ಬೆಂಗಳೂರು : ತೆಲಗು ನಟಿ ಸಹೋದರ ಆತ್ಮಹತ್ಯೆ
ಬೆಂಗಳೂರು, ಡಿ.12 : ಬಿಬಿಎಂ ವಿದ್ಯಾರ್ಥಿಯೊಬ್ಬ ಸೆಮಿನರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವಕ ತೆಲಗು ನಟಿ ಕ್ಯಾಥರಿನ್ ತೇಸ್ರಾ ಅವರ ಸಹೋದರ ಎಂದು ಪೊಲೀಸರು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಕೇರಳ ಮೂಲದ ಕ್ರಿಸ್ಟೋಫರ್ ಅಲೆಕ್ಸಾಂಡರ್ (19) ಎಂದು ಗುರುತಿಸಲಾಗಿದೆ. ಭವಾನಿನಗರದಲ್ಲಿರುವ ಸೆಮಿನರಿಯಲ್ಲಿ ಡಿ.11ರಂದು ಕ್ರಿಸ್ಟೋಫರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. [ಆತ್ಮಹತ್ಯೆಗೆ ಯತ್ನಿಸುವುದು ಅಪರಾಧವಲ್ಲ]

ಕ್ರಿಸ್ಟೋಫರ್ ದಯಾನಂದ ಸಾಗರ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ತಿಳಿಸಿದ್ದಾರೆ. ಕ್ರಿಸ್ಟೋಫರ್ ತಾಯಿ ಬೆಂಗಳೂರಿನಲ್ಲಿಯೇ ವಾಸವಾಗಿದ್ದರು, ಮಗನನ್ನು ಸೆಮಿನರಿಗೆ ಸೇರಿಸಿದ್ದರು. [ಬೆಂಗಳೂರು : ಟೆಕ್ಕಿ ಹೈಡ್ರಾಮ, ಆತ್ಮಹತ್ಯೆ]
ಗುರವಾರ ಬೆಳಗ್ಗೆ 9 ಗಂಟೆಯ ನಂತರ ಕ್ರಿಸ್ಟೋಫರ್ ಸೆಮಿನರಿಯ ರೂಂನಿಂದ ಹೊರಗೆ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೈಕೋ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕ್ರಿಸ್ಟೋಫರ್ ರೂಂ ನಲ್ಲಿ ಡೆತ್‌ನೋಟ್ ಸಿಕ್ಕಿದ್ದು, ಆತ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದಾನೆ, ತಾಯಿಯ ಕ್ಷಮೆಯನ್ನು ಕೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕ್ರಿಸ್ಟೋಫರ್ ತೆಲಗು ನಟಿ ಕ್ಯಾಥರಿನ್ ತೇಸ್ರಾ ಅವರ ಸಹೋದರನಾಗಿದ್ದು, ಬೆಂಗಳೂರಿನಲ್ಲಿದ್ದ. ಕ್ಯಾಥರಿನ್ ತೇಸ್ರಾ ತಂದೆಯೊಂದಿಗೆ ಹೈದರಾಬಾದ್‌ನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications