Breaking News: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ವಿರುದ್ಧ ಮೊದಲ ಆಕ್ಷೇಪಣೆ
ಬೆಂಗಳೂರು, ಜೂನ್ 25:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿದೆ. 198 ವಾರ್ಡ್‌ಗಳ್ನು ಮರುವಿಂಗಡಣೆ ಮಾಡಿ 243 ವಾರ್ಡ್‌ಗಳಿಗೆ ಏರಿಕೆಯನ್ನು ಮಾಡಿದೆ. 2011ರ ಜನಗಣತಿ ಆಧಾರದಲ್ಲಿ ವಾರ್ಡ್ ವಿಂಗಡಣೆ ಮಾಡಲಾಗಿದ್ದರು ವಾರ್ಡ್ ವಿಂಗಡಣೆ ಅವೈಜ್ಞಾನಿಕದ ಆರೋಪ ಕೇಳಿಬಂದಿದೆ.
ವಾರ್ಡ್ ಮರುವಿಂಗಡಣೆಗೆ ಬಗ್ಗೆ ಆಕ್ಷೇಪಗಳಿದ್ದರೇ ಸಂಬಂಧಿಸಿದ ಕಚೇರಿಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಸಾರ್ವಜನಿಕರಿಗೆ 15 ದಿನ ಕಾಲಾವಕಾಶವನ್ನು ನೀಡಲಾಗಿದೆ. ವಾರ್ಡ್ ಮರುವಿಂಗಣೆ ಕುರಿತಾಗಿ ಮೊದಲ ಆಕ್ಷೇಪವನ್ನು ಸಲ್ಲಿಸಲು ಬೈರಸಂಧ್ರ ವಾರ್ಡ್ ನಿವಾಸಿಗಳು ಸನ್ನದ್ದರಾಗಿದ್ದಾರೆ.

ವಾಡ್೯ ಮರುವಿಂಗಡಣೆಗೆ ಮೊದಲ ಆಕ್ಷೇಪ ಸಿದ್ದವಾಗಿದೆ. ಸಾರ್ವಜನಿಕರ ಅಭಿಪ್ರಾಯ ಸಂಘ ಸಂಸ್ಥೆಗಳ ಅಭಿಪ್ರಾಯವನ್ನೂ ಕೇಳದ ಬಿಬಿಎಂಪಿ ವಾಡ್೯ ಸರ್ವೆ ನಡೆಸದೆ ಎಸಿ ಕಚೇರಿಯಲ್ಲೇ ಕೂತು ವಾಡ್೯ ವಿಂಗಡಣೆ ಮಾಡಿದ್ದಾರೆ. ಹಳೇಯ ವಾರ್ಡ್ ನಂಬರ್ 169ರಲ್ಲಿದ್ದ ಬೈರಸಂದ್ರ ವಾರ್ಡ್ ಮರು ವಿಂಗಡಣೆ ಬಳಿಕ ಸಂಖ್ಯೆ 196ಕ್ಕೆ ಬದಲಾಗಿದೆ. ಈ ವಾರ್ಡ್‌ನಲ್ಲಿಯೇ ಆಕ್ಷೇಪ ವ್ಯಕ್ತವಾಗುತ್ತಿರುವುದು.

ಬೈರಸಂದ್ರ ವಾರ್ಡ್‌ನ ಮಧ್ಯಭಾಗದಲ್ಲಿ ಬರುವ ಎಲ್.ಐ.ಸಿ. ಕಾಲೋನಿಯನ್ನು ಎರಡು ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿದೆ. ಕೇವಲ 80 ಅಡಿಯಷ್ಟು ವಿಸ್ತೀರ್ಣ ಹೊಂದಿರುವ ಭಾಗವನ್ನು ತೆಗೆದು ಎರಡು ಕಿಲೋಮೀಟರ್ ದೂರ ಇರುವ ವಾಡ್೯ ಗೆ ಸೇರ್ಪಡೆ ಮಾಡಲಾಗಿದೆ. ಅವೈಜ್ಞಾನಿಕ ವಾಡ್೯ ವಿಂಗಡಣೆಗೆ ಎಲ್.ಐ.ಸಿ ಕಾಲೋನಿ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್.ಐ.ಸಿ ಅಸೋಸಿಯೇಷನ್ ಮುಖಾಂತರ ಆಕ್ಷೇಪಣೆ ಸಲ್ಲಿಸಲು ಸಜ್ಜಾಗಿದ್ದಾರೆ. ಬೈರಸಂದ್ರ ವಾರ್ಡ್‌ನಲ್ಲಿರುವ ಎಲ್.ಐ.ಸಿ ಕಾಲೋನಿಯ ಸ್ವಲ್ಪ ಭಾಗವನ್ನು ತಿಲಕ್ ನಗರ ವಾರ್ಡ್‌ಗೆ ಸೇರ್ಪಡೆ ಮಾಡಿದ್ದಾರೆ. ಅವೈಜ್ಞಾನಿಕ ವಾಡ್೯ ವಿಂಗಡಣೆಗೆ ಮಾಜಿ ಆಡಳಿತ ಪಕ್ಷದ ನಾಯಕ ಬೈರಸಂದ್ರ ನಾಗರಾಜ್ ರಿಂದ ಆಕ್ರೋಶ ಕೇಳಿಬಂದಿದೆ.
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications