• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸದನದಲ್ಲಿ ಮೊಬೈಲ್ ಫೋನ್ ಬ್ಯಾನ್ ಅತ್ಯಂತ ಕೆಟ್ಟ ಕ್ರಮ!

By Mahesh
|

ವಿಧಾನಸಭಾ ಅಧಿವೇಶನ ವೇಳೆ ಸದಸ್ಯರು ಮೊಬೈಲ್ ಬಳಸಿ ಸದನದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವ ಹಿನ್ನೆಲೆಯಲ್ಲಿ ಸದನದಲ್ಲಿ ಮೊಬೈಲ್ ಬಳಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿ ಬಂದಿದೆ.

ಈ ಬಗ್ಗೆ ಬಿಜೆಪಿ ಸರ್ಕಾರದ ಕಾಲದಿಂದಲೂ ಚರ್ಚೆ ನಡೆಯುತ್ತಲೇ ಇದೆ. ಅದರೆ, ಇದೇನಾದರೂ ಜಾರಿಗೆ ಬಂದರೆ ಮೂಲಭೂತವಾದಿಗಳ ಸರ್ಕಾರಕ್ಕೂ ನಮ್ಮ ಸರ್ಕಾರಕ್ಕೂ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. [ಅಧಿವೇಶನಕ್ಕೆ ಪ್ರಿಯಾಂಕಾ ಗಾಂಧಿ ಕರೆ ತಂದ 'ಪ್ರಭು']

ಬದಲಾಗುತ್ತಿರುವ ಜಗತ್ತಿನೊಡನೆ ನಾವು ಬದಲಾಗಬೇಕು ಎನ್ನುವ ಪ್ರಜ್ಞಾವಂತರ ನಡುವೆ ನಮ್ಮ ನಾಡಿನ ನಗರಗಳನ್ನು ಸಿಂಗಪುರದಂತೆ ಮಾಡಲು ವಿದೇಶಕ್ಕೆ ಅಧ್ಯಯನ ಪ್ರವಾಸಕ್ಕೆ ತೆರಳುವ ಶಾಸಕರು, ಸಚಿವರು ಸದನಕ್ಕೆ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ತರುವುದು ತಪ್ಪೇನಲ್ಲ.

ಪಕ್ಕದ ಸಣ್ಣ ಗಾತ್ರದ ರಾಜ್ಯ ಗೋವಾದಲ್ಲಿ ಮನೋಹರ್ ಪಾರಿಕ್ಕಾರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಈಗಿನ ಅಲ್ಲಿನ ಸರ್ಕಾರ ಪೇಪರ್ ಲೆಸ್ ಆಡಳಿತ(ಸದನ ಪೂರ್ತಿ ಸ್ಮಾರ್ಟ್)ದತ್ತ ದಾಪುಗಾಲಿರಿಸಿದೆ. ಕಾಗದ ಬಳಕೆ ನಿಯಂತ್ರಿಸಿ ಎಲ್ಲರೂ ಮೊಬೈಲ್, ಟ್ಯಾಬ್ಲೆಟ್ ಹಿಡಿದು ಪ್ರಶ್ನೆ ಕೇಳುತ್ತಾ ಅದಕ್ಕೆ ತಕ್ಕ ಪ್ರತಿಕ್ರಿಯೆಗಳನ್ನು ಗೂಗಲ್ ನಿಂದ ಹೆಕ್ಕಿ ತಕ್ಷಣಕ್ಕೆ ತೋರಿಸಬಲ್ಲ ಜಾಣ್ಮೆ ಬೆಳೆಸಿಕೊಳ್ಳುತ್ತಿದ್ದಾರೆ.

ಎಂ ಆಡಳಿತ ಜಾರಿಗೆ ತಂದ ಸಿದ್ದರಾಮಯ್ಯನವರನ್ನು ಇಡೀ ವಿಶ್ವವೇ ಹಾಡಿ ಹೊಗಳುತ್ತಿದ್ದೆ ಅದರೆ, ಸದನದಲ್ಲಿ ಮಾತ್ರ ಇನ್ನೂ ಇನ್ನೂ ಅನಾದಿ ಕಾಲದ ಆಡಳಿತವೇ ಜಾರಿಯಲ್ಲಿದೆ. ನಮ್ಮ ಸದನ ಸ್ಮಾರ್ಟ್ ಆಗುವುದು ಯಾವಾಗ?

