• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಟ್ವಿಟ್ಟರ್ ಖಾತೆ ಹ್ಯಾಕ್

|
Google Oneindia Kannada News

ಬೆಂಗಳೂರು, ಜೂನ್ 04: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಗೌರವ್ ಗುಪ್ತ ಅವರ ಟ್ವಿಟ್ಟರ್ ಖಾತೆಯ ಡಿಸ್‌ಪ್ಲೇಯನ್ನು Tesla(ಟೆಸ್ಲಾ) ಎಂದು ಬದಲಾಯಿಸಲಾಗಿತ್ತು. ಬಳಿಕ ಅದನ್ನು ಮತ್ತೆ ಬದಲಾಯಿಸಲಾಗಿತ್ತು, ಇದೀಗ ದೊರೆತಿರುವ ಮಾಹಿತಿ ಪ್ರಕಾರ ಗೌರವ್ ಗುಪ್ತ ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ.

ಆದರೆ ಇದಕ್ಕೆ ಯಾರು ಕಾರಣ ಎಂಬುದು ತಿಳಿದುಬಂದಿಲ್ಲ. ಹ್ಯಾಕರ್ ಈ ಟ್ವಿಟ್ಟರ್ ಬಳಸಿ ಮಾಡಿದ ಟ್ವೀಟ್ ಒಂದರಲ್ಲಿ ವಿಶ್ವದ ಕಠಿಣ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮಾನವೀಯತೆಯ ಹಾದಿಯಲ್ಲಿ ನಡೆಯುವುದು ನಮ್ಮ ಗುರಿ, ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ 5 ಸಾವಿರ ಬಿಟಿಸಿ ವಿತರಿಸಲಾಗುವುದು ಎಂದು ಬರೆದು ಬಳಿಕ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಆದರೆ ಆಯುಕ್ತರಿಂದ ಯಾವುದೇ ಹೇಳಿಕೆಗಳು ಬಂದಿಲ್ಲ. ಕಳೆದ ತಿಂಗಳು ಬಿಬಿಎಂಪಿ ಕೋವಿಡ್ 19 ರೋಗಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಿ ಬಳಿಕ ತೆಗೆದುಹಾಕಲಾಗಿತ್ತು.
ಕೋವಿಡ್ 19 ರೋಗಿಗಳ ಹೆಸರುಗಳು, ಸಿನಾಂಕ, ವಯಸ್ಸು ಅವರ ಐಸಿಎಂಆರ್ ಪರೀಕ್ಷಾ ಫಲಿತಾಂಶ ಇತ್ಯಾದಿಗಳನ್ನು ಒಳಗೊಂಡಿದೆ.

ಕರ್ನಾಟಕದಲ್ಲಿ 24 ಗಂಟೆಯಲ್ಲಿ 18,324 ಹೊಸ ಪ್ರಕರಣ ದಾಖಲಾಗಿದೆ. ಜೂನ್ 7ರ ತನಕ ರಾಜ್ಯದಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ ಅನ್ನು ಜೂನ್ 14ರ ತನಕ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ 24 ಗಂಟೆಯಲ್ಲಿ 514 ಜನರು ರಾಜ್ಯದಲ್ಲಿ ಮೃತಪಟ್ಟಿದ್ದಾರೆ. 24,036 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಒಟ್ಟು ಪ್ರಕರಣಗಳು 2653446. ಸಕ್ರಿಯ ಪ್ರಕರಣ 2,86,798.

Recommended Video

   Ishant Sharma ಹಿಂದಿಕ್ಕಿ ಅವಕಾಶ ಪಡೆದುಕೊಳ್ಳಲಿದ್ದಾರೆ Siraj | Oneindia Kannada

   39567 ಆಂಟಿಜೆನ್, 110601 ಆರ್‌ಟಿಪಿಸಿಆರ್ ಸೇರಿದಂತೆ ಒಟ್ಟು 150168 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಇದುವರೆಗೂ 30149275 ಮಾದರಿಗಳ ಪರೀಕ್ಷೆಗಳನ್ನು ಮಾಡಲಾಗಿದೆ.

   English summary
   The official Twitter account of the Commissioner of Bruhat Bengaluru Mahanagara Palike was hacked for a few hours on June 4, Friday, and some tweets on cryptocurrency were posted.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X