ಕೊರೊನಾ ಪೀಕಲಾಟ: ಮದುವೆ, ಸಭೆ-ಸಮಾರಂಭ ಓಕೆ, 100 ಮಂದಿ ಸೇರುವ ಹಾಗಿಲ್ಲ!

ಬೆಂಗಳೂರು,

ಮಾರ್ಚ್.15:
ದೇಶದಲ್ಲಿ
ಕೊರೊನಾ
ವೈರಸ್
ಭಯದಿಂದ
ಯಾವುದೇ
ಸಭೆ,
ಸಮಾರಂಭಗಳು
ನಡೆಯುತ್ತಿಲ್ಲ.
ಮದುವೆ
ಕಾರ್ಯಗಳಿಗೂ
ಅವಕಾಶವಿಲ್ಲ.
ಕಠಿಣ
ನಿಯಮವನ್ನು
ಬೆಂಗಳೂರು
ಮಹಾನಗರ
ಪಾಲಿಕೆ
ಕೊಂಚ
ಸಡಿಸಗೊಳಿಸಿದೆ.

ಮಾರ್ಚ್.13ರೊಳಗೆ
ನಿಶ್ಚಯಿಸಲ್ಪಟ್ಟಿದ್ದ
ಮದುವೆ,
ಸಭೆ
ಮತ್ತು
ಸಮಾರಂಭಗಳಿಗೆ
ಕಟ್ಟುನಿಟ್ಟಿನ
ಷರತ್ತುಗಳೊಂದಿಗೆ
ಅವಕಾಶವನ್ನು
ನೀಡಲಾಗಿದೆ.
ಇದಕ್ಕೆ
ಸಂಬಂಧಿಸಿದಂತೆ
ಬಿಬಿಎಂಪಿ
ಆಯುಕ್ತರು
ಅಧಿಸೂಚನೆಯನ್ನು
ಹೊರಡಿಸಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

class="exclude"

href="https://kannada.oneindia.com/features/coronavirus-india-how-fight-against-1918th-bombay-flu-also-matter-why-187309.html"
target="_blank">ಕೊರೊನಾ
ವಿರುದ್ಧ
ಯುದ್ಧ;
ಭಾರತಕ್ಕೆ
ವರವಾಗುತ್ತಾ
102
ವರ್ಷಗಳ
ಅನುಭವ?

ಬೆಂಗಳೂರಿನಲ್ಲಿ

ಬಿಬಿಎಂಪಿ
ಮಾರ್ಚ್.13ಕ್ಕೆ
ಅಧಿಸೂಚನೆ
ಹೊರಡಿಸುವುದಕ್ಕಿಂತಲೂ
ಮೊದಲೇ
ಬುಕ್
ಆಗಿದ್ದ
ಸಭೆ-ಸಮಾರಂಕ್ಷಭ
ಮತ್ತು
ಮದುವೆಯನ್ನು
ನಡೆಸಲು
ಅನುಮತಿ
ನೀಡಲಾಗುತ್ತದೆ.
ಆದರೆ,
ಸಮಾರಂಭಗಳಲ್ಲಿ
100ಕ್ಕಿಂತಲೂ
ಅಧಿಕ
ಜನರು
ಸೇರುವಂತಿಲ್ಲ
ಎಂದು
ಷರತ್ತು
ವಿಧಿಸಲಾಗಿದೆ.

id='are-slot-2'
class='oiad
oi-axt
oiadv'>

ಕಾರ್ಯಕ್ರಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಮೊದಲ ಆದ್ಯತೆ

ಕಾರ್ಯಕ್ರಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಮೊದಲ ಆದ್ಯತೆ

ಬೆಂಗಳೂರಿನ ಮ್ಯಾರೇಜ್ ಹಾಲ್, ಹೋಟೆಲ್, ಪಾರ್ಟಿ ಪ್ಯಾಲೇಸ್ ಗಳಲ್ಲಿ ಪೂರ್ವ ನಿಗದಿಯಂತೆ ಮದುವೆ ಮತ್ತು ಸಭೆ ಸಮಾರಂಭಗಳನ್ನು ನಡೆಸುವ ಮುನ್ನ ಶುದ್ಧ ಮತ್ತು ಸ್ವಚ್ಛವಾದ ವಾತಾವರಣವನ್ನು ಅಲ್ಲಿ ಸೃಷ್ಟಿಸಬೇಕು. ಸ್ವಚ್ಛತೆಯನ್ನನು ಕಾಯ್ದುಕೊಳ್ಳುವತ್ತ ಹೆಚ್ಚಿನ ನಿಗಾ ವಹಿಸಬೇಕು.