ಒಬ್ಬ ಶಾಸಕ ಮಾಡಿದ ತಪ್ಪಿಗೆ ಇಡೀ ಪಕ್ಷ ಅಥವಾ ಸದನದ ಸದಸ್ಯರನ್ನೇ ದೂರುವುದು ಎಷ್ಟು ಸರಿ? ಒಂದೆರಡು ದಿನದ ಅಮಾನತು ಮಾಡಿದರೆ ಏನು ಪ್ರಯೋಜನ? ಮೊಬೈಲ್ ಬಳಕೆ ಬಗ್ಗೆ ಇರುವ ಅಜ್ಞಾನ ಮುಂದುವರೆಯದೆ ಇರಲು ಸಾಧ್ಯವೇ? ಅಶ್ಲೀಲ ಸೈಟ್ ವೀಕ್ಷಣೆ ಬಗ್ಗೆ ಕಾನೂನಿನ ಕಣ್ಣಷ್ಟೇ ಅಲ್ಲ ಕೈ ಕೂಡಾ ಕಟ್ಟಿ ಹಾಕಲಾಗಿದೆ...

ಇಷ್ಟಕ್ಕೂ ದೇಶದ ಕಾನೂನು ಇರುವುದೇ ಹಾಗೆ

ಇಷ್ಟಕ್ಕೂ ದೇಶದ ಕಾನೂನು ಇರುವುದೇ ಹಾಗೆ

ಇಷ್ಟಕ್ಕೂ ದೇಶದ ಕಾನೂನು ಇರುವುದೇ ಹಾಗೆ ಕಪ್ಪು ಪರದೆ ಇರುವ ಬಸ್ ನಲ್ಲಿ ರೇಪ್ ನಡೆದರೆ ದೇಶದೆಲ್ಲೆಡೆ ಕಾರು ಬಸ್ ಗಳ ಕಿಟಕಿಯ ಪರದೆ ತೆಗೆಸಲಾಯಿತು.

ಒಬ್ಬ ಟ್ಯಾಕ್ಸಿ ಚಾಲಕ ಮಾಡಿದ ಅನಾಹುತಕ್ಕೆ ಇಡೀ ದೇಶದಲ್ಲೇ ಆನ್ ಲೈನ್ ಬುಕ್ಕಿಂಗ್ ಟ್ಯಾಕ್ಸಿ ಸೇವೆಗೆ ಕುತ್ತುಂಟಾಗಿದೆ. ಅಪರಾಧಿಗಳನ್ನು ಶಿಕ್ಷಿಸಬೇಕಿರುವ ಕಾನೂನು ದೇಶದ ಜನತೆಗೇಕೆ ಈ ರೀತಿ ಶಿಕ್ಷೆ ನೀಡುತ್ತಿದೆ. ಬೇಡದ ಕಾನೂನುಗಳನ್ನು ತೆಗೆದು ಹಾಕಲು ಮುಂದಾಗಿರುವ ಮೋದಿ ಸರ್ಕಾರ ಇರುವ ಕಾನೂನಿನ ಹುಳುಕನ್ನು ಮೊದಲು ಸರಿಪಡಿಸಿದರೆ ಒಳ್ಳೆಯದು.

