Property: ಬೆಂಗಳೂರಿನ 3.49 ಲಕ್ಷ ಆಸ್ತಿದಾರರಿಗೆ ಶಾಕ್‌ ಕೊಡಲು ಮುಂದಾದ ಬಿಬಿಎಂಪಿ!

ಬೆಂಗಳೂರಿನ 3.49 ಲಕ್ಷ ಆಸ್ತಿದಾರರಿಗೆ ಶಾಕ್‌ ಕೊಡುವುದಕ್ಕೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ. ಬಿಬಿಎಂಪಿಗೆ ಆಸ್ತಿದಾರರಿಂದ ಬರೋಬ್ಬರಿ 390 ಕೋಟಿ ರೂಪಾಯಿ ಬಾಕಿ ಉಳಿದಿದ್ದು. ಇದನ್ನು ಸಂಗ್ರಹ ಮಾಡುವುದಕ್ಕೆ ಕಠಿಣ ಕ್ರಮ ಎದುರಿಸಲು ಬಿಬಿಎಂಪಿಯ ರೆವಿನ್ಯೂ ಡಿಪಾರ್ಟ್‌ಮೆಂಟ್‌ನ ಅಧಿಕಾರಿಗಳು ಮುಂದಾಗಿದ್ದಾರೆ.

ಬಿಬಿಎಂಪಿಗೆ ಆಸ್ತಿಯಿಂದ ಸಂಗ್ರಹವಾಗುವ ತೆರಿಗೆ ದೊಡ್ಡ ಪ್ರಮಾಣದ್ದಾಗಿದ್ದು. ಇದರಿಂದಲೇ ಬಿಬಿಎಂಪಿಗೆ ಪ್ರಮುಖ ಆದಾಯ ಸಂಗ್ರಹವಾಗುತ್ತಿದೆ. ಆದರೆ ಕೆಲವರು ಬಿಬಿಎಂಪಿಗೆ ನಿಯಮಿತವಾಗಿ ಆಸ್ತಿ ತೆರಿಗೆ ಪಾವತಿ ಮಾಡುತ್ತಿಲ್ಲ. ಈ ರೀತಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಶಾಕ್‌ ನೀಡುವುದಕ್ಕೆ ಬಿಬಿಎಂಪಿ ಮುಂದಾಗಿದೆ.

BBMP Revenue Department to Give Shock to 3 49 lakh Properties in Bengaluru

ಬಿಬಿಎಂಪಿ ವ್ಯಾಪ್ತಿಯಲ್ಲಿ 20.5 ಲಕ್ಷ ಜನ ಆಸ್ತಿದಾರರಲ್ಲಿ 3.49 ಲಕ್ಷ ಜನ ಆಸ್ತಿದಾರರು ಇಲ್ಲಿಯ ವರೆಗೆ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಅದರಲ್ಲಿ 1.73 ಲಕ್ಷ ಜನ ಆಸ್ತಿದಾರರು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ (ದೀರ್ಘಕಾಲದ ಸುಸ್ತಿದಾರರು) ಮತ್ತು 1.76 ಲಕ್ಷ ಜನ ಆಸ್ತಿದಾರರು ಈ ವರ್ಷ ಆಸ್ತಿ ತೆರಿಗೆ ಬಾಕಿ (ಸುಸ್ತಿದಾರರು) ಉಳಿಸಿಕೊಂಡಿರುವವರಾಗಿದ್ದಾರೆ. ಒಟ್ಟಾರೆ 3.49 ಲಕ್ಷ ಜನ ಆಸ್ತಿದಾರರು ಬಿಬಿಎಂಪಿಗೆ ಬರೋಬ್ಬರಿ 390 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಹೀಗಾಗಿ, ಇದೇ ರೀತಿ ಮುಂದುವರಿದರೆ ಹಾಗೂ ಕಳೆದ 2 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮುಂದಾಗಿದ್ದಾರೆ.

ಆಸ್ತಿ ತೆರಿಗೆಯನ್ನು ಪಾವತಿಸದವರಿಗೆ ನೋಟಿಸ್‌ ನೀಡುವುದು. ಮೆಸೇಜ್‌ ಮಾಡುವುದು, ಐವಿಆರ್‌ಎಸ್ ಕರೆಗಳು, ವೈಯಕ್ತಿಕ ಕರೆಗಳು, ಮುಟ್ಟುಗೋಲು ನೋಟಿಸ್ ಸಹ ಜಾರಿ ಮಾಡಲಾಗಿತ್ತು. ಇಷ್ಟೆಲ್ಲಾ ಆದರೂ ಬಿಬಿಎಂಪಿಗೆ ಈ ಆಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿ ಮಾಡಿಲ್ಲ.‌ ಹೀಗಾಗಿ, ಕಳೆದ 2 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಹಾಗೂ ಆಸ್ತಿ ಬಾಕಿದಾರರಿಗೆ ದಂಡ ನಿಗದಿ ಮಾಡಲಾಗಿದೆ.

BBMP Revenue Department to Give Shock to 3 49 lakh Properties in Bengaluru

ಒಂದು ಬಾರಿ ಪರಿಹಾರ ಯೋಜನೆ(ಒಟಿಎಸ್) ಅನ್ನು ಸಹ ಪಡೆಯದೇ ಉದ್ದೇಶಪೂರ್ವಕವಾಗಿ ದೀರ್ಘಕಾಲದಿಂದ ಕೆಲವರು ಆಸ್ತಿದಾರರು ಆಸ್ತಿ ತೆರಿಗೆ ಬಾಕಿಯನ್ನು ಉಳಿಸಿಕೊಂಡಿದ್ದಾರೆ. ಸುಸ್ತಿದಾರರಾಗಿದ್ದಾರೆ. ಹಲವು ವರ್ಷಗಳಿಂದ ಇವರು ಆಸ್ತಿ ತೆರಿಗೆಯನ್ನು ಪಾವತಿಸಿಲ್ಲ. ಈ ರೀತಿ ದೀರ್ಘಕಾಲದಿಂದ ಆಸ್ತಿ ತೆರಿಗೆ ಪಾವತಿ ಮಾಡದೆ ಇರುವವರನ್ನು ಇದೇ ರೀತಿ ಬಿಟ್ಟರೆ, ಪ್ರಾಮಾಣಿಕವಾಗಿ ಆಸ್ತಿ ತೆರಿಗೆ ಪಾವತಿ ಮಾಡಿರುವವರಿಗೆ ಸಂಪೂರ್ಣವಾಗಿ ಅನ್ಯಾಯ ಮಾಡಿದಂತೆ ಆಗುತ್ತದೆ ಎಂದು ಬಿಬಿಎಂಪಿ ಹೇಳಿದೆ.

Take a Poll

ಬಿಬಿಎಂಪಿಯು ಕಾನೂನಾತ್ಮಕವಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಲು ಸ್ಪಷ್ಟ ಹಾಗೂ ದೃಢವಾಗಿ ನಿರ್ಧರಿಸಿದೆ. ಈ ನಿರಂತರ ಮತ್ತು ದೀರ್ಘಕಾಲದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಬಿಬಿಎಂಪಿಯು ಅಭಿಯಾನ ನಡೆಸಲಿದೆ. 2 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಮೇಲೆ ದಂಡ ವಿಧಿಸುವುದಾಗಿಯೂ ಬಿಬಿಎಂಪಿ ಎಚ್ಚರಿಕೆ ಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+