ಸೆಪ್ಟೆಂಬರ್ 28ಕ್ಕೆ ಬೆಂಗಳೂರು ಮೇಯರ್ ಚುನಾವಣೆ
Recommended Video

Bengaluru : BBMP Mayor , Deputy Mayor Election On September 28 | Oneindia Kannada
ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರು ಮೇಯರ್ ಚುನಾವಣೆಯು ಇದೇ ತಿಂಗಳ 28ರಂದು ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಪ್ರಾಂತೀಯ ಚುನಾವಣಾ ಆಯೋಕ್ತರು ಆದೇಶ ಹೊರಡಿಸಿದ್ದಾರೆ. ಸೆಪ್ಟೆಂಬರ್ 28ರಂದು ಬೆಳಗ್ಗೆ 11:30ಕ್ಕೆ ಚುನಾವಣೆ ನಡೆಸಲಾಗುವುದು ಆಯುಕ್ತರು ತಿಳಿಸಿದ್ದಾರೆ.
ಉಪ ಮೇಯರ್ ಚುನಾವಣೆಯೂ ಅದೇ ನಡೆಯಲಿದೆ ಎಂದು ಆಯುಕ್ತರು ಘೋಷಣೆ ಮಾಡಿದ್ದಾರೆ. ಆದರೆ, ಇದೇ ವೇಳೆ, ಬಿಬಿಎಂಪಿ ಸ್ಥಾಯಿ ಸಮಿತಿಗಳ ಪದಾಧಿಕಾರಿಗಳ ಚುನಾವಣೆ ಸದ್ಯಕ್ಕೆ ನಡೆಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಿಬಿಎಂಪಿಯಲ್ಲಿ 12 ಸ್ಥಾಯಿ ಸಮಿತಿ ಅಧ್ಯಕ್ಷರು, ಸದ್ಯಸ್ಯರ ಚುನಾವಣೆ ನಡೆಯಬೇಕಿದೆ. ಆದರೆ, ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಅಕ್ಟೋಬರ್ ವರೆಗೂ ಇರುವುದರಿಂದ ಅದಕ್ಕೆ ಪ್ರತ್ಯೇಕ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ಸ್ಥಾಯಿ ಸಮಿತಿಗಳ ಚುನಾವಣೆಯ ದಿನಾಂಕ ನಿಗದಿಯ ಜವಾಬ್ದಾರಿಯನ್ನು ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗೆ ಸೂಚಿಸಲಾಗಿದೆ.












Click it and Unblock the Notifications