆಬ್‌ಸೈಟ್ ಮುಖಪುಟದಲ್ಲಿ ನೂರಾರು ಮಾಹಿತಿಗಳು ತುಂಬಿಕೊಂಡಿದ್ದವು. ಯಾವ ಮಾಹಿತಿ ಎಲ್ಲಿದೆ? ಎಂದು ಹುಡುಕುವುದು ಕಷ್ಟವಾಗಿತ್ತು. ಆದ್ದರಿಂದ, ವೆಬ್‌ಸೈಟ್ ವಿನ್ಯಾಸವನ್ನು ಬದಲಾವಣೆ ಮಾಡಲು ಬಿಬಿಎಂಪಿ ನಿರ್ಧರಿಸಿತ್ತು. ಅದರ ಕಾರ್ಯಗಳಿಗೆ ಈಗ ಚಾಲನೆ ಸಿಕ್ಕಿದೆ.

ಹೊಸ ವಿನ್ಯಾಸ ಹೇಗಿದೆ? : ಸದ್ಯ ಸಿದ್ಧವಾಗಿರುವ ನೂತನ ವಿನ್ಯಾಸದಲ್ಲಿ ಬಿಬಿಎಂಪಿ ಸೇವೆ, ಕಾಲ್ ಸೆಂಟರ್ ನಂಬರ್, ವಿವಿಧ ಇಲಾಖೆಗಳ ಮಾಹಿತಿ, ಪಾಲಿಕೆ ಮಾಹಿತಿ ಹೀಗೆ ವಿವಿಧ ಪೋಲ್ಡರ್‌ಗಳನ್ನು ತೆರಯಲಾಗಿದೆ. ಇದರಲ್ಲಿ ಜನರು ತಮಗೆ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಮಾಹಿತಿಗಳು ಲಭ್ಯವಿದೆ. ಬಿಬಿಎಂಪಿಯು ಹೊರಡಿಸುವ ಸುತ್ತೋಲೆ, ಪತ್ರಿಕಾ ಪ್ರಕಟಣೆಗಳು ಒಂದು ಕಡೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲಾ ಮಾಹಿತಿಯನ್ನು ಇದಕ್ಕೆ ಸೇರಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

bengaluru

ಜನರು ಸಲಹೆ ನೀಡಬಹುದು : ಈ ನೂತನ ವಿನ್ಯಾಸದ ಬಗ್ಗೆ ಜನರು ಸಲಹೆ ನೀಡಬಹುದಾಗಿದೆ. ಜನರು ನೀಡುವ ಸಲಹೆಗಳನ್ನು ಪರಿಗಣಿಸಿ ಮತ್ತೆ ಕೆಲವೊಂದು ಬದಲಾವಣೆಗಳನ್ನು ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ನಿಮ್ಮ ಸಲಹೆಗಳನ್ನು ತಿಳಿಸಲು ವಿಳಾಸ [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+