ಕೋವಿಡ್ ಪರೀಕ್ಷೆಗೆ ನಕಲಿ ವಿಳಾಸ; 4,500 ಜನರ ಪತ್ತೆಗೆ ಮುಂದಾದ ಬಿಬಿಎಂಪಿ

ಬೆಂಗಳೂರು, ಜುಲೈ 24 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 39,200ಕ್ಕೆ ಏರಿಕೆಯಾಗಿದೆ.

Recommended Video

      Operation White Wash ರಹಸ್ಯ ಆಪರೇಷನ್ ವೈಟ್ ವಾಶ್ ಕಂಪ್ಲೀಟ್ ಮಾಹಿತಿ | Oneindia Kannada

      ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ವೇಳೆ ನಕಲಿ ವಿಳಾಸ ಮತ್ತು ಮೊಬೈಲ್ ನಂಬರ್ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಸುಮಾರು 4,500 ಜನರು ನಕಲಿ ವಿಳಾಸ ನೀಡಿದ್ದಾರೆ.

      ಕೋವಿಡ್ ಪರೀಕ್ಷೆ ಬಳಿಕ ವಿಳಾಸ ಪತ್ತೆ ಹಚ್ಚಲು ಅವಕಾಶ ಸಿಗಬಾರದು ಎಂಬ ಕಾರಣಕ್ಕೆ ನಕಲಿ ವಿಳಾಸ ಮತ್ತು ಮೊಬೈಲ್ ನಂಬರ್ ನೀಡಲಾಗಿದೆ. ತಪ್ಪು ವಿಳಾಸ ಕೊಟ್ಟವರನ್ನು ಹುಡುಕಲು ಬಿಬಿಎಂಪಿ ಪ್ರಯತ್ನವನ್ನು ನಡೆಸುತ್ತಿದೆ.

      ತಪ್ಪು ವಿಳಾಸ ನೀಡಿದವರಿಗೆ ಸೋಂಕು ಖಚಿತವಾದರೆ ಅವರನ್ನು ಪತ್ತೆ ಮಾಡುವುದು ಹೇಗೆ? ಎಂಬುದು ಬಿಬಿಎಂಪಿಗೆ ತಲೆನೋವಾಗಿದೆ. ಒಂದು ವೇಳೆ ಇವರು ಸಾರ್ವಜನಿಕ ಸ್ಥಳದಲ್ಲಿ ತಿರುಗಾಡಿಕೊಂಡಿದ್ದರೆ ಸಮುದಾಯಕ್ಕೆ ಸೋಂಕು ಹಬ್ಬಲಿದೆ.

      ಬಿಬಿಎಂಪಿ ಹರಸಾಹಸ

      ಬಿಬಿಎಂಪಿ ಹರಸಾಹಸ

      ಬೆಂಗಳೂರು ನಗರದಲ್ಲಿ ಪ್ರತಿದಿನ 2 ಸಾವಿರಕ್ಕೂ ಅಧಿಕ ಕೊರೊನಾ ವೈರಸ್ ಸೋಂಕಿನ ಹೊಸ ಪ್ರಕರಣ ದಾಖಲಾಗುತ್ತಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 39,200ಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ನಗರದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ತರಲು ಹರಸಾಹಸ ಪಡುತ್ತಿದೆ.

      ತಪ್ಪು ಮೊಬೈಲ್ ನಂಬರ್

      ತಪ್ಪು ಮೊಬೈಲ್ ನಂಬರ್

      ಕೋವಿಡ್ ಪರೀಕ್ಷೆ ಮಾಡುವ ಮುನ್ನ ವ್ಯಕ್ತಿಯ ಮೊಬೈಲ್ ನಂಬರ್, ವಿಳಾಸ ಪಡೆಯಲಾಗುತ್ತಿದೆ. ಆದರೆ, ಹಲವಾರು ಜನರು ತಪ್ಪು ವಿಳಾಸ, ಚಾಲನೆಯಲ್ಲಿ ಇರದ ಮೊಬೈಲ್ ನಂಬರ್, ಬೇರೆ ವ್ಯಕ್ತಿಗಳ ನಂಬರ್‌ಗಳನ್ನು ಕೊಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ.

      ಹುಡುಕುವುದು ಹೇಗೆ?

      ಹುಡುಕುವುದು ಹೇಗೆ?

      ಒಂದು ವೇಳೆ ಮಾದರಿ ನೀಡಿದ ವ್ಯಕ್ತಿಗೆ ಸೋಂಕು ಇರುವುದು ಖಚಿತವಾದರೆ ಅವರನ್ನು ಹುಡುಕಿ ಆಸ್ಪತ್ರೆಗೆ ದಾಖಲಿಸಬೇಕು. ಅವರ ಮನೆಯನ್ನು ಸೀಲ್ ಡೌನ್ ಮಾಡಬೇಕು. ಆದರೆ, ಇದುವರೆಗೂ 4500 ಜನರು ತಪ್ಪು ವಿಳಾಸ, ಮೊಬೈಲ್ ನಂಬರ್ ನೀಡಿದ್ದಾರೆ. ಅವರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ.

      ಪೊಲೀಸ್ ಇಲಾಖೆ ನೆರವು

      ಪೊಲೀಸ್ ಇಲಾಖೆ ನೆರವು

      ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಕೋವಿಡ್ ಪರೀಕ್ಷೆ ವೇಳೆ ತಪ್ಪು ವಿಳಾಸ, ಮೊಬೈನ್ ನಂಬರ್ ನೀಡಿದವರ ಪತ್ತೆಗೆ ವಲಯಕ್ಕೆ ಒಬ್ಬರಂತೆ ಡಿಸಿಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಪೊಲೀಸ್ ಇಲಾಖೆಯ ನೆರವಿನಿಂದ ಅವರನ್ನು ಹುಡುಕಲಾಗುತ್ತದೆ" ಎಂದು ಹೇಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+