E Khata: ಗುಡ್ ನ್ಯೂಸ್, ಬಿಬಿಎಂಪಿಯಿಂದ ಸ್ಥಳದಲ್ಲೇ ಅರ್ಜಿ ವಿಲೇವಾರಿ! ಇ-ಖಾತಾ ವಿತರಣೆ

ಬೆಂಗಳೂರು, ಜುಲೈ 01: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಆಸ್ತಿ ಮಾಲೀಕರು ಮನೆ ಕಟ್ಟಲು, ನಕ್ಷೆ ಮಂಜೂರಾತಿ ಸೇರಿದಂತೆ ಇತರ ಆಸ್ತಿ ವ್ಯವಹಾರಗಳಿಗೆ ಇ-ಖಾತಾ ಕಡ್ಡಾಯವಾಗಿದೆ. ಆಸ್ತಿ ಮಾಲೀಕರು ಇ-ಖಾತೆ ಪಡೆಯುವಂತೆ ಖುದ್ದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಇತ್ತೀಚೆಗೆ ಅವರು ಎರಡು ದಿನಗಳ ಇ-ಖಾತಾ ಮೇಳಕ್ಕೆ (E Khata Mela) ಚಾಲನೆ ನೀಡಿದ್ದರು. ಅದರ ಮುಂದುವರಿದ ಭಾಗವಾಗಿ ಸ್ಥಳದಲ್ಲೇ ಇ-ಖಾತೆ ವಿತರಣೆಗೆ ಪಾಲಿಕೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಯಲಹಂಕ ವಲಯದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಹಕಾರ ನಗರ ಆಟದ ಮೈದಾನದಲ್ಲಿ ಕಳೆದ ಎರಡು ದಿನಗಳ ಕಾಲ ಏರ್ಪಡಿಸಿದ್ದ 'ಬೃಹತ್ ಇ-ಖಾತಾ ಮೇಳ' ಕಾರ್ಯಕ್ರಮದಲ್ಲಿ ಸುಮಾರು 4,300 ಜನರು ಪಾಲ್ಗೊಂಡಿದ್ದರು. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 7 ವಾರ್ಡ್ ಗಳ ಜೊತೆಗೆ ಯಲಹಂಕ ವಿಧಾನಸಭಾ ಕ್ಷೇತ್ರ ಹಾಗೂ ಇತರೆ ವಲಯಗಳಿಂದಲೂ ಖಾತಾ ಮೇಳಕ್ಕೆ ಆಗಮಿಸಿ ಇ-ಖಾತಾಗೆ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದರು.

BBMP Starts On-the-Spot E-Khata Issuance for Property Owners

ಎರಡು ದಿನ ನಡೆದ ಇ-ಖಾತಾ ಮೇಳದಲ್ಲಿ ಒಟ್ಟು 4,300 ಜನರಿಗೆ ಟೋಕನ್ ನೀಡಲಾಗಿದೆ. ಅದರಲ್ಲಿ ಸುಮಾರು 1,694 ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗಿದೆ. ಇದರೊಂದಿಗೆ ಸ್ಥಳದಲ್ಲಿಯೇ 1,259 ಅರ್ಜಿಗಳನ್ನು ಅನುಮೋದಿಸಿ ಆಸ್ತಿ ಮಾಲೀಕರಿಗೆ ಅಂತಿಮ ಇ-ಖಾತಾ ನೀಡಲಾಯಿತು.

ಇ-ಖಾತೆಗಾಗಿ 1,694 ಅರ್ಜಿ ಸ್ವೀಕಾರ

ಬೃಹತ್ ಇ-ಖಾತಾ ಮೇಳದಲ್ಲಿ ಸ್ವೀಕರಿಸಲಾದ 1,694 ಅರ್ಜಿಗಳ ಪೈಕಿ 435 ಅರ್ಜಿಗಳು ಬೇರೆ ವಲಯಗಳಿಂದ ಬಂದಂತಹ ಅರ್ಜಿಗಳಾಗಿವೆ. ಸದರಿ ಅರ್ಜಿಗಳನ್ನು ಪರಿಶೀಲಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಂಬಂಧಪಟ್ಟ ಆಯಾ ವಲಯಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಅಧಿಕಾರಿಗಳು ಅಪ್ಡೇಟ್ ನೀಡಿದ್ದಾರೆ. ಅರ್ಜಿ ಸಲ್ಲಿಸಿದವರು ತಮ್ಮ ವಲಯ ವ್ಯಾಪ್ತಿಯಲ್ಲಿ ಅಂತಿಮ ಇ-ಖಾತೆ ಪಡೆಯಲು ಅವಕಾಶ ಇದೆ.

ಯಲಹಂಕ ವಲಯ ವ್ಯಾಪ್ತಿಯಲ್ಲಿ ನಾಗರಿಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಅಪಾರ್ಟ್ ಮೆಂಟ್‌ಗಳ ಜೊತೆ ಸಮನ್ವಯ ಸಾಧಿಸಿ, ಇದೇ ಮಾದರಿಯಲ್ಲಿ ಇ-ಖಾತಾ ಮೇಳಗಳನ್ನು ಆಯೋಜಿಸಿ ತ್ವರಿತಗತಿಯಲ್ಲಿ ಇ-ಖಾತಾ ಸಿಗುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುವುದು ಎಂದು ವಯಲ ಜಂಟಿ ಆಯುಕ್ತರಾದ ಮೊಹ್ಮದ್ ನಯೀಮ್ ಮೊಮಿನ್ ರವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+