ಸದನದಲ್ಲಿ ಅಸಭ್ಯ ವರ್ತನೆ ಇದೇ ಮೊದಲಲ್ಲ

ಸದನದಲ್ಲಿ ಅಸಭ್ಯ ವರ್ತನೆ ಇದೇ ಮೊದಲಲ್ಲ

ಬೆಳಗಾವಿಯ ಸುವರ್ಣ ಸೌಧದಲ್ಲಿ ಬೀದರ್ ಜಿಲ್ಲೆಯ ಔರಾದ್ ಬಿಜೆಪಿ ಶಾಸಕ ಪ್ರಭು ಚವ್ಹಾಣ್, ಹಿರೇಕೆರೂರಿನ ಶಾಸಕ ಬಣಕಾರ್ ಅಷ್ಟೇ ಅಲ್ಲ ಕಾಂಗ್ರೆಸ್‌ನ ಎಸ್.ಎಸ್.ಮಲ್ಲಿಕಾರ್ಜುನ್, ಸಚಿವರಾದ ಅಂಬರೀಶ್ ಅವರು ಸದನ ನಡೆಯುವಾಗ ಮೊಬೈಲ್‌ನಲ್ಲಿ ತಲ್ಲೀನರಾಗಿದ್ದರು.

ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವರಾಗಿದ್ದ ಲಕ್ಷ್ಮಣ ಸವದಿ, ಕೃಷ್ಣ ಪಾಲೆಮರ್, ಸಿ.ಸಿ.ಪಾಟೀಲ್ ಅವರು ಸದನದಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿ ಸಚಿವ ಸ್ಥಾನವನ್ನೇ ಕಳೆದುಕೊಳ್ಳಬೇಕಾಯಿತು. ಅದರೆ, ನಂತರ ಸಿಐಡಿ, ಸಿಬಿಐ ತನಿಖೆ ನಡೆದರೂ ಎಲ್ಲರಿಗೂ ಕ್ಲೀನ್ ಚಿಟ್ ಸಿಕ್ಕಿತ್ತು.

ಈ ಕಾಯಿಲೆ ಅಸೆಂಬ್ಲಿ ದಾಟಿ ಸರ್ಕಾರಿ ಕಚೇರಿಗೂ ಹಬ್ಬಿದೆ

ಈ ಕಾಯಿಲೆ ಅಸೆಂಬ್ಲಿ ದಾಟಿ ಸರ್ಕಾರಿ ಕಚೇರಿಗೂ ಹಬ್ಬಿದೆ

ಕರ್ನಾಟಕದಲ್ಲೂ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗತೊಡಗಿದಾಗ ಸೈಬರ್ ಪರಿಣತರು ಸರಕಾರಿ ಕಚೇರಿಗಳಲ್ಲಿರುವ ಕಂಪ್ಯೂಟರುಗಳ ಮೇಲೆ ಒಂದು ಕಣ್ಣಿಟ್ಟರು. ಆಗ ಬೆತ್ತಲೆ ಜಗತ್ತು ಅನಾವರಣಗೊಂಡಿತ್ತು.

ಸಾಮಾನ್ಯವಾಗಿ ಕಂಪ್ಯೂಟರ್ ಗಳಲ್ಲಿ ಅಳವಡಿಸಲಾಗುವ Anti ವೈರಸ್, ಫೈರ್ ವಾಲ್ ಗಳೇ ಇಲ್ಲದ ಸರ್ಕಾರೈ ಕಚೇರಿ ಗಣಕಗಳಲ್ಲಿ ಎಗ್ಗಿಲ್ಲದೆ ನಿತ್ಯ ಕಾಮ ತಾಣಗಳ ಭೇಟಿ ಮುಂದುವರೆದಿದೆ ಎಂಬ ವಿಷಯ ಬೇಡದಿದ್ದರೂ ಜನಪ್ರತಿನಿಧಿಗಳ ಕಿವಿಗೆ ತನಿಖಾ ತಂಡ ಹಾಕಿದ್ದರು.

ಸರಕಾರಿ ಉದ್ಯೋಗಿಗಳು ಕಡಿವಾಣ ಇಲ್ಲದೆ ಏನು ಬೇಕಾದರೂ ವೀಕ್ಷಿಸುವ ಅವಕಾಶ ಪಡೆದಿರುವುದು ಗೊತ್ತಿದ್ದರೂ ಅಗತ್ಯ ಕ್ರಮ ಕೈಗೊಳ್ಳದ ಮೇಲೆ ಸದನದಲ್ಲಿ ಜಾಮರ್ ಆಳವಡಿಸಲಾಗಿದೆ ಎಂಬ ಉತ್ತರ ಕ್ಲೀಷೆಯಾಗಿಬಿಟ್ಟಿದೆ.

