ಬಿಬಿಎಂಪಿ ಗುತ್ತಿಗೆದಾರರಿಗೆ ಇಡಿ ಛಡಿ: 5.2 ಕೊಟಿ ಅಕ್ರಮ ಆಸ್ತಿ ಪತ್ತೆ
ಬೆಂಗಳೂರು, ಜನವರಿ 29: ಬಿಬಿಎಂಪಿ ಗುತ್ತಿಗೆದಾರರು ಕೆಲವರಿಗೆ ಇಡಿ ಇಲಾಖೆಯು ಛಡಿ ಏಟು ನೀಡಿದೆ. 5.2 ಕೋಟಿ ಅಕ್ರಮ ಸಂಪತ್ತನ್ನು ಇಡಿ (ಜಾರಿ ನಿರ್ದೇಶನಾಲಯ) ಪತ್ತೆ ಮಾಡಿದೆ.
ಬಿಬಿಎಂಪಿ ಸಿವಿಲ್ ಗುತ್ತಿಗೆದಾರರಾದ ನಾಗರಾಜು, ಶಶಿಕುಮಾರ್, ಜಿ.ಕುಮಾರಸ್ವಾಮಿ, ನಾಗೇಶ್, ಸುಬ್ರಹ್ಮಣಿ, ಶಿವಸ್ವಾಮಿ, ಅನಿಲ್, ಬಾಬು ರಾವ್, ಭರತ್ ಎಂಬುವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ.
ಬಿಬಿಎಂಪಿಯ ಗುತ್ತಿಗೆದಾರರಿಗೆ ಸೇರಿದ ಬೆಂಗಳೂರು ಮತ್ತು ಮೈಸೂರಿನಲ್ಲಿನ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ. 3.36 ಕೋಟಿ ಮೌಲ್ಯದ ಆಸ್ತಿಯ ಜೊತೆಗೆ 1.83 ಕೋಟಿ ಹಣವನ್ನು ಇಡಿ ವಶಪಡಿಸಿಕೊಂಡಿದೆ.

ಬೆಂಗಳೂರು ಸಿಐಡಿಯು ಈ ಸಿವಿಲ್ ಗುತ್ತಿಗೆದಾರರ ಮೇಲೆ ಎಫ್‌ಐಆರ್ ದಾಖಲಿಸಿದೆ. ಅಕ್ರಮ ಚಟುವಟಿಕೆಗಳ ಮೂಲಕ ಬಿಬಿಎಂಪಿಗೆ ನಷ್ಟ ಮಾಡಿದ್ದಾರೆಂದು ಪ್ರಕರಣ ದಾಖಲಿಸಲಾಗಿದೆ. ಮಲ್ಲೇಶ್ವರ, ರಾಜರಾಜೇಶ್ವರಿ ನಗರ, ಗಾಂಧಿ ನಗರಗಳಲ್ಲಿ ಕಳಪೆ ಕಾಮಗಾರಿ ಮಾಡಿದ ಆರೋಪವನ್ನೂ ಇದರಲ್ಲಿ ಸೇರಿಸಲಾಗಿದೆ.












Click it and Unblock the Notifications