ಬೆಂಗಳೂರು ಪಿ.ಜಿಗಳಿಗೆ ದಿಢೀರ್ ಶಾಕ್ ನೀಡಿದ ಬಿಬಿಎಂಪಿ!
ಬೆಂಗಳೂರಿನಲ್ಲಿ ಪಿಜಿ (paying guest)ಗಳಿಗೆ ಬಿಬಿಎಂಪಿ ಬೀಗ ಜಡಿತಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಅಧಿಕಾರಿಗಳು ಗುರುವಾರ ಫೀಲ್ಡ್‌ಗೆ ಇಳಿದಿದ್ದಾರೆ. ಏಕಾಏಕಿ ಫಿಲ್ಡ್‌ಗೆ ಇಳಿದ ಬಿಬಿಎಂಪಿಯ ಅಧಿಕಾರಿಗಳು ಹಲವು ಪಿಜಿಗಳನ್ನು ಲಾಕ್ ಮಾಡಿ ಬಿಸಾಕಿದ್ದಾರೆ. ಬಿಬಿಎಂಪಿಯ ಅಧಿಕಾರಿಗಳು ಪಿಜಿ ಕ್ಲೋಸ್ ಮಾಡಿಸ್ತಿರೋದು ಯಾಕೆ ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಬೆಂಗಳೂರಿನಲ್ಲಿ ಪಿಜಿಗಳದ್ದೇ ಕಾರುಬಾರು. ಹೊರ ಊರುಗಳಿಂದ ಬೆಂಗಳೂರಿಗೆ ಬರುವವರು ಮೊದಲು ಹುಡುಕುವುದೇ ಬೆಂಗಳೂರಿನಲ್ಲಿ ಪಿಜಿಗಳನ್ನು. ಇದೀಗ ಬಿಬಿಎಂಪಿಯು ಹಲವು ಪಿಜಿಗಳನ್ನು ಬಂದ್ ಮಾಡಿದೆ. ಇದಕ್ಕೆ ಬಿಬಿಎಂಪಿ ನೀಡುರುವ ಕಾರಣ ಭಿನ್ನವಾಗಿದೆ. ಬೆಂಗಳೂರಿನಲ್ಲಿ ಸಾವಿರಾರು ಪಿಜಿಗಳಿವೆ. ಪಿಜಿಗಳಲ್ಲಿ ಸೌಕರ್ಯ ಸಿಗದೆ ಇರುವುದು ಹಾಗೂ ಊಟದ ವ್ಯವಸ್ಥೆ ಸರಿಯಾಗಿ ಇಲ್ಲದೆ ಇರುವ ಬಗ್ಗೆ ಹಲವು ದೂರುಗಳಿವೆ. ಇದೀಗ ಬೆಂಗಳೂರಿನ ಸಾಲು ಸಾಲು ಪಿಜಿಗಳಿಗೆ ಬಿಬಿಎಂಪಿ ಅಧಿಕಾರಿಗಳ ದಂಡು ಭೇಟಿ ನೀಡಿ ಬೀಗ ಜಡಿಯುತ್ತಿದೆ.

ಬೆಂಗಳೂರಿನಲ್ಲಿ ಒಟ್ಟು ಎಂಟು ವಲಯಗಳಿವೆ. ಪಾಲಿಕೆ ವ್ಯಾಪ್ತಿಯಲ್ಲಿ ಎಂಟು ವಲಯಗಳನ್ನು ವಿಂಗಡಿಸಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದೀಗ ಗುರುವಾರ ಫೀಲ್ಡ್‌ಗೆ ಇಳಿದಿರುವ ಬಿಬಿಎಂಪಿಯ ಅಧಿಕಾರಿಗಳು ಪಾಲಿಕೆ ವ್ಯಾಪ್ತಿಯ ಎಲ್ಲಾ 8 ವಲಯಗಳಲ್ಲಿ ದಿಢೀರ್ ಕಾರ್ಯಾಚರಣೆಗೆ ಇಳಿದಿದ್ದಾರೆ. ಪಾಲಿಕೆಯ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಅಧಿಕೃತ ಹಾಗೂ ಅನಧಿಕೃತ ಪಿ.ಜಿಗಳಿಗೆ ಭೇಟಿ ನೀಡಿ ಪಾಲಿಕೆ ನೀಡುವ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆಯೇ ಇಲ್ಲವೇ ಎನ್ನುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರಲ್ಲಿ ಅಧಿಕೃತ ಪಿಜಿಗಳ ಸಂಖ್ಯೆ ಎಷ್ಟು: ಬೆಂಗಳೂರಿನಲ್ಲಿ ಸಾವಿರಾರು ಪಿ.ಜಿಗಳು ಇವೆ. ಆದರೆ, ಬಿಬಿಎಂಪಿ ಗುರುತಿಸಿರುವ ಅಧಿಕೃತ ಪಿ.ಜಿಗಳ ಸಂಖ್ಯೆ 2193 ಅಧಿಕೃತ ಪಿ.ಜಿ.ಗಳು. ಇವುಗಳಲ್ಲಿ 1578 ಪಿ.ಜಿ.ಗಳು ಪಾಲಿಕೆ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸುತ್ತಿವೆ ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ. ಇನ್ನುಳಿದ 615 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿರುವುದಿಲ್ಲ. ಮಾರ್ಗಸೂಚಿ ಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿ ಇಲ್ಲಿಯವರೆಗೆ ಬರೋಬ್ಬರಿ 1011 ಅಧಿಕೃತ ಪಿ.ಜಿ. ಗಳಿಗೆ ಪಾಲಿಕೆಯಿಂದ ನೋಟಿಸ್ ಜಾರಿ ಮಾಡಲಾಗಿದೆಯಂತೆ.
