ಬೆಂಗಳೂರು ನಗರದ ಕಸ ನಿರ್ವಹಣೆಗೆ ಬಿಬಿಎಂಪಿ ಹೊಸ ಪ್ರಯತ್ನ
ಬೆಂಗಳೂರು, ಮಾರ್ಚ್ 10; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಕಸದ ಸಮಸ್ಯೆ ನಿರ್ವಹಣೆಗೆ ಹೊಸ ಪ್ರಯತ್ನ ಮಾಡಿದೆ. ನಗರಲ್ಲಿ ಹೊಸದಾಗಿ 30 ಒಣ ಕಸ ಸಂಗ್ರಹಣಾ ಘಟಕಗಳನ್ನು ಸ್ಥಾಪನೆ ಮಾಡಲಾಗುತ್ತದೆ.
ಬಿಬಿಎಂಪಿಯ 129 ವಾರ್ಡ್‌ಗಳಲ್ಲಿ ಈಗಾಗಲೇ ಒಣ ಕಸ ಸಂಗ್ರಹಣಾ ಘಟಕವಿದೆ. ಉಳಿದ ವಾರ್ಡ್‌ಗಳಲ್ಲಿ ಮೂರು ತಿಂಗಳಿನಲ್ಲಿ ಘಟಕ ಸ್ಥಾಪನೆ ಮಾಡಲು ಬಿಬಿಎಂಪಿ ಮುಂದಾಗಿದೆ. ಇದಕ್ಕಾಗಿ ಟೆಂಡರ್ ಸಹ ಕರೆದಿದೆ.
ಪ್ರತಿ ಘಟಕಗಳು ಪ್ರತಿದಿನ ಸುಮಾರು 3 ರಿಂದ 4 ಟನ್ ಕಸವನ್ನು ಸಂಗ್ರಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿರಲಿವೆ. ಒಂದು ಘಟಕ ನಿರ್ಮಾಣ ಮಾಡಲು 1.1 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಒಣ ಕಸ ಸಂಗ್ರಹಣಾ ಘಟಕಗಳು ಯಾವ ಮಾದರಿಯಲ್ಲಿ ಇರಲಿವೆ ಎಂದು ಬಿಬಿಎಂಪಿ ಕೆಲವೇ ದಿನಗಳಲ್ಲಿ ರೂಪುರೇಷೆ ಅಂತಿಮಗೊಳಿಸಲಿದೆ. ಕಸ ಸಂಗ್ರಹಣೆ ಜೊತೆಗೆ ಶೌಚಾಲಯ ವ್ಯವಸ್ಥೆಯನ್ನು ಈ ಘಟಕಗಳು ಹೊಂದಿರಲಿವೆ.
ಪೂರ್ವ, ದಕ್ಷಿಣ, ಬೊಮ್ಮನಹಳ್ಳಿ, ಆರ್. ಆರ್. ನಗರ ಮತ್ತು ಮಹದೇವಪುರ ವಲಯಗಳಲ್ಲಿ ಈಗಾಗಲೇ ಜಾಗಗಳನ್ನು ಗುರುತಿಸಲಾಗಿದೆ. 4 ಟನ್ ಸಾಮರ್ಥ್ಯಕ್ಕಿಂತ ಕಡಿಮೆ ಸಾಮರ್ಥ್ಯದ ಘಟಕವನ್ನು ನಿರ್ಮಿಸಲು 75 ಲಕ್ಷ ರೂ. ವೆಚ್ಚವಾಗಲಿದೆ.
ಮನೆ-ಮನೆ ಬಾಲಿಲಲ್ಲಿ ಒಣ ಕಸ ಸಂಗ್ರಹವನ್ನು ಬಿಬಿಎಂಪಿ ಆರಂಭಿಸಿದೆ. ಇದರಿಂದಾಗಿ ಒಣ ಕಸದ ಸಂಗ್ರಹ ಹೆಚ್ಚಾಗುತ್ತಿದೆ. ಇವುಗಳಲ್ಲಿ ಶೇ 60ರಷ್ಟು ಒಣಕಸಗಳು ಪುನರ್ ಬಳಕೆಗೆ ಯೋಗ್ಯವಲ್ಲ ಇವುಗಳನ್ನು ಸಿಮೆಂಟ್ ಫ್ಯಾಕ್ಟರಿಗಳಿಗೆ ನೀಡಲಾಗುತ್ತಿದೆ.
ನಗರದ 91 ವಾರ್ಡ್‌ಗಳಲ್ಲಿ ಬಿಬಿಎಂಪಿ ಹೊಸ ಮಾದರಿ ಕಸ ಸಂಗ್ರಹಣಾ ವಿಧಾನವನ್ನು ಪರಿಚಯಿಸಿದೆ. ಈ ವಾರ್ಡ್‌ಗಳಲ್ಲಿ ಮನೆ ಮನೆಯ ಕಸ ಸಂಗ್ರಹಣೆ ಮಾಡಲು ಒಣ ಮತ್ತು ಹಸಿ ಕಸಕ್ಕಾಗಿ ಪ್ರತ್ಯೇಕ ವಾಹನಗಳು ಹೋಗುತ್ತಿವೆ.











Click it and Unblock the Notifications