ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಭೂ ಸಾರಿಗೆ ಕರ ವಿಧಿಸಿದ BBMP:ಏಪ್ರಿಲ್‌ನಿಂದ ಜಾರಿ

ಬೆಂಗಳೂರು, ಜನವರಿ 08:ಬಿಬಿಎಂಪಿಯು ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಭೂಸಾರಿಗೆ ಕರ ವಿಧಿಸಿದೆ.

ಕೊರೊನಾ ಸೋಂಕಿನಿಂದ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜಧಾನಿಯ ಆಸ್ತಿ ಮಾಲೀಕರಿಗೆ ಮುಂಬರುವ ಏಪ್ರಿಲ್‌ನಿಂದ ಮತ್ತಷ್ಟು ತೆರಿಗೆ ಭಾರ ಹೆಚ್ಚಾಗಲಿದ್ದು, ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ಹೊಸದಾಗಿ ಭೂ ಸಾರಿಗೆ ಉಪಕರ ವಿಧಿಸಲಾಗಿದೆ. ಭೂ ಸಾರಿಗೆ ಉಪಕರ ಪ್ರಸ್ತಾವನೆಗೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಅವರು ಅನುಮೋದನೆ ನೀಡಿದ್ದು, ಒಂದರಿಂದ ಜಾರಿಗೆ ಬರಲಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ನಗರ ಭೂಸಾರಿಗೆ ಉಪಕರ ಸಂಗ್ರಹಿಸುವುದರಿಂದ ರಾಜಸ್ವ ನಷ್ಟ ಉಂಟಾಗುವ ಕುರಿತು ಲೆಕ್ಕ ಪರಿಶೋಧನೆ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿದೆ.

BBMP To Levy A 2% Road Transport Cess On Property Tax From April 1

ಹಾಗಾಗಿ ಶೇ.2ರಷ್ಟು ಸಾರಿಗೆ ಸೆಸ್ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದರು.

ಬಿಬಿಎಂಪಿ ಆಸ್ತಿ ಮಾಲೀಕರಿಗೆ ಶೇ.2ರಷ್ಟು ಉಪಕರ ಸಂಗ್ರಹಿಸಿದರೂ ಈ ಸಂಪನ್ಮೂಲವನ್ನು ಬಿಬಿಎಂಪಿ ಬಳಕೆ ಮಾಡಿಕೊಳ್ಳುವಂತಿಲ್ಲ,ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಬಿಬಿಎಂಪಿಯಿಂದ ಸಂಗ್ರಹವಾಗುವ ಈ ಉಪಕರವನ್ನು ಭೂ ಸಾರಿಗೆ ಇಲಾಖೆಗೆ ನೀಡಬೇಕು. ಭೂ ಸಾರಿಗೆ ಇಲಾಖೆಯು ಉಪಕರವನ್ನು ನಗರದ ವಿವಿಧ ಅಭಿವೃದ್ಧಿ ಯೋಜನೆಗೆ ಬಳಸಿಕೊಳ್ಳಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+