ಅನಧಿಕೃತ ಫ್ಲೆಕ್ಸ್‌ ಕಂಡುಬಂದಲ್ಲಿ ಬಿಬಿಎಂಪಿಗೆ ದೂರು ನೀಡಿ

ಬೆಂಗಳೂರು, ಆ.8: ನಗರದಲ್ಲಿ ಹಾಕಲಾಗಿರುವ ಅನಧಿಕೃತ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯಾಚರಣೆಯಲ್ಲಿ ಬಿಬಿಎಂಪಿ ಇದುವರೆಗೂ 10 ಸಾವಿರಕ್ಕೂ ಅಧಿಕ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದೆ.

ರಾಜ್ಯ ಹೈಕೋರ್ಟ್ ಹಾಗೂ ಉಪ ಲೋಕಾಯುಕ್ತರು ನಗರದಲ್ಲಿ ರಾರಾಜಿಸುತ್ತಿದ್ದ ಫ್ಲೆಕ್ಸ್, ಬ್ಯಾನರ್ ತೆರವಿಗೆ ಆ.7ರಂದು ಗಡವು ನೀಡಿದ್ದ ಹಿನ್ನಲೆಯಲ್ಲಿ ಜು.22ರಿಂದ ಎಂಟು ವಲಯಗಳಲ್ಲಿ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಕೈಗೊಂಡಿತ್ತು.

ಇನ್ನು ಮುಂದೆ ಎಲ್ಲೇ ಅನಧಿಕೃತ ಫ್ಲೆಕ್ಸ್ ಅಳವಡಿಸಿದರೆ ಆಯಾ ವಲಯಗಳ ಜಂಟಿ ಆಯುಕ್ತರು, ಜಾಹೀರಾತು ವಿಭಾಗದ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಭಿಯಂತರುಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಎಂ.ಲಕ್ಷ್ಮೀನಾರಾಯಣ್ ಎಚ್ಚರಿಸಿದ್ದಾರೆ.

bbmp flex

ಅನುಮತಿ ಕಡ್ಡಾಯ: ನಗರದಲ್ಲಿ ಇನ್ನು ಮುಂದೆ ಯಾರೇ ಆಗಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಬೇಕಾದರೆ ಬಿಬಿಎಂಪಿ ಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿಯಿಲ್ಲದೆ ಯಾವುದೇ ಖಾಸಗಿ ಕಟ್ಟಡಗಳಲ್ಲಾಗಲಿ, ಪಾಲಿಕೆ ಕಟ್ಟಡಗಳಲ್ಲೇ ಆಗಲಿ ಫ್ಲೆಕ್ಸ್, ಬ್ಯಾನರ್ ಹಾಕಬೇಕಾದರೆ ಅನುಮತಿ ಪಡೆಯಲೇಬೇಕು.

ಒಂದು ವೇಳೆ ಅನುಮತಿಯಿಲ್ಲದೆ ಇವುಗಳನ್ನು ಅಳವಡಿಸಿದರೆ ಯಾರೇ ಆಗಲಿ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುತ್ತದೆ.ಅಷ್ಟೇ ಅಲ್ಲದೇ ಜನರು ಅನಧಿಕೃತ ಫ್ಲೆಕ್ಸ್‌ ಹಾಕಿದ್ದಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.

ಆ.15 ರಿಂದ ಫುಟ್‌ಪಾತ್ ಒತ್ತುವರಿ ತೆರವು: ಆಗಸ್ಟ್ 15 ರಿಂದ ಒತ್ತುವರಿಯಾಗಿರುವ ಫುಟ್‌ಪಾತ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು ಎಂದು ಆಯಕ್ತ ಲಕ್ಷ್ಮೀನಾರಾಯಣ್ ತಿಳಿಸಿದ್ದಾರೆ.

ಫುಟ್‌ಪಾತ್‌ಗಳಲ್ಲಿ ಎಲ್ಲೆಂದರಲ್ಲಿ ಸಣ್ಣಪುಟ್ಟ ಅಂಗಡಿಗಳು ತಲೆ ಎತ್ತಿವೆ. ಮಾನವೀಯ ದೃಷ್ಟಿ ಯಿಂದ ವಿಕಲಚೇತನರು ಇಟ್ಟುಕೊಂಡಿರುವ ಅಂಗಡಿಗಳು, ಟೆಲಿಫೋನ್ ಬೂತ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲವನ್ನೂ ತೆರವು ಗೊಳಿಸಲಾಗುವುದು ಎಂದು ಹೇಳಿದರು.

ಅನಧಿಕೃತ ಫ್ಲೆಕ್ಸ್‌ ಕಂಡು ಬಂದಲ್ಲಿ ಈ ದೂರವಾಣಿ ಸಂಖ್ಯೆಗೆ ದೂರು ನೀಡಬಹುದು: 080-22221188

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+