BBMP Budget 2023: ಈ ವರ್ಷ 4 ಹೊಸ ಬ್ರಿಡ್ಜ್, ಜನದಟ್ಟಣೆ ಕಡಿಮೆ ಹಲವು ಫ್ಲೈಓವರ್ ಘೋಷಣೆ

ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ, ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸುಧಾರಿಸುವುದು ಮತ್ತು ಸಿಗ್ನಲ್ ಮುಕ್ತ ಟ್ರಾಫಿಕ್ ಕಾರಿಡಾರ್‌ಗಳನ್ನು ರಚಿಸುವುದು ಅಗತ್ಯವಾಗಿದೆ.

ಬೆಂಗಳೂರು, ಮಾರ್ಚ್ 02: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡಲು ನಗರದಲ್ಲಿ ಹಲವಾರು ಮೂಲಸೌಕರ್ಯಗಳನ್ನು ನವೀಕರಿಸಲು ಯೋಜಿಸುತ್ತಿದೆ. ಈ ಹಿನ್ನೆಲೆ ಗುರುವಾರ ಮಂಡಿಸಿದ ತನ್ನ ಬಜೆಟ್‌ನಲ್ಲಿ ಕೆಲವು ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳ ಕೆಲಸವನ್ನು ಈ ಆರ್ಥಿಕ ವರ್ಷದಲ್ಲಿ ಪ್ರಾರಂಭಿಸಲಾಗುವುದು ಎಂದು ಘೋಷಿಸಿದೆ.

"ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ, ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸುಧಾರಿಸುವುದು ಮತ್ತು ಸಿಗ್ನಲ್ ಮುಕ್ತ ಟ್ರಾಫಿಕ್ ಕಾರಿಡಾರ್‌ಗಳನ್ನು ರಚಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ, ಈ ಕೆಳಗಿನ ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು 2023-24 ರ ಅವಧಿಯಲ್ಲಿಯೇ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ" ಎಂದು ಬಿಬಿಎಂಪಿಯ ಬಜೆಟ್ ದಾಖಲೆಯಲ್ಲಿ ತಿಳಿಸಲಾಗಿದೆ.

BBMP Budget 2023: Signal-free Bengaluru, Multiple flyovers, Important Announcements

*ಗೋಕುಲ*: ಮತ್ತಿಕೆರೆ ತಿರುವು ಬಳಿಯ ಗೋಕುಲ ರಸ್ತೆಯಲ್ಲಿ ಐಐಎಸ್‌ಸಿಯಿಂದ 40 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯನ್ನು ಈ ವರ್ಷ ಕೈಗೊಳ್ಳಲಾಗುವುದು.

*ಜಾಲಹಳ್ಳಿ*: ಜಾಲಹಳ್ಳಿಯ ಒಆರ್‌ಆರ್‌-ಪೈಪ್‌ಲೈನ್‌ ಜಂಕ್ಷನ್‌ನಲ್ಲಿ 40 ಕೋಟಿ ರೂ.ಗಳಲ್ಲಿ ಮೇಲ್ಸೇತುವೆ ನಿರ್ಮಾಣ.

*ಮೇಖ್ರಿ ಸರ್ಕಲ್*: ಜಯಮಹಲ್ ರಸ್ತೆಯಲ್ಲಿ 65 ಕೋಟಿ ವೆಚ್ಚದಲ್ಲಿ ಮೇಖ್ರಿ ವೃತ್ತದ ಕೆಳಸೇತುವೆ ಮೇಲೆ ಫ್ಲೈಓವರ್ ನಿರ್ಮಾಣ.

*ಸದಾಶಿವನಗರ*: ಸದಾಶಿವನಗರ ಪೊಲೀಸ್ ಠಾಣೆ ವೃತ್ತದಲ್ಲಿ 40 ಕೋಟಿ ರೂ.ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ.

*ಯಲಹಂಕ*: ಯಲಹಂಕ ರೈತ ಸಂತೆ ರಸ್ತೆಯಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ವೆಂಟ್‌ಗಳ ನಿರ್ಮಾಣ

BBMP Budget 2023: Signal-free Bengaluru, Multiple flyovers, Important Announcements

*ಬೈಯಪ್ಪನಹಳ್ಳಿ*: ಬೈಯಪ್ಪನಹಳ್ಳಿಯ ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣಕ್ಕೆ ಉತ್ತಮ ಸಂಪರ್ಕ ಕಲ್ಪಿಸಲು ರೂ.345 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ಮತ್ತು ತಡೆರಹಿತ ಸಂಪರ್ಕ ಮೇಲ್ಸೇತುವೆ ನಿರ್ಮಿಸಲಾಗುವುದು.

*ಸುರಂಜನ್ ದಾಸ್ ಜಂಕ್ಷನ್* : ಹಳೆ-ಮದ್ರಾಸ್ ರಸ್ತೆಯ ಸುರಂಜನ್ ದಾಸ್ ಜಂಕ್ಷನ್‌ನಲ್ಲಿ ಮೇಲ್ಸೇತುವೆಗೆ 104 ಕೋಟಿ ರೂ. ಅನುದಾನ.

ಬೆಂಗಳೂರು ನಗರದಲ್ಲಿ 42 ಮೇಲ್ಸೇತುವೆಗಳು ಮತ್ತು 28 ಕೆಳ ಸೇತುವೆಗಳಿವೆ. ಈ ವರ್ಷ ಇನ್ನೂ 4 ಮೇಲ್ಸೇತುವೆಗಳು ಮತ್ತು 4 ಕೆಳ ಸೇತುವೆಗಳು ಸೇರ್ಪಡೆಯಾಗಲಿವೆ.

2023-24ರಲ್ಲಿ 1,410 ಕೋಟಿ ರೂಪಾಯಿ ವೆಚ್ಚದಲ್ಲಿ 150 ಕಿಮೀ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಅದೇ ರೀತಿ 350 ಕಿ.ಮೀ ಉದ್ದದ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಲೈಟ್ ಟೆಂಡರ್ ಶ್ಯೂರ್ ಮಾದರಿಯಲ್ಲಿ 450 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಬಿಬಿಎಂಪಿ ಪ್ರಕಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+