ಬನ್ನೇರುಘಟ್ಟ ಉದ್ಯಾನದ ಶುಲ್ಕ ಏರಿಕೆ, ದರ ಪಟ್ಟಿ

ಬೆಂಗಳೂರು, ಡಿಸೆಂಬರ್ 29; ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. ಝೂ, ಸಫಾರಿ, ಬಟರ್ ಫ್ಲೈ ಪಾರ್ಕ್ ದರಗಳು ಪರಿಷ್ಕರಣೆಗೊಂಡಿದ್ದು, ಹೊಸ ದರ ಜನವರಿ 1 ರಿಂದ ಜಾರಿಗೆ ಬರಲಿದೆ.

ಬುಧವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಹೊಸ ದರಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೋಮವಾರದಿಂದ ಶುಕ್ರವಾರ, ವಾರಾತ್ಯ ಮತ್ತು ಸರ್ಕಾರಿ ರಜೆ ದಿನಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ದರಗಳು 2022ರ ಜನವರಿ 1 ರಿಂದ ಜಾರಿಗೆ ಬರಲಿವೆ. ಹೊಸ ವರ್ಷದಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಹೋಗುವ ಪ್ರವಾಸಿಗರು ಹೊಸ ಶುಲ್ಕವನ್ನು ಪಾವತಿ ಮಾಡಬೇಕಿದೆ.

Bannerghatta National Park Hikes Entry Fee Effect From January 1

ದರಗಳ ಪಟ್ಟಿ ಹೀಗಿದೆ; ನಾನ್ ಎಸಿ ಬಸ್ ಸಫಾರಿ ಸೋಮವಾರದಿಂದ ಶುಕ್ರವಾರ ವಯಸ್ಕರಿಗೆ 330 ರೂ. (300 ರೂ. ಪ್ರಸ್ತುತ ದರ), ಮಕ್ಕಳಿಗೆ 180 ರೂ. (150 ರೂ. ಪ್ರಸ್ತುತ ದರ) ಮತ್ತು ಹಿರಿಯ ನಾಗರಿಕರಿಗೆ 230 ರೂ.ಗಳು (200 ಪ್ರಸ್ತುತ ದರ).

ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 380 ರೂ. (350 ಪ್ರಸ್ತುತ ದರ), ಮಕ್ಕಳು 230 ರೂ. (200 ರೂ. ಪ್ರಸ್ತುತ ದರ), ಹಿರಿಯ ನಾಗರಿಕರು 280 ರೂ. ಗಳು (250 ರೂ. ಪ್ರಸ್ತುತ ದರ).

ವಿದೇಶಿ ಪ್ರವಾಸಿಗರು; ಸೋಮವಾರದಿಂದ ಶುಕ್ರವಾರದ ತನಕ ವಿದೇಶಿ ಪ್ರವಾಸಿಗರಿಗೆ ವಯಸ್ಕರಿಗೆ 500 ರೂ. ಇದ್ದ ದರ 530 ರೂ.ಗೆ ಕ್ಕೆ ಏರಿಕೆಯಾಗಿದೆ. ಮಕ್ಕಳಿಗೆ 400 ರೂ. ಇದ್ದ ದರ 430 ರೂ.ಗೆ ಏರಿಕೆಯಾಗಿದೆ. ಶನಿವಾರ, ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ವಯಸ್ಕರಿಗೆ 500 ರೂ. ಇದ್ದ ದರ 530 ರೂ.ಗೆ ಏರಿಕೆಯಾಗಿದೆ. ಮಕ್ಕಳಿಗೆ 400 ರೂ. ಇದ್ದ ದರ 430 ರೂ.ಗೆ ಏರಿಕೆಯಾಗಿದೆ.

ಜೀಪ್ ಸಫಾರಿ (ಝೂ+ ಸಫಾರಿ + ಚಿಟ್ಟೆ ಪಾರ್ಕ + ಕ್ಯಾಮರಾ); 6 ಸೀಟರ್ ನಾನ್ ಎಸಿ ಜೀಪ್. ಸೋಮವಾರದಿಂದ ಶುಕ್ರವಾರ 3500 ರೂ. (ಪ್ರಸ್ತುತ ದರ 3500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 3800 ರೂ. (3500 ರೂ. ಪ್ರಸ್ತುತ ದರ).

6 ಸೀಟರ್ ಎಸಿ ಜೀಪ್: ಸೋಮವಾರದಿಂದ ಶುಕ್ರವಾರ 4000 ರೂ. (ಪ್ರಸ್ತುತ ದರ 4000 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 4300 ರೂ. (4000 ರೂ. ಪ್ರಸ್ತುತ ದರ).

6 ಸೀಟರ್ Xylo; ಸೋಮವಾರದಿಂದ ಶುಕ್ರವಾರ 4500 ರೂ. (ಪ್ರಸ್ತುತ ದರ 4500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 5000 ರೂ. (4500 ರೂ. ಪ್ರಸ್ತುತ ದರ).

8 ಸೀಟರ್ ನಾನ್ ಎಸಿ ಜೀಪ್; ಸೋಮವಾರದಿಂದ ಶುಕ್ರವಾರ 4500 ರೂ. (ಪ್ರಸ್ತುತ ದರ 4500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 5000 ರೂ. (4500 ರೂ. ಪ್ರಸ್ತುತ ದರ).

7 ಸೀಟರ್ ಇನ್ನೋವಾ; ಸೋಮವಾರದಿಂದ ಶುಕ್ರವಾರ 5500 ರೂ. (ಪ್ರಸ್ತುತ ದರ 5,500 ರೂ., ಶನಿವಾರ & ಭಾನುವಾರ, ಸರ್ಕಾರಿ ರಜೆ ದಿನ 6000 ರೂ. (5,500 ರೂ. ಪ್ರಸ್ತುತ ದರ).

ಬನ್ನೇರುಘಟ್ಟ ಬೆಂಗಳೂರು ನಗರದಕ್ಕೆ ಹತ್ತಿರದಲ್ಲಿರುವ ಪ್ರಮುಖ ಪ್ರವಾಸಿ ತಾಣ. ವಾರಾಂತ್ಯ ಮತ್ತು ಸರ್ಕಾರಿ ರಜೆ ದಿನಗಳಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ಸಫಾರಿ ಮಾಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+