25,00,000 ಡ್ರಾಫ್ಟ್ ಇ-ಖಾತಾದಲ್ಲಿ ವಿತರಣೆ ಆಗಿದ್ದೇಷ್ಟು?...BBMP E-Khata Updates
ಬೆಂಗಳೂರು, ಮೇ 10: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ನಡೆಸಲಾಗಿದೆ. ಹಲವು ಉಪಕ್ರಮ ಜಾರಿಗೊಳಿಸಲಾಗಿದೆ. ಕರಡು ಇ-ಖಾತಾಗಳ ಪೈಕಿ ಆಸ್ತಿ ಮಾಲೀಕರಿಗೆ ಅಂತಿಮ ಇ-ಖಾತಾ ವಿತರಣೆ ಮಾಡಲಾಗುತ್ತಿದೆ. ಆದರೆ ಪ್ರಕ್ರಿಯೆಯು ನಿಧಾನಗತಿಯಲ್ಲಿ ಸಾಗುತ್ತಿದೆ. ನಿರೀಕ್ಷಿತ ಗುರಿ ತಲುಪಲಾಗಿಲ್ಲ. ಕಾರಣ ಬಿಬಿಎಂಪಿಯಿಂದ ಇದುವರೆಗೂ ಕೇವಲ 05 ಲಕ್ಷ ಇ-ಖಾತಾಗಳನ್ನು ಮಾತ್ರ ವಿತರಣೆ ಮಾಡಲಾಗಿದೆ.
ಬಿಬಿಎಂಪಿಯು ಬೆಂಗಳೂರು 5 ಲಕ್ಷ ನಾಗರಿಕರು ಅಂತಿಮ ಇ-ಖಾತಾ ವಿತರಿಸಿದೆ ಎಂದು ಸೋಮವಾರ ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಒಟ್ಟು ಬಿಬಿಎಂಪಿ ವ್ಯಾಪ್ತಿಯಲ್ಲಿ 25 ಲಕ್ಷಕ್ಕಿಂತ ಹೆಚ್ಚು ಡ್ರಾಫ್ಟ್ ಇ-ಖಾತಾ ಆನ್‌ಲೈನ್‌ನಲ್ಲಿ ಲಭ್ಯವಿದೆ. ಅವುಗಳನ್ನು ನಾಗರಿಕರು ಅರ್ಜಿ ಸಲ್ಲಿಸುವ ಮೂಲಕ ಪಡೆದುಕೊಳ್ಳುವಂತೆ ಅವರು ತಿಳಿಸಿದ್ದಾರೆ.

ಅಂತಿಮ ಇ-ಖಾತಾ ಪಡೆಯಲು ನಾಗರಿಕರು ತಮ್ಮ ಆಧಾರ್ ಸಂಖ್ಯೆ, ಮಾರಾಟ ದಸ್ತಾವೇಜಿನ ಸಂಖ್ಯೆ, ಆಸ್ತಿಯ ತೆರಿಗೆ ಐ.ಡಿ, ಬೆಸ್ಕಾಂ ಸಂಖ್ಯೆ (ಖಾಲಿ ಜಾಗಕ್ಕೆ ಐಚ್ಛಿಕ), ಮತ್ತು ಆಸ್ತಿಯ ಫೋಟೋ ಹಾಕಬೇಕು. ಈ ಮಾಹಿತಿಗಳನ್ನು ನೀಡಿದ ನಂತರ ನಾಗರಿಕರಿಗೆ ಅಂತಿಮ ಇ-ಖಾತಾ 1 ರಿಂದ 2 ದಿನಗಳಲ್ಲಿ ಸಿಗುತ್ತದೆ. ಈವರೆಗೆ ಸುಮಾರು 5 ಲಕ್ಷ ಆಸ್ತಿ ಮಾಲೀಕರು ತಮ್ಮ ಇ-ಖಾತಾ ಪಡೆದಿದ್ದಾರೆ ಎಂದು ಸಂಕಿ ಸಂಖ್ಯೆ ವಿವರಿಸಿದರು.
