• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಎಲ್ಲಾ ಕಡೆನೂ ಪಟಾಕಿ ಸಿಗಲ್ಲ, ಎಲ್ಲೆಲ್ಲಿ ಸಿಗುತ್ತೆ?

|

ಬೆಂಗಳೂರು, ನವೆಂಬರ್ 3: ದೀಪಾವಳಿ ಇನ್ನೇನು ಬಂದೇ ಬಿಡ್ತು ಎಲ್ಲೆಲ್ಲೋ ಪಟಾಕಿಯನ್ನು ಇಟ್ಟು ಮಾರಾಟ ಮಾಡ್ತೀನಿ ಅಂದ್ರೆ ದಂಡ ಕಟ್ಟೋಕೆ ರೆಡಿಯಾಗಿ. ಬಿಬಿಎಂಪಿಯ ಆಟದ ಮೈದಾನವನ್ನು ಹೊರತುಪಡಿಸಿ ಬೇರೆಡೆ ಪಟಾಕಿಯನ್ನು ಮಾರಾಟ ಮಾಡುವಂತಿಲ್ಲ.

ದೀಪಾವಳಿ ವಿಶೇಷ ಪುರವಣಿ

ಬಿಬಿಎಂಪಿಯು ಮೈದಾನದಲ್ಲಿ ಚಿಲ್ಲರೆ ಪಟಾಕಿ ಅಂಗಡಿಗಳನ್ನು ತೆರೆಯಲು ಈಗಾಗಲೇ ಸಾರ್ವಜನಿಕರಿಂದ ಅರ್ಜಿಯನ್ನು ಆಹ್ವಾನಿಸಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೈದಾನಗಳಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ತೆರೆಯಲು ತಾತ್ಕಾಲಿಕ ಮಾರಾಟ ಪರವಾನಗಿಗೆ ಆಸಕ್ತರಿಂದ ಪೊಲೀಸ್ ಇಲಾಖೆ ಅರ್ಜಿ ಆಹ್ವಾನಿಸಿದೆ.

ಢಂ ಢಂ ಪಟಾಕಿನ ಧಾಂ ಧೂಂ ಅಂತ ಎಲ್ಲೆಂದರಲ್ಲಿ ಮಾರುವಹಾಗಿಲ್ಲ!

ಸುರಕ್ಷತೆಯ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಅಗ್ನಿಶಾಮಕ ಇಲಾಖೆ ಪರಿಶೀಲಿಸಿ ನಿಗದಿ ಪಡಿಸಿದ ಬಿಬಿಎಂಪಿ ಮೈದಾನದಲ್ಲಿ ಚಿಲ್ಲರೆಯಾಗಿ ಪಟಾಕಿ ಮಾರಾಟಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಯಾವ್ಯಾವ ಬಿಬಿಎಂಪಿ ಆಟದ ಮೈದಾನ

ಯಾವ್ಯಾವ ಬಿಬಿಎಂಪಿ ಆಟದ ಮೈದಾನ

-ಕಾವಲ್ ಬೈರಸಂದ್ರ ಪಾನಿಪುರಿ ಗ್ರೌಂಡ್

-ಪಾಟರಿಟೌನ್ ಆಟದ ಮೈದಾನ

- ಸಗಾಯಪುರಂ ಪಾನಿಪುರಿ ಗ್ರೌಂಡ್

-ದೊಮ್ಮಲೂರು ಐಎಸ್ ಆರ್‌ಓ ಕ್ವಾಟರ್ಸ್

-ಮಾರತ್ ಹಳ್ಳಿ ಪೊಲೀಸ್ ಠಾಣೆ ಹಿಂಭಾಗ

-ಬೆಳ್ಳಂದೂರು ಪೊಲೀಸ್ ಠಾಣೆ ಹತ್ತಿರ

- ಬಿಟಿಎಂ ಲೇಔಟ್, ಜಕ್ಕಸಂದ್ರ ಟೀಚರ್ಸ್ ಕಾಲೊನಿ ಆಟದ ಮೈದಾನ, ನಂದಿನಿ ಆಟದ ಮೈದಾನ

- ಬಿಟಿಎಂ ಲೇಔಟ್ ಎಸ್‌ಎನ್‌ಎಸ್‌ರಾಜ್ ಲೇಕ್ ವ್ಯೂ ಅಪಾರ್ಟ್ ಮೆಂಟ್ ಎದುರಿನ ಆಟದ ಮೈದಾನ

-ಬೆಳ್ಳಂದೂರು, ಅಂಬಲೀಪುರ ಸಮುದಾಯ ಭವನದ ಜಾಗ

-ಯಲಹಂಕ, ಉನ್ನಿಕೃಷ್ಣನ್ ರಸ್ತೆಗೆ ಹೊಂದಿಕೊಂಡಿರುವ ಜಾಗ ಹಾಗೂ ಯಲಹಂಕ ಉಪನಗರ ಕರ್ನಾಟಕ ಗೃಹ ಮಂಡಳಿ ವಾಣಿಜ್ಯ ಸಂಕೀರ್ಣ ಮುಂಭಾಗ ಹೀಗೆ 21 ಜಾಗಗಳನ್ನು ಗುರುತಿಸಲಾಗಿದೆ.

