2014-15ರ ಬಿಬಿಎಂಪಿ ಬಜೆಟ್ ನಲ್ಲೇನಿದೆ?

ಬೆಂಗಳೂರು, ಫೆ.17 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೋಮವಾರ 2014-2015ನೇ ಸಾಲಿನ ಬಜೆಟ್‌ ಅನ್ನು ಮಂಡಿಸಿದೆ. ತೆರಿಗೆ ಸಂಗ್ರಹ ಗುರಿ, ಬೆಂಗಳೂರಿನ ಸಂಚಾರ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಿರುವ ಬಜೆಟ್ ನಲ್ಲಿ ಪಾಲಿಕೆಯನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ಅಗತ್ಯ ಆದಾಯವನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ.

ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಎಂ.ಎಸ್.ಶಿವಪ್ರಸಾದ್, ಸೋಮವಾರ ಮಧ್ಯಾಹ್ನ ನಡೆದ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ 2014-15ನೇ ಸಾಲಿನ ಬಜೆಟ್ ಅನ್ನು ಮಂಡಿಸಿದರು. ಪ್ರತಿ ವರ್ಷದ 10 ಸಾವಿರ ಕೋಟಿ ಮೌಲ್ಯದ ಬಜೆಟ್ ಮಂಡಿಸುತ್ತಿದ್ದ ಪಾಲಿಕೆ ಈ ಬಾರಿ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತು, 7779.51 ಕೋಟಿ ರೂ. ಬಜೆಟ್ ಮಂಡಿಸಿದೆ.[ಡಾ.ಶಿವಪ್ರಸಾದ್ ರಿಂದ ಬಿಬಿಎಂಪಿ ಬಜೆಟ್ ಮಂಡನೆ]

bbmp

ಬೆಂಗಳೂರು ನಗರದ 8 ದಿಕ್ಕುಗಳಲ್ಲಿ ಕೆಂಪೇಗೌಡ ಸ್ವಾಗತ ಗೋಪುರ ನಿರ್ಮಾಣ, ಬೆಂಗಳೂರು ಸಂಸ್ಕೃತಿ ಪ್ರಚಾರಕ್ಕೆ ಬೆಂಗಳೂರು ಸಂತೆ ಆಯೋಜನೆ, ಬೆಂಗಳೂರು ಇತಿಹಾಸ ಬಿಂಬಿಸುವ ಮ್ಯೂಸಿಯಂ ನಿರ್ಮಾಣ ಮಾಡುವುದು ಸೇರಿದಂತೆ ಬಜೆಟ್ ನಲ್ಲಿ ಹಲವಾರು ಯೋಜನೆಗಳನ್ನು ಘೋಷಿಸಲಾಗಿದೆ.

ಬಿಬಿಎಂಪಿ ಬಜೆಟ್ ಪ್ರಮುಖ ಅಂಶಗಳು
* ಬೆಂಗಳೂರು ನಗರದ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು 21600 ಕೋಟಿ
* ನಗರದಲ್ಲಿ ಸ್ವಚ್ಛತೆ ಕಾಪಾಡಲು ಹಸಿರು ಪೊಲೀಸ್ ತಂಡವನ್ನು ರಚನೆ
* ನಗರದಲ್ಲಿ ಹೊಸ ಕೆರೆಗಳನ್ನು ಅಭಿವೃದ್ಧಿ ಪಡಿಸಲು 48 ಕೋಟಿ ಅನುದಾನ [2013-14ರ ಬಜೆಟ್ ಮುಖ್ಯಾಂಶ]
* ಕೌಶಲ್ಯ ಅಭಿವೃದ್ಧಿ ಕೇಂದ್ರ ನಿರ್ಮಾಣ ಮಾಡಲು 5 ಕೋಟಿ ಅನುದಾನ
* ನಗರದ ಸಂಸ್ಕೃತಿಯನ್ನು ಪ್ರಚಾರ ಪಡಿಸಲು ಬೆಂಗಳೂರು ಸಂತೆ ಆಯೋಜಿಸುವುದು
* ಬೆಂಗಳೂರು ಇತಿಹಾಸ ಬಿಂಬಿಸುವ ಮ್ಯೂಸಿಯಂ ಅನ್ನು 3 ಕೋಟಿ ವೆಚ್ಚದಲ್ಲಿ ಫ್ರೀಡಂಪಾರ್ಕ್ಸ್ ನಲ್ಲಿ ನಿರ್ಮಿಸುವುದು
* ನಗರದ 8 ದಿಕ್ಕುಗಳಲ್ಲಿ ಕೆಂಪೇಗೌಡ ಸ್ವಾಗತ ಗೋಪುರ ನಿರ್ಮಾಣ ಮಾಡುವುದು
* ಜಾಹೀರಾತುಗಳ ಮೂಲಕ ಸುಮಾರ 6 ಕೋಟಿ ರೂ. ಸಂಗ್ರಹ ಮಾಡುವ ಗುರಿ [ಬಿಬಿಎಂಪಿ ವೆಬ್ ಸೈಟ್]
* ಆಪ್ಟಿಕಲ್ ಫೈಬರ್ ಕೇಬಲ್ ನೀತಿ ಜಾರಿಗೊಳಿಸುವ ಮೂಲಕ 750 ಕೋಟಿ ಸಂಗ್ರಹ ಮಾಡುವ ಗುರಿ
* ಪಾಲಿಕೆಯ 2 ಪ್ರತಿಷ್ಠಿತ ಆಸ್ಪತ್ರೆಗಳನ್ನು ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಉನ್ನತೀಕರಣ ಮಾಡಲು 10 ಕೋಟಿ
* 6 ರೆಫರಲ್ ಆಸ್ಪತ್ರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸುವುದು
* ಅಂಗವಿಕರಲ ಕಲ್ಯಾಣಕ್ಕೆ 1.74 ಕೋಟಿ ರೂ. ಅನುದಾನ
* ಪಾಲಿಕೆ ವ್ಯಾಪ್ತಿಯಲ್ಲಿ ಹೊಸ ವ್ಯಾಪಾರಿಗಳಿಗೆ ಅನುಮತಿ ನೀಡುವುದು
* ಆನ್ ಲೈನ್ ಮೂಲಕ ನೋಂದಣಿ ಪರವಾನಿಗೆ ವಿತರಣೆ ಮಾಡುವುದು
* ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಪಡಿಸಲು ಆದ್ಯತೆ ನೀಡುವುದು
* ರಸ್ತೆ ಅಗಲೀಕರಣ ಮತ್ತು ಪ್ರಮುಖ ಜಂಕ್ಷನ್ ಗಳ ಅಭಿವೃದ್ಧಿ ಪಡಿಸುವುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+