ಬೆಂಗಳೂರಿಗೆ ಮತ್ತೆರಡು ಫ್ಲೈಓವರ್, ಅಂಡರ್ ಪಾಸ್
Recommended Video

ಬೆಂಗಳೂರು, ಸೆಪ್ಟೆಂಬರ್ 20: ಬೆಂಗಳೂರು ಮಹಾನಗರದಲ್ಲಿ ದಿನೇ ದಿನೇ ಸಂಚಾರ ದಟ್ಟಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ನಗರದ ನಾಲ್ಕು ಕಡೆ ಗ್ರೇಡ್ ಸೆಪರೇಟರ್ ಗಳನ್ನು ನಿರ್ಮಿಸಲು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ. ಇವುಗಳಲ್ಲಿ ಎರಡು ಫ್ಲೈ ಓವರ್ ಹಾಗೂ ಎರಡು ಅಂಡರ್ ಪಾಸ್ ಸೇರಿವೆ.
ಜೇಡಿಮರ ಜಂಕ್ಷನ್ ನಲ್ಲಿ ಹಾಗೂ ಅರಕೆರೆ ರಸ್ತೆ ಜಂಕ್ಷನ್ ನಲ್ಲಿ ಅಂಡರ್ ಪಾಸ್ ನಿರ್ಮಿಸಲು ಹಾಗೂ ಬಿಳೇಕನಹಳ್ಳಿ ಜಂಕ್ಷನ್ ನಲ್ಲಿ ಹಾಗೂ ಹುಳಿಮಾವು ಜಂಕ್ಷನ್ ನಿಂದ ಹುಳಿಮಾವು ಗೇಟ್ ಜಂಕ್ಷನ್ ವರೆಗೆ ಫ್ಲೈ ಓವರ್ ಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.

ಜೇಡಿಮರ ಜಂಕ್ಷನ್ ನಿಂದ ಕೋಳಿ ಫಾರ್ಮ್ ಜಂಕ್ಷನ್ ವರೆಗಿನ ರಸ್ತೆಯಲ್ಲಿ ಅಂಡರ್ ಪಾಸ್ ನಿರ್ಮಿಸುವ ಯೋಜನೆಗೆ ಈಗಾಗಲೇ ಭೂ ಸ್ವಾಧೀನ ಪ್ರಕ್ರಿಯೆ ಶುರುವಾಗಿದ್ದು, ಮೊದಲಿಗೆ ರಸ್ತೆ ಅಗಲೀಕರಣ ಮಾಡಿ ಆನಂತರ ಅಂಡರ್ ಪಾಸ್ ನಿರ್ಮಿಸಲಾಗುತ್ತದೆ.
ತಾನು ಕೈಗೊಂಡಿರುವ ಈ ಯೋಜನೆಯು ಮುಂದಿನ ದಿನಗಳಲ್ಲಿ ಮೆಟ್ರೋ ಯೋಜನೆಗೆ ತೊಂದರೆ ನೀಡಬಾರದೆಂಬ ಉದ್ದೇಶದಿಂದಾಗಿ ಬೆಂಗಳೂರು ಮೆಟ್ರೋ ಸಂಸ್ಥೆಯ ಅಧಿಕಾರಿಗಳ ಜತೆಗೆ ಬಿಬಿಎಂಪಿಯು ಶೀಘ್ರದಲ್ಲೇ ಮಾತುಕತೆ ನಡೆಸಲಿದೆ.











Click it and Unblock the Notifications