ಕಾನೂನು ಏನು ಹೇಳುತ್ತದೆ

ಕಾನೂನು ಏನು ಹೇಳುತ್ತದೆ

ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಖಾಸಗಿ ಕಂಪ್ಯೂಟರಿನಲ್ಲಿ ಅಶ್ಲೀಲ ಸರಕನ್ನು ಅವರವರ ಇಚ್ಛಾನುಸಾರ ನೋಡಬಹುದು. ಆದರೆ ಸಾರ್ವಜನಿಕವಾಗಿ ಅಥವಾ ಸರಕಾರಿ ಕಂಪ್ಯೂಟರುಗಳಲ್ಲಿ ಇಂಥದಕ್ಕೆ ಅವಕಾಶವೇ ಇಲ್ಲ. ಒಂದು ವೇಳೆ ಹಾಗೆ ನೋಡಿದ್ದೇ ಆದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ.

ಈಗ ಪ್ರಭು ಚವಾಣ್ ಅಥವಾ ಕ್ಯಾಂಡಿ ಕ್ರಷ್ ಬಣಕಾರ್ ವಿಷಯಕ್ಕೆ ಬಂದರೆ ಅವರೇನು ಅಶ್ಲೀಲ ಸೈಟ್ ನೋಡುತ್ತಿರಲಿಲ್ಲ ಎಂಬ ವಾದ ನಿಲ್ಲುತ್ತದೆ. ಇದೇ ರೀತಿ ಕಾಂಗ್ರೆಸ್ ಶಾಸಕರೂ ಬಚಾವಾಗುತ್ತಾರೆ. ಆದರೆ, ಇದೆಲ್ಲವೂ ನೈತಿಕತೆ ಅಥವಾ ವೈಯಕ್ತಿಕ ಪ್ರಜ್ಞೆಗೆ ಸಂಬಂಧಿಸಿದ ವಿಷಯವಾಗಿದ್ದು ಈ ಬಗ್ಗೆ ನಮ್ಮ ಶಾಸಕರಿಂದ ಹೆಚ್ಚು ನಿರೀಕ್ಷಿಸುವಂತಿಲ್ಲ.

ಐಟಿ ಕಾಯ್ದೆ As per the Section 67

ಐಟಿ ಕಾಯ್ದೆ As per the Section 67

Whoever publishes or transmits or causes to be published in electronic form any material which is lascivious or appeals to the prurient interest, or if its effect is such as to tend to deprave and corrupt persons who are likely... to read, see or hear the matter contained or embodied in it, shall be punished on first conviction with imprisonment of either description for a term which may extend to five years and with fine which may extend to Rs 1 lakh.

In the event of a second or subsequent conviction, with imprisonment of either description for a term which may extend to ten years and also with fine which may extend to Rs 2 lakh.

ಮಾಹಿತಿ ಕೃಪೆ : http://cybercrimeindia.org/pornography.php

ಏನು ಕ್ರಮ ಜರುಗಿಸಬಹುದು?

ಏನು ಕ್ರಮ ಜರುಗಿಸಬಹುದು?

ಅನೇಕ ಖಾಸಗಿ ಕಂಪನಿಗಳು ಗುಪ್ತವಾಗಿ ಇಂಥ ಪ್ರವೃತ್ತಿಯನ್ನು ಪತ್ತೆಹಚ್ಚಿ ತಮ್ಮ ನೌಕರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದುಂಟು. ಇಲ್ಲವಾದರೆ ಆ ರಗಳೆಯೇ ಬೇಡ ಎಂದು ಪೋರ್ನ್ ಸೈಟುಗಳನ್ನು filter - firewalls ಮೂಲಕ ಬ್ಲಾಕ್ ಮಾಡಬಹುದು. ಮೊಬೈಲ್ ಜಾಮರ್ ಅಳವಡಿಸಬಹುದು. ಮೊಬೈಲ್ ಬಳಕೆ ಬಗ್ಗೆ ಪಾಠ ಮಾಡಬಹುದು.

