ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಬಿಜೆಪಿ ವಿರುದ್ಧ ಎಎಪಿಯಿಂದ ದೂರು

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 18: ಬಿಬಿಎಂಪಿ ಚುನಾವಣೆಯಿಂದ ಹಿಂದೆ ಸರಿದಿರುವ ಆಮ್ ಆದ್ಮಿ ಪಾರ್ಟಿ ಹೆಸರನ್ನು ಬಳಸಿಕೊಂಡು ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಸುದ್ದಿ ಬಂದಿದೆ. ಚುನಾವಣಾ ಪ್ರಚಾರದ ವೇಳೆ ಎಎಪಿ ಹೆಸರು ದುರ್ಬಳಕೆ ಮಾಡಿರುವ ಬಿಜೆಪಿ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಚುನಾ ವಣಾ ಆಯೋಗಕ್ಕೆ ಎಎಪಿ ಕರ್ನಾಟಕ ದೂರು ನೀಡಿದೆ.

ರಾಜಾಜಿನಗರದ ಬಿಜೆಪಿ ಅಭ್ಯರ್ಥಿ ದೀಪಾ ನಾಗೇಶ್ ಹಾಗೂ ಅವರ ಪತಿ ನಾಗೇಶ್ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ.ಇದರ ಜೊತೆಗೆ ಬಿಜೆಪಿ ಕೇಂದ್ರ ಕಚೇರಿಗೂ ಪತ್ರದ ಮೂಲಕ ಎಚ್ಚರಿಕೆ ನೀಡಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕದ ಮುಖಂಡ ಸಿದ್ದಾರ್ಥ ಶರ್ಮ ಹೇಳಿದ್ದಾರೆ.

ರಾಜಾಜಿ ನಗರದ 108 ವಾರ್ಡ್‌ನ ಬಿಜೆಪಿ ಅಭ್ಯರ್ಥಿಯಾಗಿರುವ ದೀಪಾ ನಾಗೇಶ್ ಅವರು ಮನೆ ಮನೆ ಪ್ರಚಾರದ ವೇಳೆ ಆಪ್ ಇನ್ನಿಲ್ಲ, ಬಿಜೆಪಿಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಇದರ ಜೊತೆಗೆ ರಾಜಾಜಿನಗರ ವಾರ್ಡ್ ನ ಹಲವು ಪ್ರಮುಖ ಸ್ಥಳಗಳಲ್ಲಿ 'ಈ ಬಾರಿಯ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಮತದಾರರು ಬಿಜೆಪಿಗೆ ಮತ ಹಾಕಿ' ಎನ್ನುವ ಬ್ಯಾನರ್‌, ಬಂಟಿಂಗ್ಸ್, ಪಾಂಪ್ಲೇಟ್ ಗಳನ್ನು ಹಾಕಿ, ಹಂಚಿದ್ದಾರೆ.

AAP Karnataka complaint against BJP Poll code violation

ಬಿಬಿಎಂಪಿಯಲ್ಲಿ ಭ್ರಷ್ಟಾಚಾರ: ಐದು ವರ್ಷಗಳ ಕಾಲ ಬಿಬಿಎಂಪಿಯಲ್ಲಿ ಆಡಳಿತ ನಡೆಸಿದ ಬಿಜೆಪಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿತು. ಕಾಂಗ್ರೆಸ್ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಂಡಿತು. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಎರಡು ಪಕ್ಷಗಳು ಏನೂ ಮಾಡಿಲ್ಲ ಎಂದು ಸಿದ್ದಾರ್ಥ್ ಕಿಡಿಕಾರಿದರು.

ಮತದಾರರಿಗೆ ಸೀರೆ: ಮತದಾರರಿಗೆ ಸೀರೆಗಳನ್ನು ಹಂಚುತ್ತಿದ್ದ ಬಿಜೆಪಿ ಕಾರ್ಯಕರ್ತನನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ.

ಬಿಜೆಪಿ ಕಾರ್ಯಕರ್ತ ಪಾಪಣ್ಣ ಎಂಬ ವ್ಯಕ್ತಿ ರಾಶಿಗಟ್ಟಲೆ ಸೀರೆಗಳನ್ನು ಮಡಿವಾಳ ವಾರ್ಡ್ ನ ಜಾಗವೊಂದರಲ್ಲಿ ಹಂಚಲು ಮುಂದಾದಾಗ, ದಾಳಿ ನಡೆಸಿದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. [ನಾರಿಯರ ಸೀರೆಗೆ ಕೈಹಾಕಿ ತಗ್ಲಾಕೊಂಡಿದ್ದು ಮರೆತ್ರಾ ಸಿ ಎಂ ಇಬ್ರಾಹಿಂ?]

ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತ ಪಾಪಣ್ಣ ಸೀರೆಗಳನ್ನು ಹಂಚುತ್ತಿರುವ ಮಾಹಿತಿಯನ್ನು ನೀಡಿದ್ದರು ಎನ್ನಲಾಗಿದೆ. ನಾನು ಸ್ವಂತ ಖರ್ಚಿನಿಂದ ಈ ಕೆಲಸ ಮಾಡುತ್ತಿದ್ದೇನೆ. ವಾರ್ಡ್ ಗೆ ಒಳ್ಳೆಯದಾಗಲಿ ಎಂಬುದು ನನ್ನ ಉದ್ದೇಶ ಎಂದು ಪಾಪಣ್ಣ ಹೇಳಿದ್ದಾರೆ.

English summary
AAP Karnataka has lodged a complaint with State Election Commission (SEC) against BJP Karnataka alleging violation of code of conduct and misusing AAP name and fame during campaign. AAP leader Siddharth Sharma has demanded action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X