ಬೆಂಗಳೂರಿನ ಮಾರುಕಟ್ಟೆಗಳು ಹೈಟೆಕ್ ಆಗಲಿವೆ

ಬೆಂಗಳೂರು, ನ.27 : ಬೆಂಗಳೂರು ನಗರದಲ್ಲಿರುವ ಮಾರುಕಟ್ಟೆಗಳು ಸ್ವಚ್ಚವಾಗಿಲ್ಲ, ಅಲ್ಲಿಗೆ ಹೋದರೆ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಮುಂತಾದ ದೂರುಗಳನ್ನು ಜನರು ಹೇಳುತ್ತಾರೆ. ಆದರೆ, ಇನ್ನುಮುಂದೆ ನಗರದ ಮಾರ್ಕೆಟ್‌ಗಳು ಅಭಿವೃದ್ಧಿಗೊಳ್ಳಲಿದ್ದು, ಜನಸ್ನೇಹಿಯಾಗಲಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ 11 ಮಾರುಕಟ್ಟೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಬುಧವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಕೆಲವು ಮಾರುಕಟ್ಟೆಗಳನ್ನು ಬಿಬಿಎಂಪಿ ವತಿಯಿಂದ ಅಭಿವೃದ್ಧಿಗೊಳಿಸಲಾಗುತ್ತದೆ. [ಕೃಷ್ಣ ರಾಜೇಂದ್ರ ಮಾರುಕಟ್ಟೆಯನ್ನು ಬೆಳಗಿದ ಹಸಿ ತ್ಯಾಜ್ಯ]

 BBMP

ಮಾರುಕಟ್ಟೆಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದ ಅಗತ್ಯವನ್ನು ಆಡಳಿತ ಪಕ್ಷ­ವಾದ ಬಿಜೆಪಿ ಸದಸ್ಯರು ಪ್ರಬಲವಾಗಿ ಪ್ರತಿಪಾದಿಸಿದರೆ, ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಸದ­ಸ್ಯರು ವಿರೋಧ ವ್ಯಕ್ತಪಡಿಸಿದರು. ವಿರೋಧ ಪಕ್ಷದ ಗದ್ದಲದ ನಡುವೆಯೇ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ.

ಅಭಿವೃದ್ಧಿ ಆಗಲಿರುವ ಮಾರುಕಟ್ಟೆಗಳು : ಬಿಬಿಎಂಪಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಜಾನ್ಸನ್‌, ಆಸ್ಟಿನ್‌ ಟೌನ್‌, ರಿಚರ್ಡ್‌ ಸ್ಕ್ವೇರ್‌, ಮೋರ್‌ ರಸ್ತೆ, ಮರ್ಫಿ ಟೌನ್‌, ಮಾಗಡಿ ರಸ್ತೆ, ಶ್ರೀರಾಂಪುರ, ಅಕ್ಕಿಪೇಟೆ, ಕಬ್ಬನ್‌ ಪೇಟೆ, ಚಿಕ್ಕಮಾವಳ್ಳಿ ಹಾಗೂ ಎಸ್‌.ಕೆ.ಆರ್‌. ಮಟನ್‌ ಮಾರುಕಟ್ಟೆ­ಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಂಡಿಮೋಟ್‌, ಒಣಮೀನು, ಹಲ­ಸೂರು, ಸಿರ್ಸಿ ವೃತ್ತ, ದರ್ಜಿಪೇಟೆ, ಬಳ್ಳಾ­ಪುರ, ಬಳೇಪೇಟೆ ಮತ್ತು ಮಲ್ಲೇಶ್ವರಂ ಎಂಟನೇ ಕ್ರಾಸ್‌ನ ಮಟನ್‌ ಮಾರುಕಟ್ಟೆ­ಯನ್ನು ಅಭಿವೃ­ದ್ಧಿ­ಪಡಿಸಲು ಕೌನ್ಸಿಲ್‌ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಪಾಲಿಕೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿರುವ ಈ ಎಲ್ಲಾ ಮಾರುಕಟ್ಟೆಗಳು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ­ಲ್ಲಿವೆ. ಜಾನ್ಸನ್‌ ಮಾರುಕಟ್ಟೆ 100 ವರ್ಷ­ದಷ್ಟು ಹಳೆಯದಾದರೆ, ಉಳಿ­ದವು 20 ವರ್ಷ­ದಿಂದ 80 ವರ್ಷದಷ್ಟು ಹಳೆಯ ಮಾರುಕಟ್ಟೆಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+