ಹಂತಕರ ಗುಂಡಿಗೆ ಬಲಿಯಾದ ಗೌರಿಗೆ ಪ್ರತಿಷ್ಠಿತ ಪ್ರಶಸ್ತಿಯ ಗೌರವ

ಬೆಂಗಳೂರು, ಸೆಪ್ಟೆಂಬರ್ 07: ಹಂತಕರ ಗುಂಡಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ಫ್ರಾನ್ಸ್‌ ದೇಶದ ಪ್ರತಿಷ್ಠಿತ ಪ್ರಶಸ್ತಿ 'ಬೆಯುಕ್ಸ್‌-ಕಾಲ್ವೆಡಾಕ್ಸ್‌' ಗೌರವ ಸಲ್ಲಲಿದೆ.

ಯುದ್ಧದ ವರದಿ ಮಾಡುವ ವರದಿಗಾರರಿಗೆ ಕೊಡಲು ಪ್ರಾರಂಭಿಸಿದ್ದ ಈ ಪ್ರಶಸ್ತಿಯನ್ನು, ಗೌರಿ ಲಂಕೇಶ್ ಅವರು ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಹಾಗೂ ಮಹಿಳೆಯರ , ಅಲ್ಪಸಂಖ್ಯಾತರ ಹಕ್ಕುಗಳಿಗೆ ಮಾಡಿದ ಹೋರಾಟವನ್ನು ಗುರುತಿಸಿ ನೀಡಲಾಗುತ್ತಿದೆ.

1994 ರಿಂದಲೂ 'ಬೆಯುಕ್ಸ್‌-ಕಾಲ್ವೆಡಾಕ್ಸ್‌' ಪ್ರಶಸ್ತಿಯನ್ನು ಪತ್ರಕರ್ತರಿಗಾಗಿ ಆರ್‌ಎಸ್‌ಎಫ್‌ ಸಂಸ್ಥೆ ನೀಡುತ್ತಾ ಬರುತ್ತಿದೆ.

Bayeux-Calvados Awards to unveil memorial in honour of Gauri Lankesh

ಗೌರಿ ಲಂಕೇಶ್ ಮಾತ್ರವಲ್ಲದೆ 2017ರಲ್ಲಿ ಮೃತರಾದ 65 ಪತ್ರಕರ್ತರಿಗೆ ಈ ಗೌರವ ನೀಡುತ್ತಿದೆ. ರಿಪೋರ್ಟರ್ಸ್‌ ವಿದೌಟ್ ಬಾರ್ಡರ್ಸ್‌ (ಆರ್‌ಎಸ್‌ಎಫ್‌) ಸಂಸ್ಥೆ. ಆರ್‌ಎಸ್‌ಎಫ್‌ ಪ್ರಕಾರ ಕಳೆದ ವರ್ಷ ಜಗತ್ತಿನಾದ್ಯಂತ 65 ಪತ್ರಕರ್ತರು ಸಾವಿಗೀಡಾಗಿದ್ದಾರೆ. ಅಷ್ಟರಲ್ಲಿ 26 ಜನ ಕೆಲಸ ಮಾಡುವ ವೇಳೆಯಲ್ಲಿಯೇ ಮೃತರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+