ಬೆಂಗಳೂರಲ್ಲಿ ಮಳೆ ನೀರು ಸಂಗ್ರಹಕ್ಕೆ ಬಿಬಿಎಂಪಿ ಮಾಸ್ಟರ್ ಪ್ಲಾನ್!
ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ನೀರಿನ ಸಮಸ್ಯೆಯಿಂದಾಗಿ ಜನ ಪರದಾಡುವ ಪರಿಸ್ಥಿತಿ ಈಚೆಗೆ ನಿರ್ಮಾಣವಾಗಿತ್ತು. ಇದೀಗ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ನೀರಿನ ಸಮಸ್ಯೆಯನ್ನು ಮಳೆಗಾಲದಲ್ಲಿ ನೀರು ಸಂಗ್ರಹ ಮಾಡುವ ಮೂಲಕ ತಪ್ಪಿಸಲು ಪಾಲಿಕೆ ಮುಂದಾಗಿದೆ.
ಕಳೆದ ವರ್ಷ ಎದುರಾದ ಬರದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಂಕಷ್ಟ ಎದುರಾಗಿತ್ತು. ಬೆಂಗಳೂರಿನಲ್ಲೂ ನೀರಿನ ಸಮಸ್ಯೆ ವ್ಯಾಪಕವಾಗಿತ್ತು. ಬೆಂಗಳೂರು ಹಲವು ದಶಕಗಳ ನಂತರ ತೀವ್ರ ಪ್ರಮಾಣದಲ್ಲಿ ಗರಿಷ್ಠ ಉಷ್ಣಾಂಶ ಹಾಗೂ ಬರವನ್ನು ಕಂಡಿತ್ತು. ಇದೀಗ ಕಳೆದ ವರ್ಷದ ಹವಾಮಾನ ವೈಪರೀತ್ಯದಿಂದ ಪಾಠ ಕಲಿತಿರುವ ಬಿಬಿಎಂಪಿಯು ನೀರು ಉಳಿತಾಯ ಹಾಗೂ ಉದ್ಯಾನಗಳ ನಿರ್ವಹಣಗೆ ಆದ್ಯತೆ ನೀಡಿದೆ.

ಬೆಂಗಳೂರಿನಲ್ಲಿ ಪಾರ್ಕ್‌ಗಳಲ್ಲಿ ನೀರಿನ ಸಮಸ್ಯೆ ತಪ್ಪಿಸಲು ಹಾಗೂ ವ್ಯರ್ಥವಾಗಿ ನೀರು ಪೋಲಾಗುವುದನ್ನು ತಪ್ಪಿಸಲು ಬಿಬಿಎಂಪಿ ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯ ಪಾರ್ಕ್‌ಗಳಲ್ಲಿ ಬೀಳುವ ಮಳೆ ನೀರು ವ್ಯರ್ಥವಾಗದೆ ತಡೆಯುತ್ತಿದೆ. ಅಲ್ಲದೇ ಈ ರೀತಿ ಪಾರ್ಕ್‌ಗಳಲ್ಲಿ ಅಲ್ಲೇ ಸಂಗ್ರಹಿಸಿ ಇಂಗಿಸುವ ಮತ್ತು ಅಂರ್ತಜಲ ಮಟ್ಟ ಹೆಚ್ಚಿಸುವ ಸಲುವಾಗಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಬಿಎಂಪಿಯ ಅಡಿಯಲ್ಲಿ 1280 ಪಾರ್ಕ್‌ಗಳಿವೆ. ಈ ಪಾರ್ಕ್‌ಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಲು ಪಾಲಿಕೆ ಮುಂದಾಗಿದೆ. 1280 ಪಾರ್ಕ್‌ಗಳಲ್ಲಿ ಯಾವ ಪಾರ್ಕ್‌ಗಳಲ್ಲಿ ಇಂಗುಗುಂಡಿ (ಗ್ರೌಂಡ್ ವಾಟರ್)ಗೆ ಯೋಗ್ಯವಾಗಿದೆ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ವಿವಿಧ ಪಾರ್ಕ್‌ಗಳಲ್ಲಿ ಹಂತ-ಹಂತವಾಗಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಲು ಪಾಲಿಕೆಯ ತೋಟಗಾರಿಕೆ ಇಲಾಖೆ ಮುಂದಾಗಿದೆ. ಇನ್ನು 2024-25ನೇ ಸಾಲಿನಲ್ಲಿ ಈಗಾಗಲೇ 634 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪಾರ್ಕ್‌ಗಳಲ್ಲಿ 1000 ಇಂಗು ಗುಂಡಿಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಪಾಲಿಕೆಯ ವತಿಯಿಂದ ಮಾಸ್ಟರ್ ಪ್ಲಾನ್ ರೆಡಿ ಮಾಡಿಕೊಳ್ಳಲಾಗುತ್ತಿದೆ.

