ಬೆಂಗಳೂರು ರಸ್ತೆಗಳಲ್ಲಿರುವ ಗುಂಡಿಗಳ ಲೆಕ್ಕ - ವರದಿ
ಬೆಂಗಳೂರು, ಜೂ. 18: ಮಹಾನಗರದ ರಸ್ತೆ ಗುಂಡಿಗಳ ಲೆಕ್ಕ ಹಾಕಲು ಸಾಧ್ಯವೇ? ಇಲ್ಲ ಆದರೂ ಬಿಬಿಎಂಪಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಲೆಕ್ಕ ಹಾಕಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 2620 ರಸ್ತೆ ಗುಂಡಿಗಳಿವೆಯಂತೆ! ಅಬ್ಬಾ ಇದು ಮೇಲ್ನೋಟದ ಮುಖ್ಯ ರಸ್ತೆಗಳ ಲೆಕ್ಕ ಅಷ್ಟೇ.
ಬೆಂಗಳೂರು ಮಹಾನಗರದಲ್ಲಿ ಒಟ್ಟು 422 ಮುಖ್ಯ ರಸ್ತೆಗಳಲ್ಲಿ 2620 ಗುಂಡಿಗಳಿವೆ ಎಂದು ಇಂಜಿನಿಯರಿಂಗ್ ವಿಭಾಗ ಆಯುಕ್ತ ಜಿ. ಕುಮಾರ್ ನಾಯ್ಕ್ ಅವರಿಗೆ ವರದಿಯನ್ನು ಗುರುವಾರ ಸಲ್ಲಿಕೆ ಮಾಡಲಾಗಿದೆ. ಜನರ ಪ್ರಾಣ ತೆಗೆಯುವ ಗುಂಡಿಗಳನ್ನು ಯಾರು ಮುಚ್ಚಬೇಕು? ಮತ್ತು ಗುತ್ತಿಗೆದಾರರಿಗೆ ಎಷ್ಟು ದಂಡ ವಿಧಿಸಬೇಕು? ಎಂಬುದನ್ನು ವರದಿ ಪರಿಶೀಲನೆ ಬಳಿಕ ತೀರ್ಮಾನ ಮಾಡಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.[ಕೈಕಾಲು ಸೊಂಟ ಮುರಿಯುವ ಗುಂಡಿಗಳ ಬಗ್ಗೆ ಎಚ್ಚರ!]

ಬೆಂಗಳೂರು ರಸ್ತೆಗಳಲ್ಲಿರುವ ಗುಂಡಿಗಳ ಲೆಕ್ಕ
* ಹೆಣ್ಣೂರು ರಸ್ತೆ 32 ಗುಂಡಿಗಳು
* ವೈಯಾಲಿಕಾವಲ್ ರಸ್ತೆ 26 ಗುಂಡಿಗಳು
* ಕಮಲಾನಗರ ಶಕ್ತಿ ಗಣಪತಿ ನಗರ ದೇವಾಲಯದಲ್ಲಿ 30 ಗುಂಡಿಗಳು
* ಪರಪ್ಪನ ಅಗ್ರಹಾರ ರಸ್ತೆ 22 ಗುಂಡಿಗಳು
* ಶಾರದಾಂಬಾ ನಗರ ರಸ್ತೆ 26 ಗುಂಡಿಗಳು
* ಸಂಜಯನಗರ 35 ಗುಂಡಿಗಳು[ರಸ್ತೆಯಲ್ಲಿ ಗುಂಡಿ ನೋಡಿದ್ರೆ ಮಿಸ್ ಕಾಲ್ ಕೊಡಿ!]
* ಮಹಾಲಕ್ಷ್ಮೀ ಪುರಂ ಪೈಪ್ ಲೈನ್ ರಸ್ತೆಯಲ್ಲಿ 64 ಗುಂಡಿಗಳು
* ಕೆಂಗೇರಿ ಗೊಟ್ಟಿಗೆರೆ ಬಳಿ 62 ಗುಂಡಿಗಳು
*ದಿಣ್ಣೂರು ರಸ್ತೆಯಲ್ಲಿ 14 ಗುಂಡಿಗಳು
* ಜಯಮಹಲ್ ರಸ್ತೆಯಲ್ಲಿ 15 ಗುಂಡಿಗಳು
ನಿಮ್ಮ ಏರಿಯಾದಲ್ಲೂ ಗುಂಡಿಗಳು ಇರಲೇ ಬೇಕು ಅಲ್ಲವೇ? ನಮಗೆ ಪ್ರತಿಕ್ರಿಯೆ ಬರೆಯಬಹುದು.












Click it and Unblock the Notifications