ಬಿಬಿಎಂಪಿಯಲ್ಲಿ ಕಾರುಗಳ ಕೊರತೆ, 6 ಹೊಸ ಕಾರು ಖರೀದಿ

ಬೆಂಗಳೂರು, ಅಕ್ಟೋಬರ್ 01 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸದ್ಯ, ಪಾಲಿಕೆ ಹೊಸ ಕಾರುಗಳ ಖರೀದಿಯತ್ತ ಗಮನ ಹರಿಸಿದೆ. ಕಾರುಗಳ ಕೊರತೆ ಹಿನ್ನೆಲೆಯಲ್ಲಿ 6 ಹೊಸ ಕಾರುಗಳನ್ನು ಖರೀದಿ ಮಾಡಲಾಗುತ್ತಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 6 Maruti Ciaz ಕಾರುಗಳನ್ನು ಖರೀದಿ ಮಾಡುವ ಪ್ರಕ್ರಿಯೆಯನ್ನು ಆರಂಭಿಸಿದ್ದು, ಎರಡು ಕಾರುಗಳು ಈಗಾಗಲೇ ಪಾಲಿಕೆಗೆ ಆಗಮಿಸಿವೆ. ಉಳಿದ ನಾಲ್ಕು ಕಾರುಗಳು ಶೀಘ್ರದಲ್ಲೇ ಆಗಮಿಸಲಿವೆ. [ಬೆಂಗಳೂರಿನಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ : ಎಲ್ಲಿ, ಏನು?]

bbmp

ಸರ್ಕಾರ ಒಪ್ಪಿಗೆ ನೀಡಿದ ಬಳಿಕವೇ ಕಾರುಗಳನ್ನು ಖರೀದಿ ಮಾಡಲಾಗುತ್ತಿದೆ. ಒಂದು ಕಾರು ಖರೀದಿಗೆ ವಿಮೆ, ರಸ್ತೆ ತೆರಿಗೆ ಸೇರಿ ಒಟ್ಟು 9 ಲಕ್ಷ ರೂ.ವೆಚ್ಚವಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಪಾಲಿಕೆ ಹೊಸ ಕಾರುಗಳನ್ನು ಖರೀದಿ ಮಾಡಿಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಮೇಯರ್, ಉಪಮೇಯರ್, 12 ಸ್ಥಾಯಿ ಸಮಿತಿಗಳ ಅಧ್ಯಕ್ಷರು, ವಿರೋಧ ಮತ್ತು ಆಡಳಿತ ಪಕ್ಷದ ನಾಯಕರು ಸೇರಿದಂತೆ ಸುಮಾರು 16 ಕಾರುಗಳು ಪಾಲಿಕೆಗೆ ಅಗತ್ಯವಿದೆ. ಹಿಂದಿನ ಮೇಯರ್ ಮತ್ತು ಆಡಳಿತಾಧಿಕಾರಿಗಳು ಬಳಿಸಿದ ಕಾರುಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಲಾಗಿದೆ.

ಪಾಲಿಕೆಯಲ್ಲಿ ಕಾರುಗಳ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ 6 ಕಾರುಗಳನ್ನು ಖರೀದಿ ಮಾಡಲಾಗುತ್ತಿದೆ. ಪಾಲಿಕೆಯ ಆರ್ಥಿಕ ಸಂಕಷ್ಟದಲ್ಲಿರುವ ಕಾರಣ ಕಡಿಮೆ ಬೆಲೆಯಲ್ಲಿ ಸಿಗುವ ಕಾರುಗಳನ್ನು ಖರೀದಿ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಸಮರ್ಥನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+