ನಿತ್ಯ 3,000 ಇ-ಖಾತಾ ಪ್ರತಿಕ್ರಿಯೆ
ಇ-ಖಾತಾ ಸಲುವಾಗಿ ಪ್ರತಿದಿನ ಸುಮಾರು 3,000 ಜನರು ಈ ಪ್ರಕ್ರಿಯಿಸುತ್ತಿದ್ದಾರೆ. ಅದೆಲ್ಲರಿಗೂ ಇ-ಖಾತಾ ಅನುಮೋದನೆ ಸಿಗುತ್ತಿದೆ. ಆದ್ದರಿಂದ ನಾಗರಿಕರು ಇ-ಖಾತಾ ಗೆ ಅರ್ಜಿ ನೀಡಿದ ನಂತರ ಅದು 1 ರಿಂದ 2 ದಿನಗಳಲ್ಲಿ ಅನುಮೋದನೆ ಆಗುತ್ತದೆ. ಸದ್ಯ ಮನೆಬಾಗಿಲಿಗೆ ಇ-ಖಾತಾ ನೀಡುವ ಸೌಲಭ್ಯವನ್ನು ಬಿಬಿಎಂಪಿ ಆರಂಭಿಸಿದೆ. ಅದಕ್ಕಾಗಿ ನೀವು ಜನಸೇವಕ ಸಂಖ್ಯೆಗೆ ಕರೆ (080 49203888) ಮಾಡಬಹುದು. ಅಲ್ಲದೇ ನಿಮ್ಮ ಇ-ಖಾತಾವನ್ನು BBMPeAasthi.karnataka.gov.in ನಲ್ಲಿ ಆನ್‌ಲೈನ್ ಮೂಲಕವು ಪಡೆಯಬಹುದಾಗಿದೆ. ಇ ಖಾತೆ ಅರ್ಜಿಗೆ 45 ರೂಪಾಯಿ ಶುಲ್ಕವಿದ್ದು, ಪ್ರತಿ ಝರಾಕ್ಸ್‌ಗೆ ಹೆಚ್ಚುವರಿ ಹಣ ಪಡೆಯಬಹುದು.
ಎಲ್ಲ ಇ-ಖಾತಾ ವಿತರಣೆ ಯಾವಾಗ?
ಒಂದು ವರ್ಷದ ಹಿಂದೆಯೇ ಸರ್ಕಾರ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಇ-ಖಾತಾ ವಿತರಣೆ ಕಾಯಕ್ರಮ ಜಾರಿಗೆ ತರಲಾಗಿದೆ. ಲಕ್ಷಾಂತರ ಖಾತೆಗಳನ್ನು ಹಂತ ಹಂತವಾಗಿ ಡಿಜಿಟಲೀಕರಣ ಮಾಡಲಾಗಿದೆ. ಮನೆ ಮನೆಗೆ ಇ-ಖಾತಾ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ, ಇ-ಖಾತಾ ಪ್ರಯೋಜನೆ ಹೀಗೆ ಎಲ್ಲವನ್ನು ವಿವರಿಸಿ ಜಾಗೃತಿ ಮೂಡಿಸಲಾಗಿದೆ. ಆದರೆ ಬಿಬಿಎಂಪಿ ಅಂದುಕೊಂಡಷ್ಟು ಇ-ಖಾತಾ ವಿತರಣೆ ಗುರಿ ಮುಟ್ಟಲಾಗಿಲ್ಲ ಎಂದು ಹೇಳಾಗುತ್ತಿದೆ. ಹೀಗೆ ಆದರೆ ಎಲ್ಲ 25 ಲಕ್ಷ ಕರಡು ಇ-ಖಾತಾ ವಿತರಣೆ ತಡವಾಗಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications