ಬೆಂಗಳೂರಿನ 1267 ಅಪಾರ್ಟ್ಮೆಂಟ್ಸ್ ಕಂಟೈನ್ಮೆಂಟ್ ಜೋನ್ಸ್

ಬೆಂಗಳೂರು, ಜುಲೈ 29: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯಲ್ಲಿನ ಕೊವಿಡ್ 19 ಸಕ್ರಿಯ ಕಂಟೈನ್ಮೆಂಟ್ ಜೋನ್ ಸಂಖ್ಯೆ 12,325ಕ್ಕೇರಿದೆ. ಒಟ್ಟಾರೆ,16,005 ಜೋನ್ ಗುರುತಿಸಲಾಗಿದೆ. ಈ ಪೈಕಿ ಬೆಂಗಳೂರಿನ 1267 ವಸತಿ ಸಮುಚ್ಚಯ(apartment complex)ಗಳು ಸೇರಿವೆ. ಈಗಲೂ ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿ ಹೆಚ್ಚು ಸೋಂಕಿತರು ಕಂಡು ಬಂದಿದ್ದಾರೆ.

Recommended Video

      Rafael fighter jet lands in India | Oneindia Kannada

      ಬೆಂಗಳೂರು ದಕ್ಷಿಣದಲ್ಲಿ 3,935 ಕಂಟೈನ್ಮೆಂಟ್ ಜೋನ್ ಗಳಿವೆ. ಇದರ ಬೆನ್ನಲ್ಲೇ ಬೆಂಗಳೂರು ಪೂರ್ವ ವಲಯ 2,256 ಜೋನ್, ಬೆಂಗಳೂರು ಪಶ್ಚಿಮ 1,770, ಬೊಮ್ಮನಹಳ್ಳಿ 1548, ರಾಜರಾಜೇಶ್ವರಿ ನಗರ 1124, ಮಹದೇವಪುರ 937, ಯಲಹಂಕ 437 ಹಾಗೂ ದಾಸರಹಳ್ಳಿ 318 ಸಕ್ರಿಯ ಕಂಟೈನ್ಮೆಂಟ್ ಜೋನ್ ಹೊಂದಿವೆ.

      ಅಪಾರ್ಟ್ಮೆಂಟ್ ನಿವಾಸವೊಂದರಲ್ಲಿ ಕೊರೊನಾವೈರಸ್ ಪಾಸಿಟಿವ್ ವ್ಯಕ್ತಿ ಇದ್ದರೆ ಆ ಮನೆಯ ಮೇಲಗಡೆ, ಪಕ್ಕದ ಮನೆ, ಎದುರುಮನೆ ಎಲ್ಲವನ್ನೂ ಕಂಟೈನ್ಮೆಂಟ್ ಜೋನ್ ಎಂದು ಪರಿಗಣಿಸಲಾಗುತ್ತದೆ. ಇನ್ನು 13,276 ಜೋನ್ ಗಳಲ್ಲಿ ಸೋಂಕಿತ ವ್ಯಕ್ತಿ ಇರುವ ಮನೆಯ ರಸ್ತೆ ಬಂದ್ ಮಾಡಲಾಗಿದೆ.

      BBMP has 1,267 apartment complexes containment zones in Bengaluru

      ಸೋಮವಾರದಂದು ಬಿಬಿಎಂಪಿ ವ್ಯಾಪ್ತಿಯಲ್ಲಿ 1470ಕೇಸ್ ಪತ್ತೆಯಾಗಿದ್ದು, 30 ರಿಂದ 39 ವಯೋಮಿತಿ(217 ಪುರುಷ ಹಾಗೂ 87 ಮಹಿಳೆ), 40 ರಿಂದ 49 (201 ಪುರುಷ ಹಾಗೂ 95 ಮಹಿಳೆ)ವಯೋಮಿತಿಯವರು ಬಾಧಿತರಾಗಿದ್ದಾರೆ. ಬೆಂಗಳೂರು ದಕ್ಷಿಣ, ಪೂರ್ವ, ಪಶ್ಚಿಮ, ಬೊಮ್ಮನಹಳ್ಳಿ, ಮಹದೇವಪುರ, ಆರ್ ಆರ್ ನಗರ, ಯಲಹಂಕ ಹಾಗೂ ದಾಸರಹಳ್ಳಿ ಕ್ರಮವಾಗಿ ಹೆಚ್ಚು ಪ್ರಕರಣ ಕಾಣಿಸಿಕೊಂಡ ವಲಯಗಳಾಗಿವೆ.

      ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟಾರೆ, 46,923 ಸೋಂಕಿತರಿದ್ದು, 12,189 ಮಂದಿ ಚೇತರಿಕೆ ಕಂಡಿದ್ದಾರೆ. ಕರ್ನಾಟಕದಲ್ಲಿ 1 ಲಕ್ಷಕ್ಕೂ ಅಧಿಕ ಸೋಂಕಿತರಿದ್ದು, 1953 ಮಂದಿ ಇಲ್ಲಿ ತನಕ ಮೃತರಾಗಿದ್ದಾರೆ. ಆದರೆ, ಒಂದೇ ದಿನ 1847 ಮಂದಿ ಚೇತರಿಕೆ ಕಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಬಿಬಿಎಂಪಿ ವಾರ್ ರೂಮ್ ವರದಿ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+