ಮಳೆ ನೀರು ಸಂಗ್ರಹ: ಬೆಂಗಳೂರಿನ ಪಾರ್ಕ್‌ಗಳಲ್ಲಿ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡಲಾಗುತ್ತಿದೆ. ಪಾರ್ಕ್‌ಗಳಲ್ಲಿ ಬಿದ್ದಂತಹ ಮಳೆ ನೀರು ವ್ಯರ್ಥವಾಗದೆ ಅಲ್ಲೇ ಸಂಗ್ರಹಿಸಲು ಬಿಬಿಎಂಪಿ ಈ ಪ್ಲಾನ್ ಮಾಡಿಕೊಂಡಿದೆ. ಇದರ ಪ್ರಕಾರ, ಪಾರ್ಕ್‌ಗಳಲ್ಲಿ ನೀರು ಇಂಗಿಸುವ ಸಲುವಾಗಿ ಹಾಗೂ ಅಂರ್ತಜಲ ಮಟ್ಟ ಹೆಚ್ಚಿಸುವ ಪ್ಲಾನ್ ಇದೆ. 12 ಅಡಿ ಉದ್ದ ಹಾಗೂ 5 ಅಡಿ ಅಗಲ ಅಳತೆಯ ಇಂಗು ಗುಂಡಿಗಳನ್ನು ನಿರ್ಮಿಸಿ ಅದರಲ್ಲಿ ಸುಮಾರು 4000 ಲೀಟರ್ ಮಳೆ ನೀರನ್ನು ಸಂಗ್ರಹ ಮಾಡಲಾಗುತ್ತದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾರ್ಕ್‌ಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡುವುದರಿಂದ, ಪೋಲಾಗಲ್ಲ ಎನ್ನುವುದು ಇದರ ಲೆಕ್ಕಾಚಾರ. ಈ ರೀತಿ ಇಂಗುಗುಂಡಿಗಳನ್ನು ಮಾಡುವುದರಿಂದ ಪಾರ್ಕ್‌ಗಳಲ್ಲಿ ನೀರಿನ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ. ಇನ್ನು ಪಾರ್ಕ್‌ಗಳಲ್ಲಿ ಕೇವಲ ಇಂಗುಗುಂಡಿಗಳನ್ನು ಮಾತ್ರ ನಿರ್ಮಾಣ ಮಾಡದೆ ಅವು ವೈಜ್ಞಾನಿಕವಾಗಿ ಇರುವಂತೆಯೂ ನೋಡಿಕೊಳ್ಳಲಾಗಿದೆ. ನೀರು ಇಂಗುವ ಇಂಗು ಗುಂಡಿಯ ಮೇಲ್ಭಾಗಕ್ಕೆ ಕಬ್ಬಿಣದ ಪರದೆ ಅಳವಡಿಸಲಾಗಿದೆ. ಇದರಿಂದ ಹರಿದು ಬರುವ ನೀರಿನಲ್ಲಿ ಕಸ ಇದ್ದರೆ ಅಲ್ಲೇ ಉಳಿದುಕೊಳ್ಳಲಿದೆ. ಶೇಕಡ 80 ರಷ್ಟು ನೀರು ಇಂಗುಗುಂಡಿಗೆ ಸೇರುವಂತೆ ಮಾಡಲಾಗಿದೆ. 12 X 5 ಸುತ್ತಳತೆಯಲ್ಲಿ 4 ಅಡಿ ಸುತ್ತಳತೆಯ ಸಿಮೆಂಟ್‌ರಿಂಗ್ ಅಳವಡಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.












Click it and Unblock the Notifications