ಥಣಿಸಂದ್ರದ ಅಪಾರ್ಟ್‌ಮೆಂಟ್‌ಗೆ ನೀಡಿದ್ದ ಭೂಸ್ವಾಧೀನಾನುಭವ ಪತ್ರ ಬಿಬಿಎಂಪಿ ಹಿಂಪಡೆದಿದೆ
ಬೆಂಗಳೂರು, ಜನವರಿ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಥಣಿಸಂದ್ರದ ಅಪಾರ್ಟ್‌ಮೆಂಟ್‌ಗೆ ನೀಡಿದ್ದ ಸ್ವಾಧೀನಾನುಭವ ಪತ್ರ (OC) ಅನ್ನು ಭಾನುವಾರ ಹಿಂಪಡೆದಿದೆ. ಈ ಮೂಲಕ ಶೋಭಾ ಲಿಮಿಟೆಡ್‌ನ ಈ ವಸತಿ ಸಮುಚ್ಚಯದ ನಿವಾಸಿಗಳಿಗೆ ಶಾಕ್ ನೀಡಿದೆ.
ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಈ ವಸತಿ ಸಮುಚ್ಚಯ (Apartment) ವನ್ನು ಶೋಭಾ ಕಂಪನಿ ಅಭಿವೃದ್ಧಿಪಡಿಸಿ ಮಾರಾಟ ಮಾಡಿತ್ತು. ಇಲ್ಲಿ ನೆಲೆಸುತ್ತಿದ್ದ ಸಾಕಷ್ಟು ಕುಟುಂಬಗಳಿಗೆ ಇದೀಗ ಆತಂಕ ಎದುರಾಗಿದೆ. ಅಪಾರ್ಟ್‌ಮೆಂಟ್ ಬಿಲ್ಡರ್ ಅಗ್ನಿಶಾಮಕ ಇಲಾಖೆಗೆ ನಕಲಿ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಸಲ್ಲಿಸಿದೆ ಎಂದು ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯ್ಲಲಿ ಬಿಬಿಎಂಪಿ ಭೂಸ್ವಾಧೀನಾನುಭವ ಪತ್ರ ಹಿಂಪಡೆದಿದೆ ಎಂದು ಟೌನ್ ಪ್ಲಾನಿಂಗ್ (ಉತ್ತರ) ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಸದ್ಯ ಬಿಲ್ಡರ್‌ಗಳು ಸಲ್ಲಿಸಿರುವ ಪ್ರಮಾಣಪತ್ರಗಳು ಅಸಲಿ, ಇಲ್ಲವೋ ನಕಲಿ ಎಂಬುದನ್ನು ನಿರ್ಧರಿಸಲು ಬಿಬಿಎಂಪಿಯು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳಿಗೆ (ಕೆಎಸ್‌ಎಫ್‌ಇಎಸ್) ಪತ್ರ ಬರೆದು ಕೋರಿದೆ.
ಬಿಬಿಎಂಪಿಯಿಂದ ಅನುಮತಿ ಪಡೆಯುವಾಗ ಮಾಲೀಕರು ಯಾವುದೇ ತಪ್ಪು ಮಾಹಿತಿ, ನಕಲಿ ದಾಖಲೆಗಳನ್ನು ಸಲ್ಲಿಸಿದ್ದೇ ಆದಲ್ಲಿ ಭೂಸ್ವಾಧೀನಾನುಭವ ಪ್ರಮಾಣಪತ್ರ (OC) ರದ್ದುಗೊಳಿಸಲು ಅವಕಾಶ ಇದೆ ಎಂದು ಅಧಿಕಾರಿಗಳು ಹೇಳಿದರು.
2016 ಮತ್ತು 2018 ರಲ್ಲಿ ಅವರು ಸಮುಚ್ಚಯಕ್ಕೆ ಸಂಬಂಧಿಸದಿಂತೆ ಸಲ್ಲಿಸಿದ ನಿರಾಕ್ಷೇಪಣಾ ಪತ್ರ ಮತ್ತು ದಾಖಲೆಗಳ ಆಧಾರದ ಮೇಲೆ ಬಿಬಿಎಂಪಿ ವಸತಿ ಸಮುಚ್ಚಯಕ್ಕೆ ಭೂಸ್ವಾಧೀನಾನುಭವ ಪತ್ರ ನೀಡಿತ್ತು. ಆದರೆ ದಾಖಲೆಗಳು ನಕಲಿ ಎಂಬ ಕಾರಣಕ್ಕೆ ಬಿಬಿಎಂಪಿ ನೋಟಿಸ್ ನೀಡಿದೆ.

ಬಿಬಿಎಂಪಿಯ ಈ ನಿರ್ಧಾರಗಳು, ಕೇಳಿ ಬಂದ ಆರೋಪಗಳ ಮೇರೆಗೆ ಸ್ವಂತ ಮನೆ ಹೊಂದಬೇಕು ಎಂಬ ನೂರಾರು ಮಂದಿಯ ಕನಸು ನುಚ್ಚು ನೂರಾಗಿದೆ. ಈ ಮಧ್ಯೆ ಶೋಭಾ ಕಂಪನಿ ಪ್ರತಿನಿಧಿಗಳು ನಿವಾಸಿಗಳಲ್ಲಿ ಧೈರ್ಯ ತುಂಬಿದ್ದಾರೆ. ಯಾರೂ ಭಯ ಪಡುವ ಅಗತ್ಯವಿಲ್ಲ. ಬಿಬಿಎಂಪಿ ನೀಡಿರುವ ನೋಟಿಸ್ ಯಾರ ಮೇಲೂ ಪ್ರಭಾವ ಬೀರುವುದಿಲ್ಲ. ನಾವು ಎಲ್ಲ ನಿಯಮಗಳನ್ನು ಅನುಸರಿಸಿದ್ದು, ಈ ಬಗ್ಗೆ ಪರಿಹಾರ ಕ್ರಮ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.












Click it and Unblock the Notifications