ಬೆಂಗಳೂರು: 20 ವಾರ್ಡ್‌ಗಳಲ್ಲಿ 104 ಬೋರ್‌ವೆಲ್ ಕೊರೆಯಲಿದೆ ಬಿಬಿಎಂಪಿ

ಬೆಂಗಳೂರು,ಜನವರಿ 22:ಬೆಂಗಳೂರಿನಲ್ಲಿ ಕೇವಲ ಸ್ವಂತ ಮನೆ ಇರುವವರು ಮಾತ್ರ ಬೋರ್‌ವೆಲ್‌ಗಳನ್ನು ತೆಗೆಯುತ್ತಿಲ್ಲ. ಬದಲಾಗಿ ಈ ಸ್ಪರ್ಧೆಯಲ್ಲಿ ಬಿಬಿಎಂಪಿ ಕೂಡ ಮುಂದಿದೆ.

ಬಿಬಿಎಂಪಿಯು 20 ವಾರ್ಡ್‌ಗಳಲ್ಲಿ 97.65 ಕೋಟಿ ವೆಚ್ಚದಲ್ಲಿ 104 ಬೋರ್‌ವೆಲ್‌ಗಳನ್ನು ತೆಗೆಯಲು ಮುಂದಾಗಿದೆ.ಬೆಂಗಳೂರಿನಲ್ಲಿ ಬೋರ್‌ವೆಲ್‌ ನೀರಿಗೆ ಭಾರಿ ಬೇಡಿಕೆ ಇದೆ, ಜಲ ಮಂಡಳಿಯು ಹೊಸ ನೀರಿನ ಸಂಪರ್ಕಕ್ಕೆ ಭಾರಿ ಮೊತ್ತವನ್ನು ಕೊಡುವಂತೆ ಕೇಳುತ್ತಿದೆ.

ಇದೀಗ ಬಿಬಿಎಂಪಿಯು 97 ಕೋಟಿ ವೆಚ್ಚದ ಯೋಜನೆಯನ್ನು ರೂಪಿಸಿದೆ. 15ನೇ ಫಿನಾನ್ಸ್ ಕಮಿಷನ್‌ ಅಲ್ಲಿ ನೀಡಲಾಗಿರುವ 558 ಕೋಟಿ ರೂ ಅನುದಾನದಲ್ಲಿ 97 ಕೋಟಿ ರೂ ಅನ್ನು ಬಳಕೆ ಮಾಡಲಾಗುತ್ತಿದೆ.

BBMP To Dig 104 Borewells At Rs 97.65 Crores

ಪೈಪ್‌ಲೈನ್‌ಳನ್ನು ಕೂಡ ನೀಡುತ್ತಿದ್ದು, ಒಂದಕ್ಕೆ 40 ಲಕ್ಷ ರೂ ವೆಚ್ಚ ತಗುಲಲಿದೆ.ಬಿಬಿಎಂಪಿಯು ಹೂಡಿ, ಬೆಳ್ಳಂದೂರು, ಯಲಹಂಕ, ಆರ್‌ಆರ್ ನಗರ,ಕೆಂಗೇರಿ, ಹೊರಮಾವು, ಬ್ಯಾಟರಾಯನಪುರ,ವರ್ತೂರಿನಲ್ಲಿ ಬೋರ್‌ವೆಲ್ ತೆಗೆಯಲು ಮುಂದಾಗಿದೆ.

ಕೆಲವು ಪ್ರದೇಶಗಳಲ್ಲಿ ಈಗಾಗಲೇ ಕಾವೇರಿ ನೀರು ಬರುತ್ತಿದೆ.30/40 ಸೈಟ್ ಉಳ್ಳವರು ನೀರಿನ ಸಂಪರ್ಕ ಹಾಕಿಸಿಕೊಳ್ಳಬೇಕಿದ್ದರೆ, 50 ಸಾವಿರದಿಂದ ಒಂದು ಲಕ್ಷದವರೆಗೂ ಹಣ ನೀಡಬೇಕು.ಇದು ಜನರಿಗೆ ಕಷ್ಟವಾಗುತ್ತಿದೆ.

ಬಿಬಿಎಂಪಿಯು ಕೇವಲ ಬೋರ್‌ವೆಲ್‌ಗಳನ್ನು ಮಾತ್ರ ಕೊರೆಯುವುದಿಲ್ಲ, ಪೈಪ್‌ಲೈನ್ ವ್ಯವಸ್ಥೆಯನ್ನೂ ಮಾಡಿಕೊಡಲಿದೆ. ಜಲಮಂಡಳಿಯು ಒಂದು ಪ್ರದೇಶದಲ್ಲಿ ಶೇ.70 ರಿಂದ 80 ಮಂದಿ ಹಣ ನೀಡಲು ಮುಂದಾದರಷ್ಟೇ ಪೈಪ್‌ಲೈನ್ ಮಾಡಿಕೊಡಲಿದೆ.

Recommended Video

      ಬಿಜೆಪಿಯಲ್ಲಿ ಬಿರುಕು !! | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+