ಐಪಿ ಅಡ್ರೆಸ್ ಆಧಾರದ ಮೇಲೆ ಆಯಾ ಕಂಪ್ಯೂಟರ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಬಳಕೆದಾರರಿಗೆ ಎಚ್ಚರಿಕೆ ಸಂದೇಶ ಕಳಿಸಬಹುದು. ಆದರೆ, ಸರಕಾರಿ ಕಚೇರಿಗಳಲ್ಲಿ ಇನ್ನೂ ಅಂಥ ಕ್ರಮಗಳನ್ನು ಕೈಗೊಂಡಿಲ್ಲ. ಕೈಗೊಂಡರೂ ಹೆಚ್ಚು ದಿನ ಉಳಿಯುವ ಸಾಧ್ಯತೆಯೂ ಇಲ್ಲ ಎಂ ಆಡಳಿತ, ಇ ಆಡಳಿತ ಎಲ್ಲವೂ ಹೆಸರಿಗಷ್ಟೆ

ಐಟಿ ಕಾಯ್ದೆ As per the Section 66 A

ಐಟಿ ಕಾಯ್ದೆ As per the Section 66 A

ಮಾಹಿತಿ ತಂತ್ರಜ್ಞಾನ ಕಾಯ್ದೆ 66ಎ ಅನ್ವಯ ಸಾಮಾಜಿಕ ಜಾಲ ತಾಣದಲ್ಲಿ ಅಶ್ಲೀಲ ಪೋಸ್ಟ್ ಹಾಕುವುದು, ಹಂಚುವವರನ್ನು ಬಂಧಿಸಲು ಪೊಲೀಸರಿಗೆ ಅಧಿಕಾರ ನೀಡುತ್ತದೆ. ಅದರೆ, ನೋಡುವುದರ ಬಗ್ಗೆ ಏನು ಉಲ್ಲೇಖವಿಲ್ಲ.

ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಮೂಲಕ ಪ್ರಚೋದನಾಕಾರಿ ಸಂದೇಶ ರವಾನೆ ಶಿಕ್ಷಾರ್ಹವಾಗಿದ್ದು, ಮೂರು ವರ್ಷ ಜೈಲು ಹಾಗೂ ದಂಡಕ್ಕೆ ಆಹ್ವಾನ ನೀಡಿದ್ದಂತಾಗುತ್ತದೆ.

2008ರ ಲೋನಾವಾಲದ ಬಂಗಲೆಯಲ್ಲಿ ಕಸ್ಟಮ್ ಅಧಿಕಾರಿಗಳನ್ನು ಪೋರ್ನ್ ಸಿನ್ಮಾ ನೋಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಅದರೆ. ಬಾಂಬೆ ಹೈಕೋರ್ಟ್ ಜಸ್ಟೀಸ್ ವಿಜಯ ಕಾಪ್ಸೆ ಹಾಗೂ ತಾಹಿಲ್ರಮಣಿ ಅವರು ಆರೋಪಿಗಳನ್ನು ನಿರ್ದೋಷಿಗಳೆಂದು ತೀರ್ಪು ನೀಡಿದರು.

ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಸಂದೇಶ ನೋಡುವುದು ಓದುವುದು, ಹಂಚುವುದು ಮಾತ್ರ ಅಪರಾಧ ಎಂದು ಕಾನೂನು ಹೇಳುತ್ತದೆ ಎಂದು ಆದೇಶದಲ್ಲಿ ಐಟಿ ಕಾಯ್ದೆಗಳ ಹಲವು ಸೆಕ್ಷನ್ ಗಳನ್ನು ಉಲ್ಲೇಖಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Banning the Use of mobile phones is inside Assembly Hall is not a solution won't solve the problem. Aurad MLA Chavan was caught on camera using his mobile phone now he is punished. Here is a look at the IT Law and the shameful incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more