ಬ್ಯಾಂಕ್ ಗಳಿಗೆ ಯುಗಾದಿ ಹಬ್ಬದ ರಜೆ ಇಲ್ಲ

ಬೆಂಗಳೂರು, ಮಾ.28 : ಶನಿವಾರ, ಭಾನುವಾರ ಸಾಲು-ಸಾಲು ರಜೆ ಬಂತು. ವರ್ಷಾಂತ್ಯ ಬೇರೆ ತೆರಿಗೆ ಪಾವತಿ ಮಾಡುವುದು ಹೇಗೆ? ಎಂದು ಜನರು ಚಿಂತಿಸುವ ಅಗತ್ಯವಿಲ್ಲ. ಗ್ರಾಹಕರ ಅನುಕೂಲಕ್ಕಾಗಿ ಶನಿವಾರ, ಭಾನುವಾರ ಮತ್ತು ಸೋಮವಾರ ಬ್ಯಾಂಕ್ ಗಳು ಕಾರ್ಯನಿರ್ವಹಿಸಲಿವೆ. ಮೂರು ದಿನವೂ ಬ್ಯಾಂಕುಗಳು ಕಾರ್ಯನಿರ್ವಹಿಸುವ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

ವರ್ಷಾಂತ್ಯದಲ್ಲಿ ಜನರಿಗೆ ತೆರಿಗೆ ಪಾವತಿ ಮಾಡಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಮಾ.29ರ ಶನಿವಾರ, ಮಾ.30ರ ಭಾನುವಾರ ಮತ್ತು ಯುಗಾದಿ ಹಬ್ಬವಿರುವ ಮಾ.31ರ ಸೋಮವಾರ ಸಹ ಎಂದಿನಂತೆ ತೆರೆದಿರುತ್ತವೆ ಮತ್ತು ಹೆಚ್ಚುವರಿ ಸಮಯದ ತನಕ ಕಾರ್ಯನಿರ್ವಹಿಸಲಿವೆ.

Bank

ಶನಿವಾರದಂದು ರಾತ್ರಿ 8 ಗಂಟೆಯ ತನಕ ಮತ್ತು ಭಾನುವಾರ ಸಂಜೆ 5 ಗಂಟೆಯ ತನಕ ಮತ್ತು ಸೋಮವಾರ ರಾತ್ರಿ 8 ಗಂಟೆಯ ತನಕ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಆದ್ದರಿಂದ ಬ್ಯಾಂಕಿನ ಕೆಲಸವಿರುವ ಜನರು ಮೂರು ದಿನಗಳಲ್ಲಿ ತಮ್ಮ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ. ಮಾರ್ಚ್ 31ರಂದು ರಜೆ ಘೋಷಿಸದ ಬ್ಯಾಂಕ್ ಗಳಿಗೆ ಈ ನಿಯಮ ಅನ್ವಯಿಸುತ್ತದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ಎಸ್ ಬಿಐ ಜಾಹೀರಾತು : ಭಾರತೀಯ ಸ್ಟೇಟ್ ಬ್ಯಾಂಕ್ ಈಗಾಗಲೇ ಮಾ.29, 30, 31ರಂದು ಸರ್ಕಾರಿ ವಹಿವಾಟಗಳನ್ನು ನಿರ್ವಹಿಸಲು ಶಾಖೆಗಳು ತೆರೆದಿರುತ್ತವೆ ಎಂದು ಜಾಹೀರಾತು ನೀಡಿದೆ. ಗ್ರಾಹಕರು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದೆ. [ಯುಗಾದಿ : ಹೊಸವರ್ಷಕ್ಕೆ ನಿಮ್ಮ ನಿರೀಕ್ಷೆ ಏನು? ಮತ ನೀಡಿ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+