ಬೆಂಗಳೂರಿನಲ್ಲಿವೆ 2320 ಅನಧಿಕೃತ ಪಿಜಿಗಳು: ಇನ್ನು ಬೆಂಗಳೂರಿನಲ್ಲಿ ಅಧಿಕೃತ ಪಿ.ಜಿಗಳಿಗಿಂತ ಅನಧಿಕೃತ ಪಿ.ಜಿಗಳ ಸಂಖ್ಯೆಯೇ ಹೆಚ್ಚಾಗಿದೆ ಎನ್ನುವ ಅಂಶವನ್ನು ಬಿಬಿಎಂಪಿಯ ಅಧಿಕಾರಿಗಳೇ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 2320 ಅನಧಿಕೃತ ಪಿ.ಜಿ.ಗಳಿವೆ. ಇವುಗಳಲ್ಲಿ 1674 ಪಿ.ಜಿ.ಗಳು ಮಾರ್ಗಸೂಚಿಗಳಲ್ಲಿ ಸೂಚಿಸಿರುವ ಅಂಶಗಳನ್ನು ಪಾಲಿಸುತ್ತಿವೆ. ಆದರೆ, 646 ಪಿ.ಜಿ.ಗಳು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ. ಮಾರ್ಗಸೂಚಿಗಳನ್ನು ಅನುಸರಿಸದ ಪಿ.ಜಿ.ಗಳನ್ನು ಸೇರಿಸಿದಂತೆ ಇಲ್ಲಿಯವರೆಗೆ 2320 ಅಧಿಕೃತ ಪಿ.ಜಿಗಳಿಗೆ ನೋಟೀಸ್ ಬಿಸಿ ಮುಟ್ಟಿಸಲಾಗಿದೆ.
ಈ ಕಾರಣಕ್ಕೆ ಬಿತ್ತು 21 ಪಿ.ಜಿಗಳಿಗೆ ಬೀಗ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಉದ್ದಿಮೆ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಪಿಜಿಗಳಿಗೆ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಅಲ್ಲದೇ ಮಾರ್ಗಸೂಚಿಗಳನ್ನು ಪಾಲಿಸದ ಪಿ.ಜಿ ಉದ್ದಿಮೆಗಳಿಗೆ ಹಾಗೂ ವಾರ್ನಿಂಗ್ ನೀಡಿದ್ದರೂ ಪಾಲಿಸದ ಬಗ್ಗೆ ಪಾಲಿಕೆ ಗರಂ ಆಗಿದೆ. ಮೂರು ಬಾರಿ ನೋಟಿಸ್‌ನೀಡಿದ ಮೇಲೂ ಆ ಮಾರ್ಗಸೂಚಿಗಳನ್ನು ಪಾಲಿಸದ ಪಿಜಿಗಳಿಗೆ ಶಾಕ್ ನೀಡಲಾಗಿದೆ. ಹೀಗಾಗಿ, ಈ ಪಿಜಿಗಳ ಮೇಲೆ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 305 ಮತ್ತು 308ರಡಿಯಲ್ಲಿ ತಕ್ಷಣದಿಂದ ಮುಚ್ಚಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಇಲ್ಲಿಯವರೆಗೆ ಬಿಬಿಎಂಪಿಯು 1 ಅಧಿಕೃತ ಪಿಜಿ ಹಾಗೂ 20 ಅನಧಿಕೃತ ಸೇರಿದಂತೆ ಒಟ್ಟು 21 ಪಿಜಿಗಳಿಗೆ ಬೀಗ ಹಾಕಲಾಗಿದೆ.
-
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ












Click it and Unblock the Notifications