ಬೆಂಗಳೂರಿನಲ್ಲಿ ಉದ್ದಿಮೆ ಲೈಸೆನ್ಸ್‌ಗೆ ಬಿಬಿಎಂಪಿಯಿಂದ ಮಹತ್ವದ ಅಪ್ಡೇಟ್
BBMP Business license Update: ಬೆಂಗಳೂರಿನಲ್ಲಿ ನಿರ್ದಿಷ್ಟ ಅಂಗಡಿಗಳನ್ನು ಹಾಗೂ ಉದ್ದಿಮೆಗಳನ್ನು ನಡೆಸುವವರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಶಾಕ್ ಕೊಟ್ಟಿದೆ. ಬೆಂಗಳೂರಿನಲ್ಲಿ 40 ಅಡಿಗಿಂತಲೂ ಕಡಿಮೆ ಜಾಗವಿರುವ ರಸ್ತೆಗಳಲ್ಲಿ ಹಾಗೂ ಮುಖ್ಯವಾಗಿ ವಸತಿ ಪ್ರದೇಶಗಳಲ್ಲಿ ಅಂಗಡಿಗಳು, ವ್ಯಾಪಾರ ಸಂಸ್ಥೆಗಳಿಗೆ ಬಿಬಿಎಂಪಿ ಶಾಕ್ ಕೊಟ್ಟಿದೆ. ಬೆಂಗಳೂರಿನ ಕೆಲವು ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಹಲವು ಭಾಗದಲ್ಲಿ ಈ ಸಮಸ್ಯೆ ಇದೆ. ಹೀಗಾಗಿ ಈ ಸಮಸ್ಯೆಯನ್ನು ತಪ್ಪಿಸುವುದಕ್ಕೆ ಪಾಲಿಕೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿ ಅಂಗಡಿಗಳ ಲೈಸೆನ್ಸ್‌ಗೆ ಸಂಬಂಧಿಸಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಹತ್ವದ ಆದೇಶವೊಂದನ್ನು ಮಾಡಿದೆ. ಇದರಿಂದ ಬೆಂಗಳೂರಿನಲ್ಲಿ ಉದ್ದಿಮೆಗಳನ್ನು ನಡೆಸುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಸವಾಲು ಎದುರಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ 2015ರ ನಂತರ ಪ್ರಾರಂಭಿಸಲಾಗಿರುವ ಅಂಗಡಿಗಳ ವ್ಯಾಪಾರ ಪರವಾನಗಿ (ಲೈಸೆನ್ಸ್)ಗಳನ್ನು ಇನ್ಮುಂದೆ ರಿನಿವಲ್ ಮಾಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿಯು ಸುತ್ತೋಲೆ ಹೊರಡಿಸಿದೆ.

ಬೆಂಗಳೂರಿನ ಕೆಲವು ಭಾಗದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಳ ಹಾಗೂ ಸ್ಥಳೀಯರಿಗೆ ಸಮಸ್ಯೆ ಆಗುತ್ತಿರುವುದರಿಂದ ಈ ಸುಧಾರಣೆ ಕ್ರಮಗಳನ್ನು ತೆಗೆದುಕೊಂಡಿರುವ ಸಾಧ್ಯತೆ ಇದೆ. ಈ ಸಂಬಂಧ ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ಅವರು ಆದೇಶ ಮಾಡಿದ್ದಾರೆ.