ಶಂಕಿತ ಸೋಂಕಿತರು ಕಂಡು ಬಂದಲ್ಲಿ ಕ್ರಮಕ್ಕೆ ಸೂಚನೆ

ಶಂಕಿತ ಸೋಂಕಿತರು ಕಂಡು ಬಂದಲ್ಲಿ ಕ್ರಮಕ್ಕೆ ಸೂಚನೆ

ಸಾರ್ವಜನಿಕ ಕಾರ್ಯಕ್ರಮ ಮದುವೆ ಸಮಾರಂಭಗಳಲ್ಲಿ ಕೊರೊನಾ ವೈರಸ್ ಸೋಂಕು ತಗಲಿರುವ ಶಂಕಿತರು ಆಗಮಿಸುವ ಸಾಧ್ಯತೆಗಳು ಇರುತ್ತವೆ. ಒಂದು ವೇಳೆ ಕಾರ್ಯಕ್ರಮಗಳಲ್ಲಿ ಕೆಮ್ಮು, ಜ್ವರ, ಶೀತದಂತಾ ಲಕ್ಷಣಗಳಿರುವ ಜನರು ಕಂಡು ಬಂದಲ್ಲಿ ತಕ್ಷಣ ಅಂಥವರನ್ನು ಅಲ್ಲಿಂದ ಆಸ್ಪತ್ರೆಗೆ ಕಳುಹಿಸುವ ಕ್ರಮವನ್ನು ತೆಗೆದುಕೊಳ್ಳಬೇಕು.

ಬಿಬಿಎಂಪಿ ಸೂಚಿಸುವವರೆಗೂ ಬುಕ್ಕಿಂಗ್ ಮಾಡುವಂತಿಲ್ಲ

ಬಿಬಿಎಂಪಿ ಸೂಚಿಸುವವರೆಗೂ ಬುಕ್ಕಿಂಗ್ ಮಾಡುವಂತಿಲ್ಲ

ಇನ್ನು, ಮುಂದಿನ ಆದೇಶ ಹೊರಬೀಳುವವರೆಗೂ ಯಾವುದೇ ರೀತಿಯ ಹೊಸ ಬುಕ್ಕಿಂಗ್ ಗಳನ್ನು ಮಾಡಿಕೊಳ್ಳುವುದಕ್ಕೆ ಅವಕಾಶವಿಲ್ಲ. ಒಂದು ವೇಳೆ ಮುಂಬರುವ ದಿನಾಂಕಗಳಿಗೆ ಈಗಲೇ ಬುಕ್ಕಿಂಗ್ ಮಾಡಿಕೊಂಡಿದ್ದಾದಲ್ಲಿ ಅಂತ ಹೋಟೆಲ್, ಪಾರ್ಟಿ ಪ್ಯಾಲೇಸ್ ಮಾಲೀಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಕ್ರಮ

ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಕ್ರಮ

ಈ ರೀತಿಯ ಕ್ರಮಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಬಿಬಿಎಂಪಿಯ ಅರಿವಿಗೆ ಬಂದಿದೆ. ಆದರೆ, ಸಾರ್ವತ್ರಿಕ ಹಿತಾಸಕ್ತಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥ ಕಟ್ಟುನಿಟ್ಟಿನ ಷರತ್ತುಗಳನ್ನು ಜಾರಿಗೊಳಿಸಲಾಗಿದೆ ಎಂದು ಬಿಬಿಎಂಪಿ ಅಧಿಸೂಚನೆಯಲ್ಲಿ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+