ರೆವೆನ್ಯೂ ಆಸ್ತಿ: ಬಿಬಿಎಂಪಿ ಅಭಿವೃದ್ಧಿ ಶುಲ್ಕ ಕಡಿಮೆಯಾಯ್ತು

Bangalore BBMP reduces drastically Betterment Fees to regularise revenue land
ಬೆಂಗಳೂರು, ಜ.30: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯ ಹೊರ ಭಾಗದಲ್ಲಿ ಆಸ್ತಿ ಹೊಂದಿರುವವರನ್ನು ಸಂತೋಷಪಡಿಸಲು ಬಿಬಿಎಂಪಿ ಮುಂದಾಗಿದೆ. ರೆವೆನ್ಯೂ ಆಸ್ತಿಯನ್ನು ಸಕ್ರಮಗೊಳಿಸಲು ಅಭಿವೃದ್ಧಿ ಶುಲ್ಕ ವಿಧಿಸುವುದಾಗಿ ಹೇಳಿದ್ದ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ಅಭಿವೃದ್ಧಿ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.

ಅಭಿವೃದ್ಧಿ ಶುಲ್ಕ ಅಂದರೆ betterment charges ಅನ್ನು ಪಾವತಿಸಿದರೆ ಆಸ್ತಿ ಹೊಂದಿರುವವರಿಗೆ ಅಧಿಕೃತವಾಗಿ 'ಎ ಖಾತೆ' ಅಂದರೆ ಮಾಲೀಕತ್ವದ ಡೀಡ್ ಪತ್ರ ಲಭಿಸುತ್ತದೆ. ಅಷ್ಟಿದ್ದರೆ ಸಾಕು ರೆವೆನ್ಯೂ ಸೈಟು ಹೊಂದಿರುವವರು ಬ್ಯಾಂಕುಗಳಿಂದ ತಮಗೆ ಅಗತ್ಯವಿರುವ ಸಾಲ ಪಡೆಯಬಹುದು.

'1,000 ಚದರ ಮೀಟರ್ ನಿವೇಶನ ಹೊಂದಿರುವವರಿಗೆ 1 ಚದರ ಮೀಟರಿಗೆ 350 ರೂ. ಮತ್ತು 1,000 ಚದರ ಮೀಟರಿಗಿಂತ ಹೆಚ್ಚು ವಿಸ್ತ್ರೀರ್ಣದ ನಿವೇಶನ ಹೊಂದಿರುವವರಿಗೆ 1 ಚದರ ಮೀಟರಿಗೆ 300 ರೂ. ವಿಧಿಸುವ ಸಂಬಂಧ ಪಾಲಿಕೆಯ ಸಭೆಯಲ್ಲಿ ಮಂಗಳವಾರ ತೀರ್ಮಾಣ ತೆಗೆದುಕೊಳ್ಳಲಾಗಿತ್ತು.

ಆದರೆ ಬುಧವಾರ ಮತ್ತೊಂದು ನಿರ್ಣಯ ಅಂಗೀಕರಿಸಿರುವ ಪಾಲಿಕೆಯು ಈ ಮೊತ್ತವನ್ನು ಮತ್ತಷ್ಟು ಕಡಿತಗೊಳಿಸಿದೆ. ಹಳೆಯ ವಾರ್ಡುಗಳ ವ್ಯಾಪ್ತಿಗೆ (100 ವಾರ್ಡುಗಳು) ಬರುವ ನಿವೇಶನಗಳಿಗೆ 200 ರೂ ಎಂದೂ ಮತ್ತು ಹೊಸ ವಾರ್ಡುಗಳ ವ್ಯಾಪ್ತಿಗೆ (98 ವಾರ್ಡುಗಳು) ಬರುವ ನಿವೇಶನಗಳಿಗೆ 250 ರೂ ಎಂದೂ ನಿಗದಿ ಪಡಿಸಿ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಪಕ್ಷಾತೀತವಾಗಿ ಎಲ್ಲಾ ಕೌನ್ಸಿಲರುಗಳೂ ಈ ನಿರ್ಣಯವನ್ನು ಸ್ವಾಗತಿಸಿದ್ದಾರೆ.

ಈ ಮಧ್ಯೆ, ಕೌನ್ಸಿಲರುಗಳು ಸಲಹೆಯೊಂದನ್ನು ನೀಡಿದ್ದಾರೆ. 'ಒಬ್ಬರೇ ಮಾಲೀಕರಿರುವ ವೈಯಕ್ತಿಕ ನಿವೇಶನಗಳಿಗೆ ಈ ದರ ಅನ್ವಯಿಸಬೇಕೆಂದೂ ಅನೇಕ ಸೈಟುಗಳನ್ನು ಒಬ್ಬರೇ ಹೊಂದಿರುವ ಮಾಲೀಕರುಗಳಿಗೆ ಅವಕಾಶ ನೀಡಬಾರದು. ಇದರಿಂದ ಪಾಲಿಕೆಗೆ ಹೆಚ್ಚು ಆದಾಯ ಹರಿದುಬರುತ್ತದೆ' ಎಂದು ಕಾಚರಕಾನಹಳ್ಳಿಯ ಕಾರ್ಪೊರೇಟರ್ ಪದ್ಮನಾಭ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಪಾಲಿಕೆ ಆಯುಕ್ತ ಎಂ ಲಕ್ಷ್ಮೀನಾರಾಯಣ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+