- ಕೋರಮಂಗಲ, ಕೆಎಚ್‌ಬಿ ಕಾಲೊನಿ ಆಟದ ಮೈದಾನ

- ಕೋಣನಕುಂಟೆ ರಿಸರ್ವ್ ಬ್ಯಾಂಕ್ ಸಿಬ್ಬಂದಿ ಗೃಹ ನಿರ್ಮಾಣ ಸಹಕಾರಿ ಸಂಘದ ಮೈದಾನ

-ಕೈಗೊಂಡ್ರಹಳ್ಳಿ ಅಗ್ನಿ ಶಾಮಕ ಠಾಣೆ ಜಾಗ

- ರಾಮಗೊಂಡನಹಳ್ಳಿ- ಬಿಬಿಎಂಪಿ ಕಚೇರಿ ಮುಂದೆ

-ರಾಮಗೊಂಡನಹಳ್ಳಿ ಬಿಬಿಎಂಪಿ ಕಚೇರಿ ಮುಂಭಾಗ

-ವಾರ್ಡ್ 85ರ ಇಂದಿರಾ ಕ್ಯಾಂಟೀನ್ ಬಳಿ, ಬಿಬಿಎಂಪಿ ಜಾಗ

-ಎಚ್‌ಎಸ್ ಆರ್ ಬಡಾವಣೆ ಬಿಬಿಎಂಪಿ ಖಾಲಿ ಜಾಗ ಹಾಗೂ 1ನೇ ಸೆಕ್ಟರ್ 27ನೇ ಮುಖ್ಯರಸ್ತೆ ಬಿಬಿಎಂಪಿ ಜಾಗ

ದೀಪಾವಳಿಗೆ ಪಟಾಕಿ ಹೊಡೆಯಬೇಕಿಲ್ಲ, ಸಿಹಿ ಹಂಚಿದರೂ ಸಾಕು: ಸುಪ್ರೀಂಕೋರ್ಟ್

ಕ್ರಿಮಿನಲ್ ಕೇಸ್

ಕ್ರಿಮಿನಲ್ ಕೇಸ್

ಬಿಬಿಎಂಪಿ ನಿಗದಿಪಡಿಸಿರುವ ಮೈದಾನ ಮತ್ತು ಸ್ಥಳಗಳನ್ನು ಹೊರತುಪಡಿಸಿ ಬೇರೆಡೆ ಪಟಾಕಿ ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮೈಸೂರಿನಲ್ಲಿ ಅಕ್ರಮ ಪಟಾಕಿ ತಯಾರಿಕೆ ವೇಳೆ ಸ್ಫೋಟ: 7 ಜನರಿಗೆ ಗಾಯ

ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ನೀಡಬೇಕು

ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ನೀಡಬೇಕು

ಪರವಾನಗಿ ಪಡೆಯಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯನ್ನು ನೀಡಬೇಕಾಗಿದೆ. ಮಾರಾಟ ಮಳಿಗೆಗಳನ್ನು ತೆರೆಯಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಪ್ರತಿಯೊಬ್ಬ ಅರ್ಜಿದಾರ ಕಡ್ಡಾಯವಾಗಿ ಜಿಎಸ್‌ಟಿ ಸಂಖ್ಯೆ ಹೊಂದಿರಬೇಕು. ಅದನ್ನು ತಾತ್ಕಾಲಿಕ ಪಟಾಕಿ ಅಂಗಡಿ ತೆರಯುವ ಉದ್ದೇಶಕ್ಕಾಗಿ ಪಡೆಯಬೇಕು.

ಚೀನಾ ಪಟಾಕಿಗೆ ಬಹಿಷ್ಕಾರ ಹಾಕಿ ದೀಪಾವಳಿ ಆಚರಿಸಿದ ಮಂಗಳೂರಿಗರು

ಪಟಾಕಿ ಸಿಡಿಸುವ ಕುರಿತು ಸರ್ಕಾರದ ಮಾರ್ಗಸೂಚಿ

ಪಟಾಕಿ ಸಿಡಿಸುವ ಕುರಿತು ಸರ್ಕಾರದ ಮಾರ್ಗಸೂಚಿ

ದೀಪಾವಳಿಯಂದು ಪಟಾಕಿ ಸಿಡಿಸಲು ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದೆ ಸುಪ್ರೀಂಕೋರ್ಟ್ ಆದೇಶದನುಸಾರವೇ ಪಟಾಕಿ ಸಿಡಿಸಲು ಸೂಚಿಸಿದ್ದು, ನವೆಂಬರ್ 5ರಿಂದ 8ರವರೆಗೆ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ.

English summary
BBMP had invited application for crackers sale during Deepavali festival at selected BBMP grounds with proper safety measures and precautions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X