ಯಾರಿಗೆ ಅನ್ವಯ: ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 2015ರ ನಂತರ ತೆಗೆದಿರುವ ಅಂಗಡಿಗಳಿಗೆ ಇದು ಮುಖ್ಯವಾಗಿ ಅನ್ವಯವಾಗಲಿದೆ. ಇನ್ಮುಂದೆ ಈ ಅಂಗಡಿಗಳಿಗೆ ಲೈಸೆನ್ಸ್ ಸಿಗುವುದು ಅನುಮಾನ ಅಂತಲೇ ಹೇಳಲಾಗುತ್ತಿದೆ. ಅಲ್ಲದೆ 2025-26ನೇ ಸಾಲಿನ ಹಣಕಾಸು ವರ್ಷದ ವ್ಯಾಪಾರ ಲೈಸೆನ್ಸ್‌ಗಳನ್ನು ಶೀಘ್ರ ರಿನಿವಲ್ ಮಾಡಿಕೊಳ್ಳಬೇಕು ಎಂದೂ ಸೂಚನೆ ಕೊಡಲಾಗಿದೆ. ಬೆಂಗಳೂರಿನಲ್ಲಿ ಅಂಗಡಿಗಳ ಲೈಸೆನ್ಸ್ ಅನ್ನು ಫೆಬ್ರವರಿ 28ರ ಒಳಗೆ ಮಾಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ.
ಫೆಬ್ರವರಿ 28ರ ವರೆಗೆ ದಂಡವಿಲ್ಲದ ಸೇವೆ: ಬೆಂಗಳೂರಿನಲ್ಲಿ ಉದ್ದಿಮೆಗಳ ಲೈಸೆನ್ಸ್ ರಿನಿವಲ್ (ಉದ್ದಿಮೆಗಳ ಪರವಾನಗಿ)ಗೆ ಟೈಮ್ ಲೈನ್ ನಿಗದಿ ಮಾಡಲಾಗಿದೆ. ಉದ್ದಿಮೆ ಲೈಸೆನ್ಸ್ ಶುಲ್ಕವನ್ನು ಆನ್‌ಲೈನ್ ಮೂಲಕ ಮಾಡಬೇಕು. ಫೆಬ್ರವರಿ 1 ರಿಂದ ಫೆಬ್ರವರಿ 28ರ ವರೆಗೆ ದಂಡವನ್ನು ಪಾವತಿ ಮಾಡದೆ ಲೈಸೆನ್ಸ್ ಶುಲ್ಕವನ್ನು ಪಾವತಿ ಮಾಡುವುದಕ್ಕೆ ಅವಕಾಶ ಇದೆ. ಆದರೆ ಮಾರ್ಚ್‌ನ ನಂತರ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಮಾರ್ಚ್ 1 ರಿಂದ 31 ರವರೆಗೆ ಲೈಸೆನ್ಸ್ ರಿನಿವಲ್‌ನ ಶುಲ್ಕವನ್ನು ಶೇಕಡ 25ರಷ್ಟು ದಂಡ ಮೊತ್ತ ಪಾವತಿ ಮಾಡಬೇಕಾಗುತ್ತದೆ. ಅಲ್ಲದೆ ಏಪ್ರಿಲ್ 1 ರಿಂದ ಇದು ಇನ್ನಷ್ಟು ಹೆಚ್ಚಳವಾಗಲಿದೆ. ಏಪ್ರಿಲ್ 1ರಿಂದ ಪರವಾನಿಗೆ ಶುಲ್ಕದ ಶೇಕಡ 100ರಷ್ಟು ದಂಡ ಹಾಗೂ ಲೈಸೆನ್ಸ್ ಶುಲ್ಕವನ್ನು ಪಾವತಿ ಮಾಡಬೇಕು ಎಂದು ಬಿಬಿಎಂಪಿ ಸೂಚನೆ ನೀಡಿದೆ.
ಇನ್ನು ಬೆಂಗಳೂರಿನಲ್ಲಿ ಉದ್ದಿಮೆ ಮಾಡುವವರು ಅವರ ಅನುಕೂಲಕ್ಕೆ ಅನುಗುಣವಾಗಿ 1 ರಿಂದ 5 ವರ್ಷಗಳ ಕಾಲಕ್ಕೆ ಲೈಸೆನ್ಸ್ ರಿನಿವಲ್ ಮಾಡಿಕೊಳ್ಳಲು ಅವಕಾಶ ಇದೆ. ಇನ್ನು ಲೈಸೆನ್ಸ್ ಮಿತಿಯನ್ನು ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸುವುದಕ್ಕೂ ಅವಕಾಶ ಇದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications